ಶಿವರಾತ್ರಿ: ಪಟ್ಟಣದಲ್ಲಿ ವಿವಿಧ ಕಾರ್ಯಕ್ರಮಗಳು

Shivratri: Various events in town

ಶಿವರಾತ್ರಿ: ಪಟ್ಟಣದಲ್ಲಿ ವಿವಿಧ ಕಾರ್ಯಕ್ರಮಗಳು  

ತಾಳಿಕೋಟಿ 28: ಪಟ್ಟಣದಲ್ಲಿ ಶಿವರಾತ್ರಿ ಹಬ್ಬದ ಪ್ರಯುಕ್ತ ಬುಧವಾರದಂದು ಶಿವನ ಆರಾಧನೆ ಕಾರ್ಯಕ್ರಮ ವಿವಿಧೆಡೆ ಭಕ್ತಿ, ಶ್ರದ್ಧೆಗಳಿಂದ ನಡೆದವು. ಶಿವಭಕ್ತರೆಲ್ಲ ಬೆಳಗಿಂದಲೇ ಮಡಿಯುಟ್ಟು ಶಿವನ ಸ್ಮರಣೆಯಲ್ಲಿ ಉಪವಾಸ ವ್ರತಾಚರಣೆ ಮಾಡಿದರು. ಸಂಜೆಗೆ ಲಿಂಗಪೂಜೆ ಮಾಡಿ ಉಪವಾಸ ವ್ರತವನ್ನು ಬಿಡಲಾಯಿತು.ವಿವಿಧ ದೇವಸ್ಥಾನಗಳಲ್ಲಿ ಬೆಳಿಗ್ಗೆಯಿಂದಲೇ ರುದ್ರಾಭಿಷೇಕ ಸೇರಿದಂತೆ ವಿವಿಧ ಪೂಜಾ ಕಾರ್ಯಕ್ರಮಗಳು ಜರುಗಿದವು.  ಪಟ್ಟಣದ ಖಾಸ್ಗತೇಶ್ವರ ಮಠದಲ್ಲಿ ಭಕ್ತರ ದಂಡು ತುಂಬಿಕೊಂಡಿತ್ತು.  

ಆಡಳಿತಾಧಿಕಾರಿ ಮುರುಗೇಶ ವಿರಕ್ತಮಠ, ವಿಶ್ವನಾಥ ವಿರಕ್ತಮಠ ಹಾಗೂ ಭಕ್ತಾದಿಗಳಿದ್ದರು. ಪಟ್ಟಣದ ಗ್ರಾಮದೇವತೆ ದೇವಸ್ಥಾನ, ಬಜಾರ ಬಸವೇಶ್ವರ ದೇವಸ್ಥಾನ, ಸಾಂಭಪ್ರಭು ಶರಣಮುತ್ಯಾನ ದೇವಸ್ಥಾನ, ರಾಜವಾಡೆಯ ಮಹಾದೇವನ ದೇವಸ್ಥಾನ, ಅನಂತಪುರ ಪೇಟೆಯ ಮಲ್ಲಯ್ಯನ ದೇವಸ್ಥಾನ ಮೊದಲಾದೆಡೆ ವಿಶೇಷ ಪೂಜೆ ಸಲ್ಲಿಸಿದರು. ಪಟ್ಟಣದ ಡೋಣಿ ನದಿ ದಂಡೆಯಲ್ಲಿರುವ ಪುರಾತನ ಸಿದ್ಧಲಿಂಗೇಶ್ವರ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ, ಸಂಜೆಗೆ ಪ್ರಸಾದ ವ್ಯವಸ್ಥೆ, ಹಾಗೂ ಅಹೋರಾತ್ರಿ ಭಜನಾ ವ್ಯವಸ್ಥೆ ಮಾಡಿದ್ದರು. ವಿಜಯಪುರ ರಸ್ತೆಯಲ್ಲಿ ಪರೂತಮಲ್ಲಯ್ಯನ ದೇವಸ್ಥಾನದಲ್ಲಿ ಬೆಳಿಗ್ಗೆ ವಿಶೇಷ ಪೂಜೆ ನೆರವೇರಿತು.  

ಭಕ್ತಾದಿಗಳಿಗೆ ಸಾಯಂಕಾಲ ಉಪವಾಸ ಬಿಡಲು ಅಗತ್ಯ ಫಲಾಹಾರ ವ್ಯವಸ್ಥೆ ಮಾಡಲಾಗಿತ್ತು.  ಶ್ರೀ ಸಾಯಿ ಸದಾನಂದ ಆಶ್ರಮದಲ್ಲಿ ಶ್ರೀ ಸಾಯಿ ಅನ್ನಪೂರ್ಣೇಶ್ವರಿ ಭಜನಾ ಮಂಡಳಿವತಿಯಿಂದ ಸಾಯಿಮಂದಿರ ಆಶ್ರಮದಲ್ಲಿ ಬೆಳಿಗ್ಗೆ ಸಾಯಿಬಾಬಾರ ಮಹಾಮೂರ್ತಿಗೆ ವಿಶೇಷ ಅಭಿಷೇಕ, ಭಜನೆ ಮತ್ತು ಮಹಾಪ್ರಸಾದ ವಿತರಣೆ ಜರುಗಿತು. ಹಳೆ ಹುಡ್ಕೊ ಕಾಲನಿಯಲ್ಲಿರುವ ಶಿವಶರಣೆ ಹೇಮರಡ್ಡಿ ಮಲ್ಲಮ್ಮನ ದೇವಸ್ಥಾನದಲ್ಲಿ ಬೆಳಿಗ್ಗೆ ಸಾಮೂಹಿಕ ಲಿಂಗಪೂಜೆ ಸಂಜೆ ಪ್ರವಚನ ಮಹಾಪ್ರಸಾಧ ವ್ಯವಸ್ಥೆ ಕಲ್ಪಿಸಲಾಗಿತ್ತು.  

ಶರಣೆ ಶಾಂತಮ್ಮತಾಯಿ ಕೋಳೂರ, ಎಸ್‌.ಎಂ.ಬೇನಾಳಮಠ, ಸಿ.ಎಂ.ಹಿರೇಮಠ, ಕಾಶಿಬಾಯಿ ಭಂಟನೂರ, ಸುಮಂಗಲಾ ಕೋಳೂರ ಪ್ರವಚನ ನೀಡಿದರುಬ್ರಹ್ಮಕುಮಾರಿಈಶ್ವರಿ ವಿಶ್ವವಿದ್ಯಾಲಯದ ಆಶ್ರಮದಲ್ಲಿ 10 ದಿನಗಳ ಕಾಲ ದೇವರಾಜ ಬಾಗೇವಾಡಿ ಪ್ರವಚನ ನೀಡಿದರು. ಬುಧವಾರ ಜರುಗಿದ ಪ್ರವಚನ ಮುಕ್ತಾಯ ಸಮಾರಂಭದಲ್ಲಿ ಇಟಗಿಶ್ರೀಗಳು, ರಾಜಸ್ಥಾನ ಮೌಂಟ ಅಬುವಿನ ಲಿಂಗಣ್ಣ, ಲಿಮಗಸೂರಿನ ಲಿಂಗರಾಜ, ಶರಣಸೋಮನಾಳದ ಮಹಾದೇವಶಾಸ್ತ್ರೀಗಳು, ಗುರುಮೂರ್ತಿಸ್ವಾಮಿ ಚಿಮ್ಮಲಗಿ, ಸಾಸನುರದ ಸುಂಬಡ ಶಿಕ್ಷಕರು, ಬ.ಸಾಲವಾಡಗಿ ಸಾಹೇಬಗೌಡ ವಠಾರ, ನಾನಾಗೌಡ ಬಸರೆಡ್ಡಿ, ಭೀಮನಗೌಡ ಬಿರಾದಾರ, ಕಾಶಿಲಿಂಗ ಕಲಬುರ್ಗಿ ಶರಣಪ್ಪ ಕಲಬುರ್ಗಿ, ಶಾಂತಮ್ಮ ಬೋಳಶೆಟ್ಟಿ ಮಾತನಾಡಿದರು.ಭಕ್ತಾದಿಗಳು ಬೆಳಗಿನಿಂದ ಸಂಜೆಯವರೆಗೂ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡಿ ತಮ್ಮ ಭಕ್ತಿ ಅರ​‍್ಿಸಿದರು. .ಅಹೋರಾತ್ರಿ ಶಿವಪಾರಣೆ, ಶಿವಭಜನೆ ನಡೆದವು.