ಲೋಕದರ್ಶನ ವರದಿ
ಶಿರಹಟ್ಟಿ 21: ಪಟ್ಟಣದ ಪ್ರಮುಖ ಬೀದಿಗಳಲ್ಲಿ ಶನಿವಾರ ಮುಂಜಾನೆ ಸಿಆರ್ಪಿಎಫ್ ಬಟಾಲಿನ್ ಮತ್ತು ಡಿ ಆರ್. ಮತ್ತು ಪೋಲೀಸರು ಸಿಆರ್ಪಿಎಫ್ನ ಅಸಿಸ್ಟಂಟ ಕಮಾಡೆಂಟ ಬಿ.ಕೆ. ಸಿಂಗ್ ಮತ್ತು ಸಿಪಿಐ ಬಾಲಚಂದ್ರ ಲಕ್ಕಂ ಮತ್ತು ಬಿ.ಎಸ್. ತಿಪ್ಪರೆಡ್ಡ ನೇತೃತ್ವದಲ್ಲಿ ಸುಮಾರು 70-80 ಪೋಲಿಸರು ಪರೇಡನ್ನು ನಡೆಸಿ ಮತದಾನದಲ್ಲಿ ನಿರ್ಭಯವಾಗಿ ಮತದಾನ ಮಾಡಲು ಭದ್ರತೆಯನ್ನು ಒದಗಿಸಲಾಗುವುದು ಎನ್ನುವ ಸಂದೇಶವನ್ನು ಸಾರುವ ಫರೇಡನ್ನು ನಡೆಸಿದರು.
ಸಿಪಿಐ ಬಾಲಚಂದ್ರ ಲಕ್ಕಂ ಮಾತನಾಡಿ, ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ದಿ. 23 ರಂದು ಜರುಗುವ ಮತದಾನದಲ್ಲಿ ಮತದಾರರು ನಿರ್ಭಯವಾಗಿ ಮತದಾನ ಮಾಡಲು ಭದ್ರ ಸಿಬ್ಬಂದಿಯನ್ನು ಒದಗಿಸಲಾಗುವುದು. ಇದರಲ್ಲಿ ಮತದಾರರಿಗೆ ಯಾವುದೇ ಭಯ ಬೇಡ ಮುಕ್ತವಾಗಿ ಮತದಾನವನ್ನು ಮಾಡುವುದಕ್ಕೆ ಅವಕಾಶನ್ನು ಒದಗಿಸಲಾಗುವುದು. ಅದೇ ರೀತಿಯಲ್ಲಿ ಅಕ್ರಮ ಮತದಾನ ಮತ್ತು ಮತದಾನವನ್ನು ಅಡ್ಡಗಟ್ಟುವ ಯಾವುದೇ ಕಿಡಗೇಡಿಗಳನ್ನು ಮತಗಟ್ಟೆಯ ಹತ್ತಿರ ಸುಳಿಯದಂತೆ ಕ್ರಮ ಜರುಗಿಸಲಾಗುವುದು. ಅಂಥವರ ವಿರುದ್ದ ಕಾನೂನು ಕ್ರಮ ಜರುಗಿಸಲು ಆಯೋಗ ಸೂಚನೆಗಳನ್ನು ನೀಡಿದೆ ಅವುಗಳನ್ನು ಪಾಲಿಸಲಾಗುವುದು ಎಂದು ಹೇಳಿದರು.