ಲೋಕದರ್ಶನ ವರದಿ
ತಾಳಿಕೋಟೆ 17:ನಿವೃತ್ತ ಐಜಿಪಿ ಶಂಕರ ಬಿದರಿ ಅವರು ಸಾಮಾಜಿಕವಾಗಿ ಸಲ್ಲಿಸಿದ ಸೇವೆ ತೃಪ್ತಿಕರವಾಗಿದೆ ಅಲ್ಲದೇ ಯುವಕರಿಗೆ ಮಾರ್ಗದರ್ಶನವಾಗಿದೆ ಎಂದು ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ಬಸನಗೌಡ ಮಾಡಗಿ ನುಡಿದರು. ಮಂಗಳವಾರರಂದು ಪಟ್ಟಣದ ಸಜ್ಜನ ರಾಜಕಾರಣಿ ದಿ.ಕೆ.ಡಿ.ಪಾಟೀಲ ಅವರ ನಿವಾಸಕ್ಕೆ ಬೆಟ್ಟಿ ನೀಡಿದ ಸಂದರ್ಬದಲ್ಲಿ ದ್ಯಾಮನಗೌಡ ಪಾಟೀಲ ಅವರ ಕುಟುಂಬದಿಂದ ಏರ್ಪಡಿಸಲಾದ ಸನ್ಮಾನ ಸಮಾರಂಭದಲ್ಲಿ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಿದ್ದ ಶಂಕರ ಬಿದರಿ ಅವರು ಸೇವೆ ಸಲ್ಲಿಸುತ್ತಿದ್ದ ಸಮಯದಲ್ಲಿ ಬಡಬಗ್ಗರಿಗಾಗಿ ನ್ಯಾಯಯುತ ಕಾರ್ಯವನ್ನು ಮಾಡಿದ್ದಾರೆ ಅಂತಹ ಪ್ರಾಮಾಣಿಕ ದಕ್ಷ ಅಧಿಕಾರಿ ದಿ.ಕೆ.ಡಿ.ಪಾಟೀಲ ಅವರ ನೆನಪಿಗೋಸ್ಕರ ಅವರ ನಿವಾಸಕ್ಕೆ ಬೆಟ್ಟಿ ನೀಡಿ ಸಂತೈಸಲು ಆಗಮಿಸಿರುವದು ಅವರ ದೊಡ್ಡ ಗುಣಕ್ಕೆ ಬೇರೆ ಸಾಕ್ಷೀ ಬೇಕಿಲ್ಲಾ. ಪೊಲೀಸ್ ಇಲಾಖೆ ಸಂಬಂದಿಸಿ ಸಾಕಷ್ಟು ಕಾರ್ಯ ಕೆಲಸಗಳಿಗೆ ಅವರನ್ನು ಸಂಪಕರ್ಿಸಿದಾಗ ನೇರವಾಗಿ ಸಂಪರ್ಕಕ್ಕೆ ಸಿಕ್ಕಿದ್ದಾರಲ್ಲದೇ ನ್ಯಾಯಯುತವಾದ ನ್ಯಾಯವನ್ನು ಒದಗಿಸಿಕೊಟ್ಟಿದ್ದಾರೆ ಅವರ ಮಾರ್ಗದರ್ಶನ ಮುಂದಿನ ಯುವ ಫಿಳಿಗೆಗೆ ನೀಡಿ ಸಮಾಜದಲ್ಲಿ ಬದಲಾವಣೆಯನ್ನು ತರುವಂತಾಗಲಿ ಎಂದು ಆಶಿಸಿದರು
ಇನ್ನೋರ್ವ ಹಿರಿಯ ಪತ್ರಕರ್ತರಾದ ಜಿ.ಟಿ.ಘೋರ್ಪಡೆ ಅವರು ಮಾತನಾಡಿ ನಿವೃತ್ತ ಐಜಿಪಿ ಶಂಕರ ಬಿದರಿ ಅವರು ಸೇವಾ ನಿವೃತ್ತಿಹೊಂದಿದ್ದರೂ ಕಿರಿಯ ಪೊಲೀಸ್ ಅಧಿಕಾರಿಗಳಿಗೆ ಮಾರ್ಗದರ್ಶಕರಾಗಿ ಸೇವೆ ಮಾಡುತ್ತಾ ಸಾಗಿದ್ದಾರೆ ಪೊಲೀಸ್ರು ಹಾಗೂ ಪತ್ರಕರ್ತರು ಒಂದೇ ನಾಣ್ಯದ ಎರಡು ಮುಖಗಳೆಂಬಂತೆ ಪತ್ರಿಕಾ ಮಿತ್ರರೊಡನೆ ಉತ್ತಮ ಬಾಂದವ್ಯದೊಂದಿಗೆ ರಾಜ್ಯದಲ್ಲಿ ಅಕ್ರಮ ಚಟುವಟಿಕೆಗಳಿಗೆ ನಾಂದಿ ಹಾಡಿದ್ದಾರೆ ಅಂತಹ ಸಾಮಾಜಿಕ ಹಿತವನ್ನು ಬಯಸುವದರೊಂದಿಗೆ ಮುನ್ನಡೆದು ಬಂದ ಶಂಕರ ಬಿದರಿ ಅವರು ರಾಜಕಾರಣದ ಮೂಲಕ ಹೊಸ ಹೆಜ್ಜೆಯನ್ನು ಇಟ್ಟಿದ್ದಾರೆ ಅವರ ಸೇವಾ ಕಾರ್ಯ ಮುಂದೆಯೂ ಯಶಸ್ಸು ಕಾಣಲೆಂದು ಆಶಿಸಿದರು.
ಈ ಸಮಯದಲ್ಲಿ ದ್ಯಾಮನಗೌಡ ಪಾಟೀಲ, ಹಾಗೂ ಬಿಜೆಪಿ ಮುಖಂಡರಾದ ಮಲ್ಲನಗೌಡ ಪಾಟೀಲ(ಕೋರವಾರ) ಸನ್ಮಾನಿಸಿ ಗೌರವಿಸಿದರು. ಮುಖಂಡರುಗಳಾದ ಜಿ.ಎಸ್.ಕಶೆಟ್ಟಿ, ಎಂ.ಎಂ.ಪಾಟೀಲ, ಕಾಶಿನಾಥ ಮುರಾಳ, ಬಸನಗೌಡ ಕೆ ಪಾಟೀಲ, ಬದ್ರು ಯಾಳಗಿ, ವೀರೇಶ ಮೇಟಿ, ಶ್ರೀಶೈಲ ಬಿಳೇಭಾವಿ, ಅಮೀತ ಮನಗೂಳಿ, ಮಯೂರ ಪಾಟೀಲ, ರಾಮನಗೌಡ ಬಿರಾದಾರ, ಎಸ್.ಎಸ್.ಗದಿಗೆಪ್ಪಗೋಳ, ಎಸ್.ಬಿ.ಬಿರಾದಾರ, ಮಹಾಂತೇಶ ಬಿರಾದಾರ, ಸಂಗನಗೌಡ ಬಿರಾದಾರ(ಕೋರವಾರ), ಮಲ್ಲನಗೌಡ ಪಾಟೀಲ(ಮಿಣಜಗಿ), ಸುರೇಶ ಪಾಟೀಲ, ಸಿದ್ದಲಿಂಗಸ್ವಾಮಿ ಚೋಂಡಿಪಾಟೀಲ, ಪಿ.ಎಸ್.ಆಯ್.ಜಿ.ಎಸ್ ಬಿರಾದಾರ, ಮೊದಲಾದವರು ಉಪಸ್ಥಿತರಿದ್ದರು.