ಬೆಂಗಳೂರು,ಫೆ.8 : ಯುನೈಟೆಡ್ ಗ್ರೂಪ್ ಅಫ್ ಯುನಿವರ್ಸಲ್ ನಿಂದ ಶಿವರಾತ್ರಿ ಹಬ್ಬದ ಪ್ರಯುಕ್ತ ಫೆ.21 ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ಅಂಕಾಲಮಡುಗು ಗ್ರಾಮದಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಮುಖ್ಯಸ್ಥ ಭಾಸ್ಕರ್ ಶಿವಾರೆಡ್ಡಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದ ಅಂಗವಾಗಿ ಉಚಿತ ರಕ್ತದಾನ ಮತ್ತು ಆರೋಗ್ಯ ತಪಾಸಣ ಶಿಬಿರ, ಉದ್ಯೋಗ ಮೇಳ, ರೈತರ ಸಮಸ್ಯಗಳ ಚರ್ಚೆ, ಗುಡ್ಡಗಾಡು ಓಟ, ನಿಧಾನವಾಗಿ ಚಲಿಸುವ ಬೈಕ್ ರೇಸ್, ಸಮಾಜ ಸೇವಕರಿಗೆ ಸನ್ಮಾನ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಶಾಸಕರಾದ ಶರತ್ ಬಚ್ಚೇಗೌಡ, ಡಾ.ಕೆ.ಸುಧಾಕರ್, ಬಿ.ಎ. ಭೈರತಿ ಬಸವರಾಜು, ಮಾಜಿ ಶಾಸಕ ಡಾ.ಜಿ.ಮಂಜುನಾಥ್ ಕೊತ್ತೊರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.