ಆಸ್ಟ್ರೇಲಿಯನ್ ಕ್ರಿಕೆಟರ್ಸ್ ಅಸೋಸಿಯೇಷನ್ ಅಧ್ಯಕ್ಷರಾಗಿ ಶೇನ್ ವ್ಯಾಟ್ಸನ್ ನೇಮಕ

ಸಿಡ್ನಿ, ನ 12 :       ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ಆಲ್ರೌಂಡರ್ ಶೇನ್ ವ್ಯಾಟ್ಸನ್ ಅವರು "ಆಸ್ಟ್ರೇಲಿಯನ್ ಕ್ರಿಕೆಟರ್ಸ್ ಅಸೋಸಿಯೇಷನ್" (ಎಸಿಎ) ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಸೋಮವಾರ ರಾತ್ರಿ ಎಸಿಎ ಎಜಿಎಂನಲ್ಲಿ ನಡೆದಿದ್ದ ಸಭೆಯಲ್ಲಿ ವ್ಯಾಟ್ಸನ್ ಅವರನ್ನು ನೇಮಕ ಮಾಡಲಾಗಿದೆ. 10 ಸದಸ್ಯರೊನ್ನೊಳಗೊಂಡ ಮಂಡಳಿಯಲ್ಲಿ ಶೇನ್ ವ್ಯಾಟ್ಸ್ನ ಒಂದು ಭಾಗವಾಗಿದ್ದಾರೆ. ಮಂಡಳಿಯಲ್ಲಿ ಮೂವರು ಹಾಲಿ ಮತ್ತು ಮಾಜಿ ಕ್ರಿಕೆಟಿಗರನ್ನು ಹೊಸದಾಗಿ ನೇಮಿಸಲಾಗಿದೆ. ಆಸ್ಟ್ರೇಲಿಯಾ ತಂಡದ ಆಟಗಾರರಾದ ಪ್ಯಾಟ್ ಕಮಿನ್ಸ್ ಹಾಗೂ ಕ್ರಿಸ್ಟೆನ್ ಬೀಮ್ಸ್ ಮತ್ತು ಕ್ರಿಕೆಟ್ ವಿಶ್ಲೇಷಣಾಕಾರ ಮತ್ತು ಮಾಜಿ ಆಸ್ಟ್ರೇಲಿಯನ್ ಕ್ರಿಕೆಟಿಗ ಲಿಸಾ ಸ್ಟ್ಯಾಲೇಕರ್ ಒಳಗೊಂಡಿದ್ದಾರೆ. "ಭವಿಷ್ಯದಲ್ಲಿ ವಿಕಸನಗೊಳ್ಳಲಿರುವ ಎಸಿಎಯ ಅಧ್ಯಕ್ಷರಾಗಿ ನೇಮಕವಾಗಿರುವುದು ನಿಜಕ್ಕೂ ಹೆಮ್ಮೆ ಎನಿಸಿದೆ. ಈ ಹಿಂದೆ ಈ ಅಧಿಕಾರವನ್ನು ನಿರ್ವಹಿಸಿದ್ದ ಹಾದಿಯಲ್ಲೇ ಕಾರ್ಯನಿರ್ವಹಿಸಲು ಉತ್ಸುಕನಾಗಿದ್ದೇನೆ. ಕ್ರಿಕೆಟ್ಗೆ ಮತ್ತೊಂದು ಆಯಾಮದಲ್ಲಿ ಕೊಡುಗೆ ನೀಡಲು ಅವಕಾಶ ಸಿಕ್ಕಿರುವುದು ನನ್ನಲ್ಲಿ ಇನ್ನಷ್ಟು ಉತ್ಸಾಹ ತಂದಿದೆ." ಎಂದು ಶೇನ್ ವ್ಯಾಟ್ಸ್ನ ಹರ್ಷ ವ್ಯಕ್ತಪಡಿಸಿದ್ದಾರೆ. ಮಹಿಳಾ ಕ್ರಿಕಟರ್ ಗಳಿಗೆ ಹೊಸದಾಗಿ ತಂದಿರುವ ಪೋಷಕರ ನೀತಿಯನ್ನು ಇದೇ ವೇಳೆ 38ರ ಪ್ರಾಯದ ವ್ಯಾಟ್ಸನ್ ಶ್ಲಾಘಿಸಿದ್ದಾರೆ. ಮಾಜಿ ಆಲ್ರೌಂಡರ್ ಶೇನ್ ವ್ಯಾಟ್ಸನ್ ಅವರು 59 ಟೆಸ್ಟ್, 190 ಏಕದಿನ ಹಾಗೂ 58 ಟಿ-20 ಪಂದ್ಯಗಳಲ್ಲಿ ಆಸ್ಟ್ರೇಲಿಯಾ ತಂಡವನ್ನು ಪ್ರತಿನಿಧಿಸಿದ್ದಾರೆ.