ಶಿವಸ್ಫೂರ್ತಿ ಮಹಾಶಿವರಾತ್ರಿ ಸುವರ್ಣ ಸಂಗೀತೋತ್ಸವ
Shivaspurthi Mahashivratri Golden Music Festival
ಲೋಕದರ್ಶನ ವರದಿ
ಸುವರ್ಣ ಸಾಧಕ ಶಿವ ಪ್ರಶಸ್ತಿ ಪ್ರದಾನ ಸಮಾರಂಭ
ಧಾರವಾಡ 17 : ಶಿವಸ್ಫೂರ್ತಿ ಮಹಾಶಿವರಾತ್ರಿ ಸುವರ್ಣ ಸಂಗೀತೋತ್ಸವ ಸಮಿತಿಯು ಶ್ರೀ ಕುಮಾರೇಶ್ವರ ಕಲ್ಚರಲ್ ಸೊಸೈಟಿ(ರಿ)ಯ ಸಹಯೋಗದಲ್ಲಿ ದಿನಾಂಕ: 15.02.2026ರಂದು ಅಹೋರಾತ್ರಿ ನಗರದ ಮಂಗಳವಾರ ಪೇಟೆಯ ಮುದಿಮಾರುತಿ ದೇವಸ್ಥಾನದಲ್ಲಿ ಏರಿ್ಡಸಿದ್ದ ಮೂರನೇ ದಿನದ ಮಹಾಶಿವರಾತ್ರಿ ಸಂಗೀತೋತ್ಸವ ಹಾಗೂ ಸಾಧಕ ಶಿವ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಖ್ಯಾತ ಹಿಂದೂಸ್ಥಾನಿ ಗಾಯಕಿ ಸಂಗೀತಾ ಕಟ್ಟಿ ಕುಲಕರ್ಣಿ ಶಿವನ ಮೂರ್ತಿಗೆ ಪುಷ್ಪಾರ್ಚನೆ ಮಾಡುವುದರ ಮೂಲಕ ಚಾಲನೆ ನೀಡಿದರು.
ಖ್ಯಾತ ಹಿಂದೂಸ್ಥಾನಿ ಗಾಯಕಿ ವಿದುಷಿ ಸಂಗೀತ ಕಟ್ಟಿ ಕುಲಕರ್ಣಿ ಅವರು ಗಾಯನದಲ್ಲಿ ರಾಗ ಬಹದ್ದೂರ ತೋಡಿ, ದಾಸವಾಣಿ ಹಾಗೂ ಅಭಂಗಗಳನ್ನು, ವಿದುಷಿ ಸುಜಾತಾ ಗುರವ ಕಮ್ಮಾರ ಅವರು ಗಾಯನದಲ್ಲಿ ರಾಗ ಛಾಯಾನಟ್, ನಾಟ್ಯಗೀತೆ ಹಾಗೂ ದಾಸವಾಣಿ, ಕೊಲ್ಕತ್ತಾದ ಖ್ಯಾತ ಸರೋದವಾದಕ ಪಂ.ಪಾರ್ಥೊಸಾರಥಿ ಅವರು ಸರೋದ್ ವಾದನದಲ್ಲಿ ರಾಗ ಶಿವರಂಜಿನಿ, ಬಸವರಾಜ ವಂದಲಿ ಅವರು ರಾಗ ಮಾರುಬಿಹಾಗ್ ಮತ್ತು ದಾಸವಾಣಿ, ಬೆಂಗಳೂರಿನ ವಿಜಯ ಗೋನಹಾಳು ಅವರು ಸಿತಾರದಲ್ಲಿ ರಾಗ ಚಂದ್ರಕೌಂಸ್ ಪ್ರಸ್ತುತಪಡಿಸಿದರು. ಪುಣೆಯ ಖ್ಯಾತ ಗಾಯಕ ಅಥರ್ವ ವೈರಾಗಕರ ಗಾಯನದಲ್ಲಿ ರಾಗ ರಾಗೇಶ್ರೀ ಮತ್ತು ಅಭಂಗ ಪ್ರಸ್ತುತ ಪಡಿಸಿದರು. ಖ್ಯಾತ ಗಾಯಕ ವಿನಾಯಕ ಮುತ್ಮುರ್ಡು ಅವರು ಗಾಯನದಲ್ಲಿ ರಾಗ ಮೀಯಾಕಿ ತೋಡಿ ಮತ್ತು ಭಜನ್‌ಗಳನ್ನು ಪ್ರಸ್ತುತ ಪಡಿಸಿದರು. ತಬಲಾದಲ್ಲಿ ವಾದಿರಾಜ ದಂಡಾಪೂರ, ಪ್ರಸಾದ ಮಡಿವಾಳರ, ಡಾ. ಶ್ರೀಹರಿ ದಿಗ್ಗಾವಿ, ದಯಾನಂದ ಸುತಾರ, ಡಾ. ಉದಯ ಕುಲಕರ್ಣಿ, ರವಿ ಜೋಶಿ, ವಿಜಯಕುಮಾರ ಸುತಾರ, ರಾಹುಲ್ ಪಾಟೀಲ, ಶ್ರೀಧರ ಮಾಂಡ್ರೆ, ಹಾರ್ಮೊನಿಯಂದಲ್ಲಿ ಡಾ. ಪರಶುರಾಮ ಕಟ್ಟಿಸಂಗಾವಿ, ಬಸವರಾಜ ಹಿರೇಮಠ, ಸತೀಶ್ ಭಟ್ ಹೆಗ್ಗಾರ, ಸುಕನ್ಯಾ ಬಡಿಗೇರ, ಪ್ರಮೋದ ಹೆಬ್ಬಳ್ಳಿಸಾಥ್ ಸಂಗತ ನೀಡಿದರು. ಕಲಕೇರಿ ಸಂಗೀತ ವಿದ್ಯಾಲಯದ ವಿದ್ಯಾರ್ಥಿಗಳು ಶಿವಸ್ತುತಿ ಪ್ರಸ್ತುತ ಪಡಿಸಿದರು.
ಇದೇ ಸಂದರ್ಭದಲ್ಲಿ ಸುವರ್ಣ ಸಾಧಕ ಶಿವ ಪ್ರಶಸ್ತಿಗೆ ಖಾತ ಸರೋದವಾದಕ ಪಂ.ಪಾರ್ಥಸಾರಥಿ, ವಿದುಷಿ ಸಂಗೀತಾ ಕಟ್ಟಿ ಕುಲಕರ್ಣಿ, ವಿದುಷಿ ಸುಜಾತಾ ಗುರವ, ವಿನಾಯಕ ಹೆಗಡೆ, ವಿಜಯ ಗೋನಹಾಳು ಹಾಗೂ ಸುವರ್ಣ ಕಲಾಪೋಷಕ ಸಾಧಕ ಶಿವ ಪ್ರಶಸ್ತಿಗೆ ಸಮೀರ ಜೋಶಿ ಮತ್ತು ಸಾಧಕ ಶಿವ ಸಮ್ಮಾನಕ್ಕೆ ಅಥರ್ವ ವೈರಾಗಕರ ಇವರಿಗೆ ಪ್ರದಾನ ಮಾಡಲಾಯಿತು.
ರವಿ ಕುಲಕರ್ಣಿ ಹಾಗೂ ಪರಿಮಳಾ ಕಾಗಲಕರ ನಿರೂಪಿಸಿದರು. ಗುರುರಾಜ ಭಜನಾ ಮಂಡಳಿ ಪ್ರಾರ್ಥಿಸಿದರು. ಸುವರ್ಣ ಮಹಾಶಿವರಾತ್ರಿ ಸಂಗೀತೋತ್ಸವ ಸಮಿತಿ ಕಾರ್ಯಾಧ್ಯಕ್ಷ ವೀರಣ್ಣ ಪತ್ತಾರ ಪ್ರಾಸ್ತಾವಿಕ ಮಾತನಾಡಿದರು. ರವೀಂದ್ರ ಶಿರೋಳಕರ ವಂದಿಸಿದರು. ಉಪಾಧ್ಯಕ್ಷ ಡಾ. ಶಶಿಧರ ನರೇಂದ್ರ, ಪ್ರಧಾನ ಕಾರ್ಯದರ್ಶಿ ಪ್ರಕಾಶ ಬಾಳಿಕಾಯಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 