ಹಿಂದುತ್ವ ನಾಯಕ ಬಚ್ಚನ್ ಹತ್ಯೆ ಪ್ರಕರಣ: ಶಾರ್ಪ್ ಶೂಟರ್ ಜಿತೇಂದ್ರ ಬಂಧನ

ಲಖನೌ, ಫೆ 8, ಕಳೆದ ಭಾನುವಾರ  ರಾಜಧಾನಿಯಲ್ಲಿ ಹಿಂದುತ್ವ ನಾಯಕ ರಂಜೀತ್ ಬಚ್ಚನ್ ಅವರನ್ನು ಹತ್ಯೆ ಮಾಡಿದ್ದ  ಪಾತಕಿ,  ಶಾರ್ಪ್ ಶೂಟರ್‌   ಜಿತೇಂದ್ರ ಎಂಬಾತನನ್ನು  ಶನಿವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಶುಕ್ರವಾರ ಮಧ್ಯರಾತ್ರಿಯ ನಂತರ ರಾಜ್ಯ ರಾಜಧಾನಿಯ ಆಲಂಬಾಗ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪೊಲೀಸರೊಂದಿಗೆ ಮುಖಾಮುಖಿಯಾದ ನಂತರ  ಶೂಟರ್ ಜಿತೇಂದ್ರನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಲಖನೌ ಪೊಲೀಸರು 50,ಸಾವಿರ  ಬಹುಮಾನ ಘೋಷಿಸಿದ್ದ  ಜಿತೇಂದ್ರ  ಈಗ ಗುಂಡಿನ ದಾಳಿಯಲ್ಲಿ  ಗಾಯಗೊಂಡು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ರಾಯ್ ಬರೇಲಿಗೆ ಪಲಾಯನ ಮಾಡಲು ಯತ್ನಿಸುತ್ತಿದ್ದಾಗ  ಹಿಂದೂ ಮಹಾ ಸಭೆಯ ಅಂತಾರಾಷ್ಟ್ರೀಯ ಅಧ್ಯಕ್ಷ ರಂಜೀತ್ ಬಚ್ಚನ್ ಅವರನ್ನು ಗುಂಡಿಕ್ಕಿ ಕೊಂದಿದ್ದಾನೆ  ಎಂದು ಪೊಲೀಸ್ ಆಯುಕ್ತ (ಸಿಪಿ) ಸುಜಿತ್ ಪಾಂಡೆ ತಿಳಿಸಿದ್ದಾರೆ. ಜಿತೇಂದ್ರನಿಂದ ಪೊಲೀಸರು ಪಿಸ್ತೂಲ್ ಮತ್ತು ಮೋಟಾರ್ ಸೈಕಲ್ ಅನ್ನು ವಶಪಡಿಸಿಕೊಂಡಿದ್ದಾರೆ ಶೂಟರ್ ಮುಖ್ಯ ಪಿತೂರಿಗಾರ   ದೀಪೇಂದ್ರನ ಸೋದರ ಸಂಬಂಧಿಯಾಗಿದ್ದಾನೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ  ರಾಜಧಾನಿ ಪೊಲೀಸರು ರಂಜೀತ್ ಅವರ ಎರಡನೇ ಪತ್ನಿ ಮತ್ತು ಅತನ  ಪ್ರೇಮಿ ಮತ್ತು ಮುಖ್ಯ ಸಂಚುಗಾರ   ದೀಪೇಂದ್ರ ಮತ್ತು ಅವರ ಚಾಲಕ ಸಂಜೀತ್ ಅವರನ್ನು  ಗುರುವಾರ ಬಂಧಿಸಿದ್ದಾರೆ.