ಲೋಕದರ್ಶನ ವರದಿ
ಮುಂಡಗೋಡ 16: ಅಪ್ರಾಪ್ತೆಯನ್ನು ಲೈಂಗಿಕವಾಗಿ ಬಳಸಿಕೊಂಡು ಮದುವೆ ಯಾಗುವುದಾಗಿ ಪ್ರಮಾಣಮಾಡಿ ತಲೆ ಮರೆಸಿಕೊಂಡಿದ್ದ ನಿಜವಾದ ಆರೋಪಿ ಮಂಜುನಾಥ ತಳವಾರ ಗುರುವಾರ ಮುಂಡಗೋಡ ಪೊಲೀಸರು ಬಂದಿಸಿದ್ದಾರೆ
ಅಪ್ರಾಪ್ತೆಯೊಬ್ಬಳಿಗೆ ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ ಬಗ್ಗೆ ನವಂಬರ 2ರಂದು ಪೊಲೀಸ್ ಠಾಣೆಯಲ್ಲಿ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ನವಂಬರ 2ರಂದು ಪೊಲೀಸ್ ಠಾಣೆಯಲ್ಲಿ ಮಳಗಿ ಗ್ರಾಮದ ಸಂತೋಷ ಹುಲ್ಲೂರ(23) ಎಂಬ ಯುವಕನ ವಿರುದ್ಧ ಸಂತ್ರಸ್ತೆಯ ತಾಯಿ ದೂರು ದಾಖಲಿಸಿದ್ದರು.
ಆಗ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡು ಯಲ್ಲಾಪುರ ಸಿ.ಪಿ.ಐ. ಡಾ.ಮಂಜುನಾಥ ನಾಯ್ಕ ಮತ್ತು ಇಲ್ಲಿನ ಪ್ರಭಾರ ಪಿಎಸ್ಆಯ್ ಚಂದ್ರಶೇಖರ ಹರಿಹರ ಸಂತೋಷ ಹುಲ್ಲೂರನ ವಿಚಾರಣೆಗೊಳಪಡಿಸಿದಾಗ ಇವನು ಈ ಕೃತ್ಯ ಮಾಡಿರಲಿಕ್ಕಿಲ್ಲಾ ಎಂಬ ಅನುಮಾನ ಮೂಡಿ ಬಂದಿದೆ.
ಸಂಶಯದ ಸುಳಿಯನ್ನು ಬೆನ್ನುಹತ್ತಿದ ಪೊಲೀಸರು ಬೇರೊಬ್ಬನ ಕೈವಾಡವಿರುವ ಬಗ್ಗೆ ಕೆಲ ಗ್ರಾಮಸ್ಥ ರಿಂದ ತಿಳಿದು ಬಂದು ಮಳಗಿ ಗ್ರಾಮದ ವಿವಾಹಿತ ಮಂಜುನಾಥ ತಳವಾರ(22)ನ ಈ ಕೃತ್ಯವನ್ನು ಮಾಡಿದ್ದಾನೆಂದು ಖಾತ್ರಿಪಡಿಸಿಕೊಂಡು ಈತನನ್ನು ವಿಚಾರಣೆಗೆ ಒಳಪಡಿಸಿದಾಗ ಮತ್ತು ಸಂತ್ರಸ್ತೆಯೂ ಮಂಜುನಾಥನ ಹೆಸರನ್ನು ಒಪ್ಪಿಕೊಂಡಾಗ ಪ್ರಕರಣಕ್ಕೆ ಅಂತಿಮ ತೆರೆ ಎಳೆದಂತಾಯಿತು.
ಆರೋಪಿ ಮಂಜುನಾಥ ತಳವಾರನನ್ನು ಗುರುವಾರ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.