ಲೋಕದರ್ಶನ ವರದಿ
ಶಿರಹಟ್ಟಿ 09: ಪಟ್ಟಣದ ರಾಘವೇಂದ್ರ ಸ್ವಾಮಿ ಮಠಕ್ಕೆ ಗದಗ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಶ್ರೀನಾಥ ಜೋಶಿ ಹಾಗೂ ದಂಪತಿ ಕುಟುಂಬ ಸಮೇತರಾಗಿ ಬಂದು ರಾಯರ ದರ್ಶನ ಪಡೆದರು.
ಈ ವೇಳೆ ಮಾತನಾಡಿದ ಅವರು ಇದು ನಮ್ಮ ತಾಯಿಯವರ ಹುಟ್ಟುರು ನಾವು ಚಿಕ್ಕಂದಿರಿದ್ದಾಗ ಇಲ್ಲಿಯೆ ಆಡಿ ಬೆಳದಿದ್ದೇವೆ ಹಾಗಾಗಿ ಇಂದು ಕುಟುಂಬ ಸಮೇತರಾಗಿ ಬಂದು ರಾಯರ ದರ್ಶನ ಪಡೆದಿದ್ದೇವೆ ಇದೊಂದು ಖಾಸಗಿ ಭೇಟಿಯಾಗಿದೆ ಎಂದರು.
ಚುನಾವಣೆ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಮುಂಬರುವ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಪ್ರತಿಯೊಬ್ಬರೂ ನಿಭರ್ಿತಿಯಿಂದ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು. ಇದಕ್ಕಾಗಿ ಪೋಲೀಸ್ ಇಲಾಖೆ ಇಂದ ಅಗತ್ಯ ಕ್ರಮ ಕೈಕೊಳ್ಳಲಾಗಿದೆ. ಜಿಲ್ಲೆಯಾದ್ಯಂತ ಇರುವಂತಹ 188 ಚೆಕ್ಪೋಸ್ಟ್ಗಳಲ್ಲಿಯೂ ಸಹ ಹಗಲು-ರಾತ್ರಿ ಸಿಬ್ಬಂದಿಗಳನ್ನು ನಿಯೋಜಿಸಿ ಅಗತ್ಯ ಕ್ರಮ ಕೈಕೊಳ್ಳಲಾಗಿದೆ. ಕೆಲವೊಂದು ಕ್ರಿಟಿಕಲ್ ಚೆಕ್ಪೋಸ್ಟ್ಗಳಲ್ಲಿ ಹೆಚ್ಚುವರಿ ಸಿಬ್ಬಂದಿ, ಮೈಕ್ರೋ ಆಬ್ಜರವರ್, ವಿಡಿಯೋ ಕಂಟ್ರೋಲ್ ವ್ಯವಸ್ಥೆ ಮೂಲಕ ಯಾವುದೇ ಚುನಾವಣಾ ಅಕ್ರಮಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.
ಸಾರ್ವಜನಿಕ ಹಿತದೃಷ್ಟಿಯಿಂದ ಹಾಗೂ ಚುನಾವಣೆಯ ಎಲ್ಲ ಪ್ರಕ್ರಿಯೆಗಳು ಯಶಸ್ವಿಯಿಂದ ನಡೆಯುವುದಕ್ಕಾಗಿ ಈಗಾಗಲೇ ರೌಡಿ ಶೀಟರ್ಗಳ ಪರೇಡ್ನ್ನು ಸಹ ನಡೆಸಲಾಗಿದೆ. ಎಲ್ಲರೂ ಶಾಂತಿ ಮತ್ತು ಸುವ್ಯವಸ್ಥೆಯಿಂದ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗಿಯಾಗಬೇಕು. ಯಾರಾದರೂ ಬಾಲ ಬಿಚ್ಚಿದರೆ ಅಂತಹವರ ಬಾಲಾ ಕಟ್ ಮಾಡಿ ಕಾನೂನು ಪ್ರಕಾರ ನಿದರ್ಾಕ್ಷಿಣ್ಯ ಕ್ರಮ ಕೈಕೊಳ್ಳಲಾಗವುದು ಎಂದರು.
ವಿಪ್ರ ಸಮಾಜ ಮುಖಂಡ ಎನ್.ಆರ್.ಕುಲಕಣರ್ಿ, ಶಶಿಕಾಂತ ಪಾಶ್ಚಾಪೂರ, ವಿನಾಯಕ ಸದರಜೋಶಿ, ಗುರುನಾಥ ಪಾಟೀಲ, ಡಾ. ವೇದವ್ಯಾಸ ಮಹಿಷಿ, ವಿಲಾಸ ಸೊರಟೂರ, ಸಂತೋಷ ಕುಬೇರ, ಶ್ರೀಧರ ಕುಲಕಣರ್ಿ, ಅನಿಲ ಪಾಶ್ಚಾಪೂರ, ನರಸಿಂಹಾಚಾರ್ಯ ಮಣ್ಣೂರ ಮುಂತಾದವರು ಉಪಸ್ಥಿತರಿದ್ದರು.