ಲೋಕದರ್ಶನ ವರದಿ
ಶಿಗ್ಗಾವಿ ಃ ಶಿಗ್ಗಾವಿ ಸವಣೂರು ಮತಕ್ಷೇತ್ರ ಹಿಂದಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಪ್ರವಾಸೋಧ್ಯಮಕ್ಕೆ ಖಾಸಗಿದಾರರ ಬಂಡವಾಳ ಹೂಡಿಕೆಯಿಂದಾಗಿ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿ ಮಾಪರ್ಾಡಾಗುತ್ತಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು
ತಾಲೂಕಿನ ತಿಮ್ಮಾಪೂರು ಗ್ರಾಮದ ರಾಷ್ಟ್ರೀಯ ಹೆದ್ದಾರಿ ನಾಲ್ಕರ ಪಕ್ಕದಲ್ಲಿ ನಿಮರ್ಿಸಲಾದ ಪಿಆರ್ಎಸ್ ಪಾರ್ಕನ್ನು ರವಿವಾರ ಉದ್ಘಾಟಿಸಿ ಮಾತನಾಡಿ ರಾಜ್ಯದ ಜನರು ರಜಾಕಾಲದ ಮನೋರಂಜನೆಗಾಗಿ ಬೇರೆಬೇರೆ ಜಾಗಗಳನ್ನು ಹುಡುಕಿಕೊಂಡು ಹೋಗುವ ಅವಶ್ಯಕತೆಯಿಲ್ಲ. ಕ್ಷೇತ್ರದಲ್ಲಿಯೇ ಸಾಕಷ್ಟು ಪ್ರವಾಸಿ ತಾಣಗಳು ಈಗಾಗಲೇ ಬೆಳೆದು ನಿಂತಿವೆ. ಈಗಾಗಲೇ ಕ್ಷೇತ್ರದ ಧಾಮರ್ಿಕ ನೆಲೆ ಕನಕದಾಸರ ಅರಮನೆ, ಶಿಶುವಿನಾಳ ಶರೀಫಶಿವಯೋಗಿಗಳ ಗದ್ದುಗೆಯ ಪ್ರಾರ್ಥನಾ ಮಂದಿರ, ಶಿವಯೋಗಿಗಳ ಜೀವನ ಕಥೆ ಆಧಾರಿತ ತೈಲ ಚಿತ್ರಗಳ ಆಕರ್ಷಣೆ. ಅಲ್ಲದೇ ಸವಣೂರುಪಟ್ಟಣದ ನವಾಬರ ಅರಮನೆ. ವಿಷ್ಣು ತೀರ್ಥ ಶಿಲ್ಪ ಕಲಾವೈಭವದ ಧಾಮರ್ಿಕ ಸ್ಥಳಗಳನ್ನು ಅಭಿವೃದ್ಧಿಪಡಿಸಿ ಪ್ರವಾಸೋಧ್ಯಮ ನಿಟ್ಟಿನ್ನಲ್ಲಿ ಪ್ರವಾಸಿಗರನ್ನು ಆಕಷರ್ಿಸಲಾಗುತ್ತಿದೆ. ಜೊತೆಗೆ ಖಾಸಗಿ ಕ್ಷೇತ್ರದಲ್ಲಿ ಪ್ರವಾಸೋಧ್ಯಮಕ್ಕೆ ಉತ್ತೇಜನೆ ಎನ್ನುವಂತೆ ತಡಸ್ ಹಾನಗಲ್ ರಸ್ತೆಯ ಕುನ್ನೂರು ಗ್ರಾಮದ ಸಾಂಪ್ರದಾಯಿಕ ಕೃಷಿ ಮತ್ತು ತೋಟಗಾರಿಕೆ ಅಗಡಿ ತೋಟ, ಗೊಟಗೋಡಿ ಗ್ರಾಮದ ಉತ್ಸವ ರಾಕ್ ಗಾರ್ಡನ್ ನೋಡಲು ರಾಜ್ಯದ ಮೂಲೆಯಿಂದಲೂ ಸಾವಿರಾರು ಜನರು ಪ್ರತಿವರ್ಷ ಬರುವಂತಾಗಿದ್ದು, ಇವು ಪ್ರವಾಸಿಗರನ್ನು ಹೆಚ್ಚು ಆಕರ್ಷಣೀಯ ತಾಣಗಳಾಗಿ ಪ್ರಚಾರ ಪಡೆಯುತ್ತಿವೆ.ಇದರಿಂದಾಗಿ ರಾಜ್ಯದ ಜನರಿಗೆ ಪ್ರವಾಸೋಧ್ಯಮ ಕ್ಷೇತ್ರಕ್ಕೆ ಶಿಗ್ಗಾವಿ ಸವಣೂರು ಮತಕ್ಷೇತ್ರ ಪ್ರವಾಸಿಗರ ಹಬ್ ಆಗಿ ಪರಿಣಮಿಸುತ್ತಿದೆ.
ತಿಮ್ಮಾಪೂರು ಗ್ರಾಮದ ಪಿಆರ್ಎಸ್ ವಾಟರ್ ಪಾರ್ಕನ ರಾಷ್ಟ್ರೀಯ ಹೆದ್ದಾರಿ ಹತ್ತಿರವಿರುವುದರಿಂದಾಗಿ ಅಂತರರಾಜ್ಯ ಪ್ರವಾಸಿಗರೂ ವೀಕ್ಷಣೆ ಮಾಡಿ ಮನೋರಂಜನೆ ಪಡೆಯಲು ಸಾಕಷ್ಟು ಅನುಕೂಲತೆ ಸಿಗಲಿದೆ. ಪಿಆರ್ಎಸ್ ಪಾರ್ಕ ಭವಿಷ್ಯದಲ್ಲಿ ಉತ್ತಮ ಮನೋರಂಜನೆ ನೀಡುವ ಕೇಂದ್ರವಾಗಿ ಬೆಳೆಯಲಿ. ಖಾಸಗಿ ಹೂಡಿಕೆದಾರರು ಪ್ರವಾಸೋಧ್ಯಮ ಕ್ಷೇತ್ರ ಉತ್ತೇಜನೆಗೊಳಿಸುವುದರಿಂದ ಇಲ್ಲಿನ ಜನರಿಗೆ ಉದ್ಯೋಗ ವ್ಯಾಪಾರ ವಾಣಿಜ್ಯ ಹೆಚ್ಚು ಅಥರ್ಿಕ ಬಲಿಷ್ಠತೆ ನೆಲೆ ಕಾಣುವಂತಾಗಲಿವೆ. ಎಂದರು.
ಪಟ್ಟಣದ ವಿರಕ್ತಮಠದ ಸಂಗನಬಸವಶ್ರೀಗಳು ಭಾಗವಹಿಸಿ ಮಾತನಾಡಿ ಮನುಷ್ಯನಿಗೆ ಈಜು ಆಪತ್ಕಾಲದಲ್ಲಿ ಸಹಾಯಕ್ಕೆ ಬರುತ್ತದೆ.
ಆರೋಗ್ಯ ಕಾಪಾಡಿಕೊಳ್ಳಲು ಈಜು ಕಲಿಯುವುದು ಎಲ್ಲ ವಯೋಮಾನದವರಿಗೂ ಅವಶ್ಯಕವಿದ್ದು ಇದರ ಜೊತೆಗೆ ಪ್ರವಾಸೋಧ್ಯಮ ಮನರಂಜನೆಯ ಕೇಂದ್ರಗಳಾಗಿ ಕ್ಷೇತ್ರ ಆಕರ್ಷಣೆಯವಾಗಿ ಹೆಚ್ಚು ಹೆಚ್ಚು ಬೆಳೆಯಲಿ, ನಿರುದ್ಯೋಗ ನಿವಾರಣೆಯಾಗಲಿ ಎಂದು ಆಶಿಸಿಸಿದರು. ಮಾಜಿ ಸಂಸದ ಮಂಜುನಾಥ ಕುನ್ನೂರ, ಮಾಜಿ ವಿಧಾನ ಪರಿಷತ ಸದಸ್ಯ ಸೋಮಣ್ಣ ಬೇವಿನಮರದ, ಜಿಪಂ ಮಾಜಿ ಅಧ್ಯಕ್ಷೆ ಮಮತಾಜಬಿ ತಡಸ್, ತಾಪಂ ಸದಸ್ಯರಾದ ವಿಜಯಲಕ್ಷ್ಮಿ ಮುಂದಿನಮನಿ.ವಿಶ್ವನಾಥ ಹರವಿ, ಮಲ್ಲೇಶಪ್ಪ ದೊಡ್ಡಮನಿ. ಬಿ.ಜೆ.ಪಿ.ತಾಲೂಕು ಅಧ್ಯಕ್ಷ ದೇವಣ್ಣಾ ಚಾಕಲಬ್ಬಿ. ಶಿವಾನಂದ ಮ್ಯಾಗೇರಿ, ಡಾ|| ಪ್ರಶಾಂತ ಹಿರೇಮಠ. ರಾಘವೇಂದ್ರ ದೇಶಪಾಂಡೆ. ಅಲ್ಲದೇ ಹಲವಾರು ಜನಪ್ರತಿನಿಧಿಗಳು ಮುಖಂಡರು ಉಪಸ್ಥಿತರಿದ್ದರು.