ಶೇರಸಿಂಗ್‌ರಾಣಾ ಎಂಬ ಅಗಮ್ಯ ಸಾಹಸಿಗ

ಸ್ನೇಹಿತರೇ ನಾನಿಂದು ರಜಪೂತನೊಬ್ಬನ ಅಗಮ್ಯದ ಸಾಹಸದ ಬಗ್ಗೆ ವಿವರಿಸುತ್ತಿದ್ದೇನೆ. ಇತನನ್ನು ಡಕಾಯಿತಿಯಿಂದ ಹಿಡಿದು ಸಂಸದೆಯವರೆಗೆ ಅಧಿಕಾರ ಹಿಡಿದ ಫೂಲನ್‌ದೇವಿಯ ಪತಿಯ ಕೇಸಿನಲ್ಲಿ ಭಾರತದ ಅತಿದೊಡ್ಡ ಜೈಲು ತಿಹಾಡ ಜೈಲಿನಲ್ಲಿ ಹಾಕಲಾಗಿತ್ತು. ಇತನಿಗೆ ಜೈಲಿಗೆ ಹೋಗುವ ಮೊದಲು ಒಂದು ಗುರಿ ಇತ್ತು. ಆ ಗುರಿಯನ್ನು ತಲುಪಲು ಆತನಿಗೆ ಜೈಲಿನ ಕಂಬಿಗಳು ಕೂಡ ಅಡ್ಡಿ ಮಾಡಲೇ ಇಲ್ಲ. ತನ್ನ ಜೀವನವನ್ನೇ ಪಣಕಿಟ್ಟು ಗುರಿ ಸಾಧಿಸಬೇಕೆಂಬ ಒಂದೇ ಒಂದು ಕಾರಣಕ್ಕೆ ಜೈಲಿನಿಂದಲೇ ಪರಾರಿಯಾಗಿ ನಾವು ಈಗ ಭೂಲೋಕದ ನರಕ ಎಂದು ಕರೆಯುವ ಅಪಘಾನಿಸ್ತಾನಕ್ಕೆ ಹಾರುತ್ತಾನೆ. ಅಪಘಾನಿಸ್ತಾನಕ್ಕೆ ಹಾರಿ ಸಾವಿನ ಕದತಟ್ಟಿ ಏನನ್ನು ಸಾಧಿಸಬೇಕು ಎಂದು ಅಂದುಕೊಂಡಿದ್ದನೋ, ಏನನ್ನು ಮಾಡಬೇಕು ಎಂದು ಅಂದುಕೊಂಡಿದನ್ನೋ ಅದನ್ನು ಮಾಡಿ ಬರುತ್ತಾನೆ. ತನ್ನ ಗುರಿ ಸಾಧಿಸಿದ ಮೇಲೆ ಮತ್ತೆ ತಿಹಾಡ ಜೈಲಿಗೆ ಹೋಗುತ್ತಾನೆ. ಇದು ಶೇರಸಿಂಗ್ ರಾಣಾನ ಕಥೆ. ಈ ಸ್ಟೋರಿ ಯಾವ ಫೀಲ್ಮ ಸ್ಟೋರಿಕಿಂತಾ ಕಡಿಮೆ ಇಲ್ಲ. ಶೇರಸಿಂಗ್ ರಾಣಾ ಅಲಿಯಾಸ್  ಪಂಕಜಸಿಂಗ್ ಹುಟ್ಟಿದ್ದು ಉತ್ತರಾಖಂಡದ ರೂರಕಿ ಎಂಬ ಪುಟ್ಟ ಗ್ರಾಮದಲ್ಲಿ. 

ಶೇರಸಿಂಗ್ ರಾಣಾ ಕೇವಲ ನಾಲ್ಕು ವರ್ಷದವನಿದ್ದಾಗ  ಚಂಬಲ ಕಣಿವೆಯಲ್ಲಿ ಡಖಾಯಿತರು ಕೇಕೆ ಹಾಕುತ್ತಿದ್ದರು. ಸ್ನೇಹಿತರೇ, ನಿಮಗೆಲ್ಲ ಚಂಬಲ್ ಕಣಿವೆ ಬಗ್ಗೆ ಗೊತ್ತಿರಬಹುದು. 1980ರ ಹೊತ್ತಿಗೆ ಚಂಬಲ ಕಣಿವೆಯಲ್ಲಿ ಫೂಲನ್‌ದೇವಿ ಎಂಬ ಹೆಣ್ಣುಮಗಳು ಅಟ್ಟಹಾಸ ಮಾಡುತ್ತಿದ್ದಳು. ಈಗಲೂ ಕೂಡಾ ಚಂಬಲ್ ಕಣಿವೆಯ ಜನ ಫೂಲನ್‌ದೇವಿ ಎಂಬ ಹೆಸರು ಕೇಳಿದ ಕೂಡಲೇ ಘಡಘಡಾ ಎಂದು ನಡುಗುತ್ತಾರೆ. ಈಕೆ ಅಷ್ಟು ಖತನಾಕ ಲೇಡಿ. 80ರ ದಶಕದಲ್ಲಿ ಚಂಬಲ ಕಣಿವೆಯನ್ನು ಇಕೆ ತಲ್ಲಣಗೊಳಿಸಿದ್ದಳು. ಈಕೆಯನ್ನು ದುಷ್ಯ ಸುಂದರಿ ಎಂದು ಕರೆಯಲಾಗುತ್ತಿತ್ತು. ಈಕೆಯ ಹೆಸರು ಕೇಳಿದ ಕೂಡಲೇ 1981ರಲ್ಲಿ ಉತ್ತರ​‍್ರದೇಶದ ಬೆಹಮಾಯಿ ಗ್ರಾಮದಲ್ಲಿ ನಡೆದ ಗಣಘೋರ ಹತ್ಯಾಕಾಂಡ ಕಣ್ಣಿಗೆ ಬರುತ್ತದೆ. ಫೂಲನ್‌ದೇವಿ ಬರೋಬ್ಬರಿ 22 ರಜಪೂತರನ್ನು ಸಾಲಿನಲ್ಲಿ ನಿಲ್ಲಿಸಿ ಗುಂಡಿಟ್ಟು ಕೊಂದಿದ್ಲು. ಇದೇ ಕೇಸಿನಲ್ಲಿ ಈ ಲೇಡಿ ಡ್ವಾನಗೆ ಬರೋಬ್ಬರಿ 11 ವರ್ಷಗಳಕಾಲ ಜೈಲು ಶಿಕ್ಷೆಯಾಗುತ್ತದೆ. ಇಟ್ರೇಸ್ಟಿಂಗ್ ಸಂಗತಿ ಏನು ಗೊತ್ತಾ.... 11 ವರ್ಷಗಳಕಾಲ ಜೈಲು ಶಿಕ್ಷೆ ಅನುಭವಿಸಿ ಬಂದ ಫೂಲನ್‌ದೇವಿ ರಾಜಕೀಯ ಸೇರಿಕೊಂಡು ಸಂಸದೆಯಾಗುತ್ತಾರೆ. ಚಂಬಲ್ ಕಣಿವೆಯಲ್ಲಿ ಗ್ಯಾಂಗ್ ಕಟ್ಟಿಕೊಂಡು ಡಕಾಯಿತಿ ಮಾಡುತ್ತಿದ್ದ ಫೂಲನ್‌ದೇವಿ ದೆಹಲಿಯ ಬಂಗಲೆಯಲ್ಲಿ ಇರಲು ಸುರು ಮಾಡುತ್ತಾರೆೆ. ಜುಲೈ 25, 2001 ರಂದು ಇದೇ ಫೂಲನ್‌ದೇವಿಯನ್ನು ಭೇಟಿಯಾಗಲು ಶೇರಸಿಂಗ್ ರಾಣಾ ಬರಾ​‍್ತನೆ. ಬಂಗಲೆಯ ಗೇಟಿನಲ್ಲಿ ನಿಂತು ಫೂಲನ್‌ದೇವಿಯನ್ನು ಶೂಟ್ ಮಾಡಿ ಕೊಲ್ಲುತ್ತಾನೆ. ಇದು 22 ರಜಪೂತರ ಭೀಕರ ಕೊಲೆಗೆ ಪ್ರತಿಕಾರ ಎಂದು ಶೇರಸಿಂಗ್ ರಾಣಾ ಹೇಳಿಕೊಂಡಿದ್ದಾ. ಇಲ್ಲಿಂದಲೇ ಸುರುವಾಗುವುದು ಶೇರಸಿಂಗ್‌ರಾಣಾನ ಕಥೆ. 

ಫೂಲನ್‌ದೇವಿಯ ಹತ್ಯೆಯಾದ ಎರಡೇ ದಿನದಲ್ಲಿ ಡೇಹರಾಡೂನ್ ಪೊಲೀಸರ ಮುಂದೆ ಶೇರಸಿಂಗ್ ರಾಣಾ ಶರಣಾಗುತ್ತಾನೆ. ಈ ಕೇಸನ ವಿಚಾರಣೆ ನಡಿತಾ ಇತ್ತು. ವಿಚಾರಣೆ ಕಂಪ್ಲಿಟ್ ಆಗುವರೆಗೂ ದೇಶದ ಅತಿದೊಡ್ಡ ಜೈಲು ಎಂದು ಕರೆಯಿಸಿಕೊಳ್ಳುವ ತಿಹಾಡ ಜೈಲಿನಲ್ಲಿ ಶೇರಸಿಂಗ್‌ರಾಣಾನನ್ನು ಇಡಲಾಗಿತ್ತು. ನಂತರ ಅವನಿಗೆ ಜೈಲು ಶಿಕ್ಷೆಯಾಗುತ್ತದೆ. ಮೂರು ವರ್ಷಗಳಕಾಲ ಜೈಲಿನಲ್ಲಿ ಕಂಬಿ ಎಣಿಸುತ್ತ ಕಾಲ ಕಳೆಯುತ್ತಾನೆ. ಆದರೆ ಅವನಿಗೆ ಜೀವನದಲ್ಲಿ ಒಂದು ಗುರಿ ಇತ್ತು. ಆ ಗುರಿ ಅವನನ್ನು ಪದೆ ಪದೇ ಬಡಿದೆಬ್ಬಿಸುತ್ತಿತ್ತು. ಫೆಬ್ರುವರಿ 17, 2004 ರಂದು ಶೇರಸಿಂಗ್ ರಾಣಾ ಸೀನೀಮಾ ಸ್ಟೈಲಿನಲ್ಲಿ ತಿಹಾಡ್ ಜೈಲಿನಿಂದ ಪರಾರಿಯಾಗಿ ಬಿಡುತ್ತಾನೆ. ತಿಹಾಡನಂತ ಅತ್ಯಂತ ಸುರಕ್ಷಿತ ಜೈಲಿನಿಂದ ಪರಾರಿಯಾಗುವುದೆಂದರೆ ಸುಮ್ಮನೇನಾ.... ಈ ಸುದ್ದಿ ದೇಶಾದ್ಯಂತ ಚರ್ಚೆಗೆ ಕಾರಣವಾಗುತ್ತದೆ. ಅದರಲ್ಲೂ ಪರಾರಿಯಾದ ಕಥೆ ಮತ್ತಷ್ಟು ಇಂಟರೇಸ್ಟಿಂಗ್ ಆಗಿದೆ. ಮೂರು ಜನ ಅಮಾಯಕರು ಪೊಲೀಸ್ ವೇಷ ಹಾಕಿಕೊಂಡು ತಿಹಾಡ್ ಜೇಲಿಗೆ ಬಂದಿದ್ರು. “ನಾವು ಉತ್ತರಖಂಡದ  ಪೊಲೀಸರು. ಒಂದು ಕೇಸಿನಲ್ಲಿ ಶೇರಸಿಂಗ್ ರಾಣಾ ಬೇಕಾಗಿದ್ದಾನೆ” ಎಂದು ನಕಲಿ ದಾಖಲೆಗಳನ್ನು ಜೈಲಿನ ಅಧಿಕಾರಿಗಳಿಗೆ ತೋರಿಸುತ್ತಾರೆ. ಎಲ್ಲಿಯವರೆಗೆ ಎಂದರೆ ರಾಣಾನನ್ನು ಹಸ್ತಾರಿಸುವ ಆರ್ಡರ್ ಕಾಪಿಯನ್ನು ಕೂಡಾ ನಕಲಿ ಮಾಡಿಕೊಂಡು ಬಂದಿದ್ರು. ಜೈಲಿನ ಅಧಿಕಾರಿಗಳು ಎಲ್ಲವನ್ನೂ ಪರೀಶೀಲನೆ ಮಾಡಿ ಶೇರಸಿಂಗ್ ರಾಣಾನನ್ನು ನಕಲಿ ಪೊಲೀಸರ ಕೈಗೆ ಕೊಟ್ಟುಬಿಡುತ್ತಾರೆ. ಅಲ್ಲಿಂದ ಶೇರಸಿಂಗ್ ರಾಣಾ ಪರಾರಿಯಾಗಿ ಬಿಡುತ್ತಾನೆ. ಬಂದಿದ್ದು ನಕಲಿ ಪೊಲೀಸರು ಎಂದು ಗೊತ್ತಾದ ಕೂಡಲೇ ಇಡೀ ದೇಶವೇ ಒಮ್ಮೆ ಬೆಚ್ಚಿ ಬಿದ್ದಿತ್ತು. ಹೀಗೂ ಜೈಲಿನಿಂದ ಪರಾರಿಯಾಗಬಹುದಾ ಎಂದು ಜನ ಶಾಕ್‌ಗೆ ಒಳಗಾಗಿದ್ದರು. ಮತ್ತೆ ಎರಡು ವರ್ಷಗಳ ನಂತರ ಕೋಲ್ಕತ್ತಾದಲ್ಲಿ ಶೇರಸಿಂಗ್ ರಾಣಾನನ್ನು ಪೊಲೀಸರು ಅರೇಷ್ಟ ಮಾಡುತ್ತಾರೆ. ಆದರೆ ಆ ಎರಡು ವರ್ಷಗಳ ನಡುವೆ ನಡೆದ ಕಥೆ ಇದೆಯಲ್ಲಾ ಅದು ರಣರೋಚಕವಾಗಿದೆ. ಸ್ನೇಹಿತರೇ, ನಿಮಗೆಲ್ಲ ಗೊತ್ತಿದೆ ಭಾರತದ ಪುಣ್ಯ ಮಣ್ಣಿನಲ್ಲಿ ಹತ್ತು ಹಲವಾರು ವೀರ - ಶೂರ ರಾಜರು ಜನ್ಮ ಪಡೆದಿದ್ದಾರೆ. ಆಳ್ವಿಕೆ ಮಾಡಿದ್ದಾರೆ. ಇದರಲ್ಲಿ ಪೃಥ್ವಿರಾಜ ಚೌವ್ಹಾನ್ ಕೂಡ ಒಬ್ಬನು. ಈತ ಭಾರತದ ಕೊನೆಯ ಹಿಂದೂ ಸಾಮ್ರಾಟ್‌ನಾಗಿದ್ದ. ಸ್ನೇಹಿತರೇ ನಿಮಗೆಲ್ಲ ನೆನಪಿರಬಹುದು, ಕಂದಹಾರ ವಿಮಾನ ಅಪಹರಣ ಕೇಸಿನಲ್ಲಿ ಅಂದಿನ ವಿದೇಶಿ ಮಂತ್ರಿ ಜಸವಂತ್‌ಸಿಂಗ್ ಅಪಘಾನಿಸ್ತಾನಕ್ಕೆ ತೆರಳಿದ್ದರು. ಆ ಸಂದರ್ಭದಲ್ಲಿ ಅಪಘಾನಿಸ್ತಾನದ ಗಜನಿ ಎಂಬ ಪ್ರದೇಶದಲ್ಲಿ ರಾಜಾ ಪೃಥ್ವಿರಾಜ ಚೌವ್ಹಾನ್‌ನ ಸಮಾಧಿ ಇದೆ ಎಂಬ ಮಾಹಿತಿಯನ್ನು ಸ್ವತಃ ಅಂದಿನ ತಾಲಿಬಾನ ಅಧಿಕಾರಿಗಳು ನೀಡಿದ್ದರು. ಇಲ್ಲಿ ಮತ್ತೊಂದು ವಿಚಾರ ತಮಗೆಲ್ಲ ಗೊತ್ತಿರಬೇಕು. ಪೃಥ್ವಿರಾಜ ಚೌವ್ಹಾನನ ಸಮಾಧಿ ಇದ್ದಿದ್ದು ಮಹ್ಮದಘೋರಿಯ ಸಮಾಧಿಯ ಬಾಗಿಲ ಬಳಿ.  ಅಪಘಾನಿಸ್ತಾನದಲ್ಲಿ ಒಂದು ಪರಂಪರೆ ಇತ್ತು. ಯಾರೆಲ್ಲ ಮಹ್ಮದಘೋರಿಯ ಸಮಾಧಿ ನೋಡಲು ಹೋಗುತ್ತಾರೋ ಅವರು ಪೃಥ್ವರಾಜ ಸಮಾಧಿಗೆ ಚಪ್ಪಲಿನಿಂದ ಹೊಡೆದು ಹೋಗಬೇಕಿತ್ತು. ಆ ಸಮಾಧಿಗೆ ಅವಮಾನ ಮಾಡಬೇಕಿತ್ತು.  

ಸ್ನೇಹಿತರೆ ನಿಮಗಿಲ್ಲಿ ಅನುಮಾನ ಬಂದಿರಬಹುದು. ಭಾರತ ರಾಜಾ ಪೃಥ್ವಿರಾಜ ಚೌವ್ಹಾಣನ ಸಮಾಧಿ ಅಪಘಾನಿಸ್ತಾನದಲ್ಲಿ ಏಕೆ ಇದೆ ಎಂದು. ನಿಮಗೆ ಗೊತ್ತಿರಲಿ, ಅಂದಿನ ಕಾಲದಲ್ಲಿ ಅಪಘಾನಿಸ್ತಾನ ಎನ್ನುವ ದೇಶವೇ ಇರಲಿಲ್ಲ.  ಅದು ಅಖಂಡ ಭಾರತ. ಇರಲಿ ಈಗ ವಿಷಯಕ್ಕೆ ಬರುವುದಾದರೇ ಅಪಘಾನಿಸ್ತಾನದ ಪೃಥ್ವಿರಾಜನ ಸಮಾಧಿಗೆ ಈ ರೀತಿಯ ಅವಮಾನ ಆಗುತ್ತಿದೆ ಅಂತ ಸ್ವತಃ ಭಾರತಕ್ಕೆ ಬಂದು ಜಸವಂತ್‌ಸಿಂಗ್ ಹೇಳಿಕೆ ನೀಡಿದರು. ಇದು ಭಾರಿ ಚರ್ಚೆಗೆ ಕಾರಣವಾಗುತ್ತದೆ.            ಹೇಗಾದರೂ ಮಾಡಿ ಅಲ್ಲಿಂದ ಪೃಥ್ವಿರಾಜ ಚೌವ್ಹಾಣ ಅಸ್ಥಿಯನ್ನು ತೆಗೆದುಕೊಂಡು ಬರಬೇಕು ಅಂತ ಕೆಲವು ನಾಯಕರು ಮಾತನಾಡೋಕೆ ಸುರು ಮಾಡುತ್ತಾರೆ.   ಜನರಿಗೂ ಕೂಡ ಹೀಗೆ ಅನಿಸ್ತಾ ಇತ್ತು. ಆದರೆ ಅದು ಅಷ್ಟು ಸುಲಭ ಆಗಿರಲಿಲ್ಲ. ಕಾರಣ ಈಗ ಹೇಗೆ ಅಪಘಾನಿಸ್ತಾನದಲ್ಲಿ ತಾಲಿಬಾನಿಗಳ ಆಡಳಿತ ಇದೆಯೋ ಹಾಗೇ ಅವಾಗಲೂ ತಾಲಿಬಾನಿಗಳ ಆಡಳಿತ ಇತ್ತು. ಇಂತದೊಂದು ಪ್ರಯತ್ನ  ಮಾಡುವ ಧೈರ್ಯ ಯಾರಿಗೂ ಇರಲಿಲ್ಲ. ಆದರೆ ಅವನೊಬ್ಬನಿಗೆ ಆ ಧೈರ್ಯ ಇತ್ತು. ಅವನು ಬೇರೆ ಯಾರು ಅಲ್ಲ, ಒನ್ಸ ಅಗೇನ್ ಶೇರಸಿಂಗ್ ರಾಣಾ ಎಂಬ ವಿಚಾರ ಗೊತ್ತಾದ ಕೂಡಲೇ ಸಾಮ್ರಾಟ್ ಪೃಥ್ವಿರಾಜ ಚೌವ್ಹಾಣ ಅಸ್ಥಿಯನ್ನು ಗೌರವಪೂರ್ವಕವಾಗಿ ಅಪಘಾನಿಸ್ತಾನದ ಮೂಲಕ ತಂದೆ ತರುತ್ತೇನೆ ಅಂತ ಶೇರಸಿಂಗ್ ರಾಣಾ ಶಪತ್ತು ಮಾಡುತ್ತಾನೆ. ಇದೇ ಕಾರಣಕ್ಕೆ ತಿಹಾಡ್ ಜೇಲಿನಿಂದ ಪರಾರಿಯಾಗುತ್ತಾನೆ. ಜೈಲಿನಿಂದ ಪರಾರಿಯಾದವನೇ ರಾಂಚಿ ರೈಲು ನಿಲ್ದಾಣಕ್ಕೆ ಬರುತ್ತಾನೆ. ರಾಂಚಿಯಲ್ಲಿ ನಕಲಿ ಪಾಸಪೋರ್ಟ ಮಾಡಿಸುತ್ತಾನೆ. ರೈಲಿನಲ್ಲಿ ಕೊಲ್ಕತ್ತಾಗೆ ಬರುತ್ತಾನೆ. ಅಲ್ಲಿ ಬಾಂಗ್ಲಾದೇಶದ ವೀಸಾ ಮಾಡಿಸುತ್ತಾನೆ. ಬಾಂಗ್ಲಾದೇಶಕ್ಕೆ ಹೋಗಿ ನಕಲಿ ದಾಖಲೆಗಳನ್ನು ತೋರಿಸಿ ಒಂದು ಯೂನಿವರ್‌ಸಿಟಿಗೆ ದಾಖಲಾಗುತ್ತಾನೆ. ಅಲ್ಲೇ ಅಪಘಾನಿಸ್ತಾನದ ವೀಸಾ ರೆಡಿ ಮಾಡುತ್ತಾನೆ. ಅಲ್ಲಿಂದ ವಿಮಾನದಲ್ಲಿ ಹಾರಿ ಅಪಘಾನಿಸ್ತಾನಕ್ಕೆ ಹೆಜ್ಜೆ ಇಡುತ್ತಾನೆ. ನಿಮಗೊಂದು ಮತ್ತೊಂದು ವಿಚಾರ ಹೇಳುತ್ತೇನಿ. ಆಗ ಅಪಘಾನಿಸ್ತಾನದಲ್ಲಿ ತಾಲಿಬಾನಿಗಳ ಆಡಳಿತವಿತ್ತು. ತಾಲಿಬಾನಿಗಳ ಆಡಳಿತ ಇದ್ದರೂ, ಭಯ ಇದ್ದರೂ ಕಾಬೂಲ್ ಕಂದಹಾರ ಮೂಲಕ ಗಜನಿಯನ್ನು ಪ್ರವೇಶ ಮಾಡುತ್ತಾನೆ ಶೇರಸಿಂಗ್‌. ಇಲ್ಲಿಯೇ ಪೃಥ್ವಿರಾಜ ಚೌವ್ಹಾನನ ಸಮಾಧಿ ಇದಿದ್ದು. ತಾಲಿಬಾನಿಗಳ ಆ ಭೂಮಿಯಲ್ಲಿ ಒಂದೊಂದು ಹೆಜ್ಜೆ ಇಡೋದು ಕೂಡ ಸಾವಿನ ಜೊತೆ ಸರಸವಾಡಿದಂತೆ. ಕೊನೆಗೂ ಆತ ಪೃಥ್ವಿರಾಜ ಚೌವ್ಹಾನನ ಸಮಾಧಿ ಬಳಿ ಹೋಗುವಲ್ಲಿ ಯಶಸ್ವಿಯಾಗಿದ್ದಾ. ಅಲ್ಲಿ ಪೃಥ್ವಿರಾಜ ಚೌವ್ಹಾನನ ಸಮಾಧಿಗೆ ಆಗುತ್ತಿರುವ ಅಪಮಾನವನ್ನು ಕಣ್ಣಾರೇ ಕಂಡಿದ್ದ. ಆ ದೃಶ್ಯಗಳನ್ನು ತನ್ನ ಕ್ಯಾಮರಾದಲ್ಲಿ ರೇಕಾರ್ಡ್‌ ಕೂಡ ಮಾಡಿದ್ದ. ಜೀವವನ್ನೇ ಪಣಕಿಟ್ಟು ಅಲ್ಲಿಂದ ಅಸ್ಥಿಯನ್ನು ತರುವುದಕ್ಕೆ ಪ್ಲ್ಯಾನ್ ಮಾಡುತ್ತಾನೆ. ಕೊನೆಗೂ ಆ ದಿನ ಬರುತ್ತದೆ. ತಾನು ಪ್ಲ್ಯಾನ್ ಮಾಡಿಕೊಂಡಂತೆ ರಾತ್ರಿಹೊತ್ತು ಅಗೆಯುವುದಕ್ಕೆ ಸುರು ಮಾಡುತ್ತಾನೆ. ಸ್ವಲ್ಪ ಹೆಚ್ಚು ಕಡಿಮೆಯಾದರೂ ಆತನ ಹೆಣ ಉರುಳುತ್ತಿತ್ತು. ಆದರೂ ಎದೆಗುಂದದೆ ತಾನು ಏನು ಅಂದುಕೊಂಡಿದ್ದನ್ನೋ ಅದನ್ನು ಮಾಡಿ ರಾಜಾ ಪೃಥ್ವಿರಾಜ ಚೌವ್ಹಾನನ ಅವಶೇಷಗಳನ್ನು ಭಾರತಕ್ಕೆ ತರುವಲ್ಲಿ ಯಶಸ್ವಿಯಾಗುತ್ತಾನೆ.        

ಈ ಘಟನೆಗಳಿಗೆ ಸಾಕ್ಷಿ ಎಂಬಂತೆ ಎಲ್ಲ ದೃಶ್ಯಗಳನ್ನು ವಿಡಿಯೋ ಮಾಡಿಕೊಂಡಿದ್ದ. ನಂತರ ತಾಯಿಯ ಸಹಾಯದೊಂದಿಗೆ ಗಾಜಿಯಾಬಾದನಲ್ಲಿ ಪೃಥ್ವಿರಾಜ ಚೌವ್ಹಾನನ ಸಮಾಧಿ ಕಟ್ಟಿಸುತ್ತಾನೆ. ಅಲ್ಲಿ ಮಂದಿರವನ್ನು ಕಟ್ಟಿಸುತ್ತಾನೆ. ರಾಣಾನ ಈ ಕಥೆ ಕೇಳಿದ ದೇಶದ ಜನ ಹೆಮ್ಮೆಪಟ್ಟರು. ಒಂದು ದಿನ ಯುನಿವೆಷ್ಟಿಗೇಶನ್ ಏಜೇನ್ಸಿಗೆ ರಾಣಾ ಕೊಲ್ಕತ್ತಾದಲ್ಲಿ ಇರುವುದು ಗೊತ್ತಾಗುತ್ತದೆ. 2006ರಲ್ಲಿ ದೆಹಲಿ ಪೊಲೀಸರು ಶೇರಸಿಂಗ್ ರಾಣಾನನ್ನು ಅರೇಸ್ಟ ಮಾಡುತ್ತಾರೆ. ಮತ್ತೆ ತಿಹಾಡ್ ಜೇಲಿಗೆ ಹಾಕುತ್ತಾರೆ.  

ಶೇರಸಿಂಗ್ ರಾಣಾನ ಜೀವನ ಆಧಾರಿತ “ಎಂಡ್ ಆಫ್ ಬಂಡಿತ್ ಕ್ಯೂನ್‌” ಎಂಬ ಸೀನೀಮಾ ಕೂಡ ಬಂದಿದೆ. ಈ ಸೀನೀಮಾದಲ್ಲಿ ನವೋಜವುದ್ದೀನ ಸಿದ್ದಕಿ ಶೇರಸಿಂಗ್ ರಾಣಾನ ಪಾತ್ರದಲ್ಲಿ ಅಭಿನಯಿಸಿದ್ದಾನೆ. ಅದೇನೆ ಇರಲಿ ಶೇರಸಿಂಗ್ ರಾಣಾ ಜೈಲಿಗೆ ಹೋದರೂ ತನ್ನ ಗುರಿಯನ್ನು ಬಿಡಲೇ ಇಲ್ಲ. ತಾನು ಏನು ಅಂದುಕೊಂಡಿದ್ದನೋ ಅದನ್ನು ಸಾಧಿಸಿ ಬರುತ್ತಾನೆ.    

- ಡಾ. ಗೀತಾ ತೆಕ್ಕೆವಾರಿ  

ಸಾಹಿತಿಗಳು 

ಬೆಂಗಳೂರು 


- * * * -