ಶಿವಳ್ಳಿ ಅಗಲಿಕೆ ಅನಾಥ ಪ್ರಜ್ಞೆ ಮೂಡಿಸಿದೆ: ಪ್ರೊ ಸನದಿ

ಹುಬ್ಬಳ್ಳಿ23: ಅಸಹಾಯಕರ ಆಸರೆ, ದೀನ ದಲಿತರ ಬಂಧು ಸಿ.ಎಸ್. ಶಿವಳ್ಳಿಯವರ ನಿಧನದಿಂದ ಕಾಂಗ್ರೆಸ್ ಪಕ್ಷಕ್ಕೆ ತುಂಬಲಾರದ ಹಾನಿಯಾಗಿದೆ. ಅವರ ಅಕಾಲಿಕ ಅಗಲಿಕೆ ಅವರ ಸ್ನೆಹಿತರಿಗೆ, ಬೆಂಬಲಿಗರಲ್ಲಿ ಒಂದು ರೀತಿಯ ಅನಾಥ ಪ್ರಜ್ಙೆ ಮೂಡಿಸಿದೆ, ಎಂದು ಮಾಜಿ ಸಂಸದ ಪ್ರೊ ಐ. ಜಿ. ಸನದಿ ತಿಳಿಸಿದ್ದಾರೆ.

 ಇಂದಿಲ್ಲಿ ಪತ್ರಿಕಾ ಹೇಳಿಕೆಯೊಂದನ್ನು ನೀಡಿರುವ ಅವರು, ದಶಕಗಳ ಕಾಲ ತಮಗೆ ಆತ್ಮೀಯ ಸ್ನೆಹಿತರಾಗಿದ್ದ ಶಿವಳ್ಳಿ, ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಬೆಳೆಸಲು ಶ್ರಮಿಸಿದ್ದರು. ಯಥಾರ್ಥ ವ್ಯೆಕ್ತಿತ್ವದ ಅವರು, ಸಹಾಯ ಕೇಳಿ ಬಂದ ಯಾರನ್ನೂ ನಿರಾಸೆಗೊಳಸಿತ್ತಿರಲಿಲ್ಲ. ಅದೇ ಅವರನ್ನು ಜನಪ್ರಿಯ ರಾಜಕಾರಣಿಯನ್ನಾಗಿ ಬೆಳೆಯಲು, 'ಬಡವರ ಬಂಧು' ಎನ್ನುವ ವಿಶೇಷಣ ಗಳಿಸಲು ಕಾರಣವಾಗಿತ್ತು, ಎಂದು ಪ್ರೊ ಸನದಿ ನುಡಿದಿದ್ದಾರೆ.

   ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬ ವರ್ಗದವರಿಗೆ, ಹಾಗು ಬೆಂಬಲಿಗರಿಗೆ ಆ ದೇವರು ನೀಡಲಿಯೆಂದು ಪ್ರಾಥರ್ಿಸುತ್ತೇನೆ ಎಂದು ಅವರು ನುಡಿದಿದ್ದಾರೆ.