ಹಿರಿಯ ಲೇಖಕಿ ಶಾಂತಾದೇವಿ ಕಣವಿ ವಿಧಿವಶ

ಧಾರವಾಡ, ಮೇ 23,ಕನ್ನಡದ ಹಿರಿಯ ಸಣ್ಣಕಥೆಗಾರ್ತಿ ಮತ್ತು ಪ್ರಸಿದ್ಧ ಕವಿ ಚನ್ನವೀರ ಕಣವಿಯವರ ಪತ್ನಿ ಶಾಂತದೇವಿ ಕಣವಿ ವಿಧಿವಶರಾಗಿದ್ದಾರೆ.  ಶುಕ್ರವಾರ ಧಾರವಾಡದ ಕೆಎಲ್ಇ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದ ಅವರಿಗೆ 88 ವರ್ಷ ವಯಸ್ಸಾಗಿತ್ತು. ಕುಟುಂಬ ಮೂಲಗಳ ಪ್ರಕಾರ, ವಯೋಸಹಜ ಕಾಯಿಲೆಗಳಿಂದಾಗಿ ಅವರು ಕಳೆದ ವಾರ ಆಸ್ಪತ್ರೆಗೆ ದಾಖಲಾಗಿದ್ದರು. ಎಂ.ಎಸ್.ಶಾಂತದೇವಿ ಕಣವಿ ವಿಜಯಪುರ ಮೂಲದವರಾಗಿದ್ದು, ಮದುವೆಯಾದ ನಂತರ ಧಾರವಾಡದಲ್ಲಿ ನೆಲೆಸಿದ್ದರು. ಉತ್ತರ ಕರ್ನಾಟಕ ಪ್ರದೇಶದ ಜೀವನ ಮತ್ತು ಸಂಸ್ಕೃತಿಯನ್ನು ಚಿತ್ರಿಸಿದ ಅವರ ಕಥೆಗಳು ಇಂಗ್ಲಿಷ್, ಹಿಂದಿ, ತಮಿಳು, ತೆಲುಗು, ಮತ್ತು ಮಲಯಾಳಂ ಸೇರಿದಂತೆ ಹಲವು ಭಾಷೆಗಳಿಗೆ ಅನುವಾದವಾಗಿವೆ. ಅವುಗಳಲ್ಲಿ ಕೆಲವನ್ನು  ವಿಶ್ವವಿದ್ಯಾಲಯದ ಪಠ್ಯಗಳಲ್ಲಿಯೂ ಅಳವಡಿಸಿಕೊಳ್ಳಲಾಗಿದೆ. ಅವರು, ಕರ್ನಾಟಕ ಸರ್ಕಾರ ಕೊಡಮಾಡುವ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದಾನ ಚಿಂತಾಮಣಿ ಅತ್ತಿಮಬ್ಬೆ ಪುರಸ್ಕೃತರಾಗಿದ್ದರು.