ಲೋಕದರ್ಶನ ವರದಿ
ಶಿರಹಟ್ಟಿ 20: ಪ್ರತಿ ವರ್ಷದಂತೆ ಪಟ್ಟಣದ ಕೋಟೆ ಆಂಜನೇಯ ದೇವಸ್ಥಾನದಲ್ಲಿ ಅಖಂಡ ಶ್ರೀ ರಾಮನಾಮ ಸಪ್ತಾಹ ಕಾರ್ಯಕ್ರಮದಲ್ಲಿ ಇಂದು ಲೋಕ ಕಲ್ಯಾಣಾರ್ಥವಾಗಿ ಭಜರಂಗ ಭಜನಾ ಮಂಡಳ ವತಿಯಿಂದ ಶ್ರೀಪವಮಾನ ಹೋಮ ಮಾಡಲಾಯಿತು. ಕಳೆದ ಒಂದು ವಾರದಿಂದ ನಡೆಯುತ್ತಿರುವ ದೈವಿ ಕಾರ್ಯಕ್ರಮದಲ್ಲಿ ನಿತ್ಯ ಶ್ರೀರಾಮನಾಮ ಜಪ, ಪೂಜೆ ಪುನಸ್ಕಾರಗಳು ಹಾಗೂ ಸಂಜೆ ವಿವಿಧ ಭಕ್ತಿ ಮನೋರಂಜನಾ ಕಾರ್ಯಕ್ರಮಗಳು ನಡೆಯುತ್ತಿದ್ದು ಇಂದು ಪವಮಾನ ಹೋಮ ಮಾಡಲಾಯಿತು. ಬೆಳಿಗ್ಗೆ 6 ಘಂಟೆಗೆ ಮಾರುತಿ ಜನ್ಮೋತ್ಸವ ನೆರವೇರಿಸಲಾಯಿತು.ವಿಪ್ರ ಸಮಾಜದ ಹಿರಿಯರಾದ ಸುಧೀರ ಜಮಖಂಡಿ ಮಾತನಾಡಿ ಭಾರತೀಯ ಸಂಸ್ಕೃತಿಯಲ್ಲಿ ಹೋಮ ಹವನಗಳಿಗೆ ತಪಸ್ಸಿನ ಫಲವೇ ದೊರಕುವದೆಂಬ ಉಲ್ಲೇಖಗಳಿವೆ. ಭಕ್ತಿ ಸಮರ್ಪಣೆಗೆ ಇಂದಿನ ವಿಜ್ಞಾನ ಯುಗದಲ್ಲಿಯೂ ಹೋಮ ಹವನಾದಿಗಳನ್ನು ಮಾಡುತ್ತಿರುವದು ಭಾರತೀಯ ಪರಂಪರೆಯ ಉಜ್ವಲ ನಿದರ್ಶನಗಳಾಗಿವೆ. ಕಾರಣ ಪ್ರತಿ ವರ್ಷದಂತೆ ಇಂದು ಮಾರುತಿ ದೇವಸ್ಥಾನದಲ್ಲಿ ಲೋಕ ಕಲ್ಯಾಣಾರ್ಥವಾಗಿ ಪವಮಾನ ಹೋಮ ನಡೆಸಲಾಗಿದೆ ಎಂದು ಹೇಳಿದರು.ಹಿರಿಯರಾದ ಪ್ರಕಾಶ ನರಗುಂದೆ, ದತ್ತಣ್ಣ ಕುಲಕರ್ಣಿ , ಗಣಪತಿ ಶೇಳಕೆ, ರಾಘವೇಂದ್ರ ಕುಲಕಣರ್ಿ, ಅಮೃತ ಭಾತಖಂಡೆ, ಉದಯ ಕುಲಕಣರ್ಿ, ಸಂಜೀವ ಕುಲಕರ್ಣಿ ಶ್ರೀಕಾಂತ ಉಮಜರ್ಿ, ಅಜೀತ ಭಾತಖಂಡೆ ಹಾಗೂ ಭಜರಂಗ ಮಹಿಳಾ ಮಂಡಳದ ಅನೇಕ ಸದಸ್ಯರು ಇದ್ದರು.