ಮಹಾಲಿಂಗಪುರ 27: ಸಮೀಪದ ಸೈದಾಪುರ ಗ್ರಾಪಂ ವ್ಯಾಪ್ತಿಯ ಸಮೀರವಾಡಿ ಬಡಾವಣೆಯ ಮುನ್ಯಾಳ ಕೆನಾಲ್ ಬಳಿ ಇರುವ ಹಿಂದೂ ರುದ್ರಭೂಮಿಯಲ್ಲಿ ನೂತನವಾಗಿ ನಿರ್ಮಿಸಲಾದ ಶಿವಮಂದಿರದಲ್ಲಿ ಬಸವಣ್ಣನ ಸೇವಾ ಸಮಿತಿಯವರು ವಿಶೇಷ ಏಕಾದಶಿ ಪೂಜೆ ಹಮ್ಮಿಕೊಂಡರು. ಶಾಸ್ತ್ರೋಕ್ತವಾಗಿ ಶಿವಲಿಂಗಕ್ಕೆ ರುದ್ರಾಭಿಷೇಕ ಮಾಡಿಸಿದರು. ಗ್ರಾಪಂ ಅಧ್ಯಕ್ಷ ಮಹಾಲಿಂಗಪ್ಪ ಸನದಿ ದಂಪತಿ ಸೇರಿ ಶಿವಲಿಂಗ ತೊಳೆದು, ಪೂಜೆ ಮಾಡಿ ಅಭಿಷೇಕ ಮಾಡಿದರು.
ಇತ್ತೀಚೆಗೆ ಸ್ಮಶಾನದ ಆವರಣದಲ್ಲಿ ಸಮಿತಿಯವರು ಸ್ವಚ್ಛತಾ ಅಭಿಯಾನ ಹಮ್ಮಿಕೊಂಡು ಅಂದಾಜು 2.70 ಲಕ್ಷ ವೆಚ್ಚದಲ್ಲಿ ನೂತನ ಈಶ್ವರಲಿಂಗ ಪ್ರತಿಷ್ಠಾಪಿಸಿ, ಅದಕ್ಕೊಂದು ಕುಟೀರ ನಿರ್ಮಿಸಿದ್ದರು. ಅರ್ಧ ಖರ್ಚು ಗ್ರಾಪಂ ಅಧ್ಯಕ್ಷರೇ ಭರಿಸಿದರೆ ಉಳಿದರ್ಧ ವೆಚ್ಚ ಗ್ರಾಮಸ್ಥರ ದೇಣಿಗೆಯಿಂದ ಸಂಗ್ರಹಿಸಲಾಗಿತ್ತು. ನಂದನವನವಾಗಿ ಕಂಗೊಳಿಸುವಂತೆ ಮಾಡಿದ ಶಿವವೃಂದಾವನದಲ್ಲಿ ಶಿವರಾತ್ರಿಯಂದು ಏಕಾದಶಿ ನಿಮಿತ್ತ ಪೂಜೆ, ಅಭಿಷೇಕ ಹಮ್ಮಿಕೊಳ್ಳಲಾಗಿತ್ತು. ನಿವೃತ್ತ ಕಾರ್ಮಿಕ ಕಳೆದ ಒಂದು ವರ್ಷದಿಂದ ನಿತ್ಯ ಇಡೀ ದಿನ ಸ್ಮಶಾನದಲ್ಲೇ ಇದ್ದು ಉಚಿತವಾಗಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಯಮನಪ್ಪ ಮಾದರ ಅವರಿಗೆ ಸನ್ಮಾನಿಸಲಾಯಿತು. ಉಪನ್ಯಾಸಕ ಶಿವಲಿಂಗ ಸಿದ್ನಾಳ ಅವರನ್ನು ಸನ್ಮಾನಿಸಿದರು. ಸೇರಿದ ಎಲ್ಲ ಭಕ್ತರಿಗೂ ಪಂಚಾಮೃತ ಅಭಿಷೇಕ, ಶೇಂಗಾ, ಬಾಳೆ ಹಣ್ಣು, ಕರ್ಜೂರ ಪ್ರಸಾದ ವಿತರಿಸಲಾಯಿತು.
ಗ್ರಾಪಂ ಅಧ್ಯಕ್ಷ ಮಹಾಲಿಂಗಪ್ಪ ಸನದಿ, ಸ್ನೇಹಾ ಸನದಿ, ವಿಜಿ.ಮುದ್ದಾಪೂರ, ಮುಕುಂದ ಪವಾರ, ಬಶೆಟ್ಟಿ ಅಮರಶೆಟ್ಟಿ, ವಿಶಾಲ ತೆಗ್ಗಳ್ಳಿ, ಮಲ್ಲಗೌಡ ಪಾಟೀಲ, ಗೌಡಪ್ಪಗೌಡ ಪಾಟೀಲ, ಕಲ್ಲಪ್ಪ ಮಲಕಾಪೂರ, ಚಿನ್ನಪ್ಪ ಬಾಯಪ್ಪಗೋಳ, ಪಡೆಪ್ಪ ಉಪ್ಪಾರ, ಯಮನಪ್ಪ ಉಪ್ಪಾರ, ಬಸವರಾಜ ಉದಗಟ್ಟಿ, ಶಿವಲಿಂಗ ಕುರಿ, ಕವಿತಾ ಮಡಿವಾಳ, ತುಳಸವ್ವ ಲಮಾಣಿ, ರಾಜು ಮುರ್ಚಟ್ಟಿ, ಮಹಾಲಿಂಗ ಮುಗಳಖೋಡ, ಗಂಗಪ್ಪ ಕುರನಿಂಗ, ಅರ್ಚಕ ಕಲ್ಲಯ್ಯ ಹಿರೇಮಠ, ಆನಂದ ಬನಹಟ್ಟಿ ಹಾಗೂ ಬನಹಟ್ಟಿ ಸಹೋದರರು ಸೇರಿದಂತೆ ನೂರಾರು ಜನ ಭಾಗವಹಿಸಿದ್ದರು.