ಹೆಣ್ಣು ಗಂಡಿನ ಅಸಮಾನತೆ ಹೋದಾಗ ಲೈಂಗಿಕ ಅಪರಾಧಗಳು ಕಡಿಮೆಯಾಗುತ್ತವೆ

Sexual crimes will decrease when gender inequality disappears

ಲೋಕದರ್ಶನ ವರದಿ 

ಹೆಣ್ಣು ಗಂಡಿನ ಅಸಮಾನತೆ ಹೋದಾಗ ಲೈಂಗಿಕ ಅಪರಾಧಗಳು ಕಡಿಮೆಯಾಗುತ್ತವೆ 

ಬಳ್ಳಾರಿ 19: ನಗರದ ಗಾಂಧಿ ಭವನದಲ್ಲಿ ಂಋಙಓ ಯುವಜನ ಸಂಘಟನೆ ಮಹಿಳೆಯರ ಘನತೆ ಮತ್ತು ಮಾನವ ಮೌಲ್ಯ ಉಳಿಸಿ ಎಂಬ ಸಮಾಜಮುಖಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.   

ಕಾರ್ಯಕ್ರಮವನ್ನು ಉದ್ಘಾಟಿಸಿದ ಹಂಪಿ ಕನ್ನಡ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿಗಳಾದ ಪ್ರೊಫೆಸರ್ ಎ. ಮುರಿಗೆಪ್ಪ ಅವರು ಯುವಜನರನ್ನು ಉದ್ದೇಶಿಸಿ ಮಾತನಾಡುತ್ತಾ. ಹೆಣ್ಣು ಗಂಡಿನ ನಡುವಿನ ಅಸಮಾನತೆ ಯಾವಾಗ ಕೊನೆಗಣಿಸುತ್ತೇವೋ ಅವಾಗ ಲೈಂಗಿಕ ಅಪರಾಧಗಳು ಕಡಿಮೆ ಆಗುತ್ತವೆ. ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಗಳಿಗೆ ಯಾವ ಸ್ಥಳಗಳು ಉಳಿದಿಲ್ಲ. ಮಠ-ಮಾನ್ಯಗಳು, ಶಾಲಾ-ಕಾಲೇಜುಗಳು, ಕೆಲಸ ಮಾಡುವ ಸ್ಥಳಗಳು ಎಲ್ಲಾ ಕಡೆಯೂ ಮಹಿಳೆಯರನ್ನು ಕೀಳಾಗಿ ನೋಡುವ ಸಂಸ್ಕೃತಿ ಸಮಾಜದಲ್ಲಿ ಬೆರೂರಿದೆ. ಹಾಗಾಗಿ ಈ ಸಮಾವೇಶದಲ್ಲಿ ಇಂತಹ ಅಸಮಾನತೆಗಳ ವಿರುದ್ಧ ಧ್ವನಿ ಎತ್ತಲು ನಾವೆಲ್ಲ ಸಂಕಲ್ಪ ಮಾಡಬೇಕು ಎಂದು ನುಡಿದರು.” 

ಮಕ್ಕಳ ತಜ್ಞರಾದ ಡಾ. ಯೋಗಾನಂದ ರೆಡ್ಡಿ ಙ.ಅ ಅವರು ಮಾತನಾಡಿ... “ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ ಕೊಲೆಗಳು ನಮ್ಮ ದೇಶದಲ್ಲಿ ಅಷ್ಟೇ ಅಲ್ಲ, ಇಡೀ ವಿಶ್ವದಾದ್ಯಂತ ನಡೆಯುತ್ತಿದೆ ಆದರೆ ದುರಂತ ಎಂದರೆ ಅತ್ಯಾಚಾರಗಳ ರಾಜಧಾನಿಯಾಗಿ ನಮ್ಮ ದೇಶವೇ ಇಂತಹ ಕುಕೃತ್ಯದಲ್ಲಿ ವಿಶ್ವದಲ್ಲೇ ಮುಂದಿದೆ. ಪ್ರತಿ 20 ನಿಮಿಷಕ್ಕೆ ಒಬ್ಬ ಹೆಣ್ಣುಮಕ್ಕಳ ಮೇಲೆ ಅಂದರೆ ದಿನಕ್ಕೆ 70 ಅತ್ಯಾಚಾರಗಳ ಅವೂ ಕೂಡ ದಾಖಲಾದ ಪ್ರಕರಣಗಳು ಮಾತ್ರ. ಇನ್ನೂ ದಾಖಲಾಗದೆ ಇರುವಂತಹವು ಹಲವಾರು ಪ್ರಕರಣಗಳು ಬೆಳಕಿಗೆ ಬರುವುದಿಲ್ಲ. ಇನ್ನು ಲೈಂಗಿಕ ಅಪರಾಧಗಳ ಕುರಿತು ಹೇಳಬೇಕೆಂದರೆೆ ಬರೀ ಅತ್ಯಾಚಾರ ಆದಾಗ ಅಷ್ಟೇ ಅಪರಾಧ ಎಂಬುದು ಎಲ್ಲಾರಿಗು ಗೊತ್ತಿರುವ ವಿಚಾರ. ಆದರೇ ಇನ್ನು ಹಲವು ಆಯಾಮಗಳಲ್ಲಿ ನೊದುವುದಾದರೆ, ಕುಟುಂಬಗಳಲ್ಲಿ ಕುತುಂಬ ಸದಸ್ಯರಿಂದಲೇ ನಡೆಯುವಂತಹ ದೌರ್ಜನ್ಯ, ಬಾಲ್ಯವಿವಾಹ, ಇನ್ನೂ ಹಲವು ಅತ್ಯಾಚಾರವೇ ಆಗುತ್ತದೆ. ಎಷ್ಟೇ ಕಾನೂನುಗಳು ಬದಲಾದರೂ ಈ ಕೃತ್ಯಗಳು ನಿಂತಿಲ್ಲ ಕಾರಣ ಅಪರಾಧಿಗಳಿಗೆ ಶಿಕ್ಷೆ ಆಗದೇ ಇರುವಂತಹದ್ದು. ಹಲವಾರು ವರ್ಷಗಳು ಪ್ರಕರಣಗಳನ್ನು ಮುಂದೂಡುವಿಕೆಯಿಂದ ಸತ್ಯವನ್ನು ಸುಳ್ಳು ಮಾಡುವ ಎಷ್ಟೋ ಪ್ರಕರಣಗಳನ್ನು ನಾವು ಗಮನಿಸುತ್ತಿದ್ದೇವೆ, ಹೀಗಾದಾಗ ಅಪರಾಧಮಾಡುವವರಿಗೆ ಕಾನೂನಿನ ಭಯ ಇಲ್ಲದಂತಾಗಿ ಇಂತಹ ಘಟನೆಗಳು ಮರುಕಳಿಸುತ್ತಿವೆ. ಕಾನೂನುಗಳನ್ನು ಹೆಚ್ಚು ಮಾಡುವುದರಿಂದ ಜನಮಾನಸದಲ್ಲಿ ಸರ್ಕಾರಗಳ ಬಗ್ಗೆ ನಂಬಿಕೆ ಕಡಿಮೆಯಾಗುತ್ತಿದೆ ಎಂದರು.” 


ಡಾ. ಜಿ. ಶಶಿಕುಮಾರ್ ಅವರು ಇಂದಿನ ಯುವಮನಸ್ಸಿನ ತಲ್ಲಣಗಳು ಎನ್ನುವ ವಿಷಯದ ಕುರಿತು ಮಾತನಾಡುತ್ತಾ ದೇಶದ ಬೆಳವಣಿಗೆಯಲ್ಲಿ ಮುಖ್ಯ ಪಾತ್ರವಹಿಸಬೇಕಾದ ಯುವಕರನ್ನು ನಮ್ಮನ್ನಾಳುವ ಸರ್ಕಾರಗಳು ಮಧ್ಯಮಾದಕ ವಸ್ತುಗಳ ಚಟಗಳಿಗೆ, ಅಶ್ಲೀಲ ಸಿನೆಮಾ ಸಾಹಿತ್ಯ ಮತ್ತು ಕೋಮುವಾದಗಳಂತಹ ಸಮಾಜಘಾತುಕ ಕೆಲಸಗಳಲ್ಲಿ ಮುಳುಗಿಸಿ, ನಿರುದ್ಯೋಗ, ಬೆಲೆ ಏರಿಕೆ ಹಾಗೂ ಭ್ರಷ್ಟಾಚಾರದಂತಹ ಸಮಸ್ಯೆಗಳ ವಿರುದ್ಧ ಧ್ವನಿ ಎತ್ತದಂತೆ ನೈತಿಕ ಬೆನ್ನೆಲುಬನ್ನು ಮುರಿದು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿವೆ. ಹಾಗಾಗಿ ಇಂದಿನ ಯುವಕರು ಭಗತ್ ಸಿಂಗ್ ನೇತಾಜಿಯಂತಹ ಮಹಾನ್ ಚೇತನಗಳ ವಿಚಾರಗಳನ್ನು ಅಳವಡಿಸಿಕೊಂಡು ಅನ್ಯಾಯದ ವಿರುದ್ಧ ಧ್ವನಿ ಎತ್ತಲು ಮುಂದಾಗುಬೇಕೆಂದು ಕರೆ ನೀಡಿದರು.” 


ಈ ಸಂದರ್ಭದಲ್ಲಿ ಕಾರ್ಯಕ್ರಮದ ಆಶಯನುಡಿಗಳನ್ನು ಂಋಙಓ ರಾಜ್ಯ ಕಾರ್ಯದರ್ಶಿಗಳಾದ ಸಿದ್ಧಲಿಂಗ ಬಾಗೇವಾಡಿ ಅವರು ಮಾತನಾಡಿದರು. ಹಾಗೂ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಅಧ್ಯಕ್ಷರಾದ ಎ. ಪಂಪಾಪತಿ ಕೋಳೂರು ವಹಿಸಿದ್ದರು. ಕಾರ್ಯಕ್ರಮದ ನಿರೂಪಣೆ ಮತ್ತು ಸ್ವಾಗತವನ್ನು ಜಿಲ್ಲಾ ಕಾರ್ಯದರ್ಶಿ ಜಗದೀಶ್ ನೇಮಕಲ್ ಅವರು ನಡೆಸಿಕೊಟ್ಟರು. ಹಾಗೂ ಕಾರ್ಯಕ್ರಮದಲ್ಲಿ ಸದಸ್ಯರುಗಳಾದ ಸಿದ್ದು, ಪ್ರಮೋದ್, ಅರುಣ್ ಭಗತ್, ಯಲ್ಲಪ್ಪ ಮತ್ತು ವಿವಿಧ ವೃತ್ತಿಪರ ಕಾಲೇಜುಗಳ ವಿದ್ಯಾರ್ಥಿ-ಯುವಕರು, ಉಪನ್ಯಾಸಕರು ಹಾಗೂ ನಗರದ ಹಿರಿಯ ನಾಗರಿಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.