ನವದೆಹಲಿ, ಏ 8,ತಮ್ಮ ಅಂತರಾಷ್ಟ್ರೀಯ ಕ್ರಿಕೆಟ್ ವೃತ್ತಿ ಬದುಕಿನ ವೇಳೆ ಘಟಾನುಘಟಿ ಆಟಗಾರರ ಎದುರು ಆಡಿದ ಅನುಭವ ಹೊಂದಿರುವ ಅಫ್ರಿದಿ ಇದೀಗ ಕ್ವಾರಂಟೈನ್ ದಿನಗಳಲ್ಲಿ ಯೂಟ್ಯೂಬ್ ಮೂಲಕ ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟ್ ತಂಡವನ್ನು ಪ್ರಕಟಿಸಿದ್ದಾರೆ. ತಮ್ಮ ಆಲ್ ಟೈಮ್ ಬೆಸ್ಟ್ ತಂಡದಲ್ಲಿ ಪಾಕಿಸ್ತಾನದ ಮಾಜಿ ಆರಂಭಿಕ ಬ್ಯಾಟ್ಸ್ ಮನ್ ಸಯೀದ್ ಅನ್ವರ್ ಅವರನ್ನು ಓಪನಿಂಗ್ ಬ್ಯಾಟ್ಸ್ ಮನ್ ಆಗಿ ಆಯ್ಕೆ ಮಾಡಿದ್ದಾರೆ. ಅನ್ವರ್ ಟೆಸ್ಟ್ ಮತ್ತು ಏಕದಿನ ಕ್ರಿಕಟ್ ನಲ್ಲಿ ಸಮಗ್ರವಾಗಿ 13 ಸಾವಿರ ರನ್ ಗಳಿಸಿದ ಸಾಧನೆ ಮಾಡಿದ್ದರೆ. ಅವರೊಟ್ಟಿಗೆ ಮತೊಬ್ಬ ಆರಂಭಿಕ ಬ್ಯಾಟ್ಸ್ಮನ್ ಆಗಿ ಆಸ್ಟ್ರೇಲಿಯಾದ ಆಡಮ್ ಗಿಲ್ ಕ್ರಿಸ್ಟ್ ಅವರನ್ನು ಆಯ್ಕೆ ಮಾಡಿದ್ದಾರೆ.ಅಫ್ರಿದಿ ತಮ್ಮ ತಂಡದಲ್ಲಿ ಭಾರತದ ಒಬ್ಬ ಆಟಗಾರನಿಗೆ ಮಾತ್ರ ಅವಕಾಶ ನೀಡಿದ್ದಾರೆ. ಭಾರತ ತಂಡದ ಮಾಜಿ ದಿಗ್ಗಜ ಬ್ಯಾಟ್ಸ್ ಮನ್ ಸಚಿನ್ ತೆಂಡೂಲ್ಕರ್ ಅವರನ್ನು ತಂಡದ ನಾಲ್ಕನೇ ಕ್ರಮಾಂಕದ ಬ್ಯಾಟ್ಸ್ ಮನ್ ಆಗಿ ಅಫ್ರೀದಿ ಆಯ್ಕೆ ಮಾಡಿದ್ದು, ಮೂರನೇ ಕ್ರಮಾಂಕದಲ್ಲಿ ಆಸ್ಟ್ರೇಲಿಯದ ರಿಕಿ ಪಾಂಟಿಂಗ್ ಇದ್ದಾರೆ. ಅಫ್ರಿದಿ ತಂಡದಲ್ಲಿ ಒಬ್ಬನೇ ಭಾರತೀಯ.ಅಫ್ರಿದಿ ಆಲ್ ಟೈಮ್ ಇಲೆವೆನ್ ತಂಡದಲ್ಲಿ ಸಯೀದ್ ಅನ್ವರ್, ಆಡಮ್ ಗಿಲ್ ಕ್ರಿಸ್ಟ್, ರಿಕಿ ಪಾಂಟಿಂಗ್, ಸಚಿನ್ ತೆಂಡೂಲ್ಕರ್, ಇಂಜಮಾಮ್ ಉಲ್ ಹಕ್, ಜಾಕ್ ಕಾಲಿಸ್, ರಶೀದ್ ಲತೀಫ್ (ವಿಕೆಟ್ ಕೀಪರ್), ವಸೀಂ ಅಕ್ರಮ್, ಶೇನ್ ವಾರ್ನ್, ಗ್ಲೆನ್ ಮೆಗ್ರಾತ್, ಶೋಯೆಬ್ ಅಖ್ತರ್ ಇದ್ದಾರೆ.