ಲೋಕದರ್ಶನ ವರದಿ
ಕಾಗವಾಡ 02: ರಾಜ್ಯದ ಹಲವು ಜಿಲ್ಲೆಗಳಲ್ಲಿ, ಹಳ್ಳಿಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಿಸುತ್ತಿದೆ. ಆದರೆ, ಸುದೈವದಿಂದ ಕಾಗವಾಡ ಮತಕ್ಷೇತ್ರ ಇದರಿಂದ ದೂರು ಉಳಿದಿದೆ. ತಾಲೂಕಿನ ತಹಸೀಲ್ದಾರ, ಇನ್ನೂಳಿದ ಇಲಾಖೆ, ವೈದ್ಯಾಧಿಕಾರಿ, ಆಶಾ, ಅಂಗನವಾಡಿ ಕಾರ್ಯಕತರ್ೆಯರಿಗೆ ಶ್ರೇಯ ಸಲ್ಲುತ್ತದೆಯೆಂದು ಕಾಗವಾಡ ಕ್ಷೇತ್ರದ ಶಾಸಕರು, ಜವಳಿ ಇಲಾಖೆ ಸಚಿವ ಶ್ರೀಮಂತ ಪಾಟೀಲ ಕಾಗವಾಡದಲ್ಲಿ ಹೇಳಿದರು.
ಗುರುವಾರ ರಂದು ಕಾಗವಾಡದ ವಿಶ್ರಾಂತಿ ಗೃಹದಲ್ಲಿ ತಾಲೂಕಾ ಮಟ್ಟದ ಅಧಿಕಾರಿಗಳ ಸಭೆ ಹಮ್ಮಿಕೊಂಡಿದ್ದರು. ಸಭೆಯಲ್ಲಿ ಕೊರೊನಾ ಮಹಾಮಾರಿ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡು ಸಚಿವರು ಅಧಿಕಾರಿಗಳ ಸೇವೆಮೆಚ್ಚಿದರು.
ಕಾಗವಾಡ ತಹಸೀಲ್ದಾರ ಪ್ರಮೀಳಾ ದೇಶಪಾಂಡೆ,ವೈದ್ಯಾಧಿಕಾರಿ ಪುಷ್ಪಲತಾ ಸುನದಕಲ ಇವರು ಸಚಿವರಿಗೆ ಈ ವರೆಗೆ ಲೋಕುರ, ಕಾಗವಾಡ ಗ್ರಾಮಗಳಲ್ಲಿ ಬಂದಿರುವ ಕೊರೊನಾ ಪಾಸಿಟಿವ್ ಸೋಂಕಿತರ ಬಗ್ಗೆ ಮಾಹಿತಿ ನೀಡುವಾಗ, ಈಗ ಆ ಸೋಂಕಿತರು ನೆಗೆಟಿವ್ದಲ್ಲಿ ಪರಿವರ್ತನೆಗೊಂಡಿದ್ದಾರೆ. ಈಗ ಕ್ಷೇತ್ರದಲ್ಲಿ ಯಾವುದೇ ಸೋಂಕಿತರಿಲ್ಲಾ ಎಂದು ಹೇಳಿದರು.
ಸಚಿವ ಶ್ರೀಮಂತ ಪಾಟೀಲ ಮಾತನಾಡುವಾಗ, ಕಾಗವಾಡ ಕ್ಷೇತ್ರ ನೆರೆಯ ಮಹಾರಾಷ್ಟ್ರ ರಾಜ್ಯದ ಗಡಿ ತಾಲ್ಲೂಕುವಾಗಿದ್ದರೂ, ಕೊರೊನಾ ತಡೆಗಟ್ಟಲು ಯಶಸ್ವಿವಾಗಿದ್ದ ಬಗ್ಗೆ ರಾಜ್ಯದ ವಿಧಾನಸಭಾ ಸಭಾಪತಿ ಕಾಗೇರಿ ಇವರು ಮೆಚ್ಚುಗೆ ವ್ಯಕ್ತಪಡಿಸಿದರು.
ಸಚಿವರು ತಹಸೀಲ್ದಾರ ಇವರೊಂದಿಗೆ ಮಾತನಾಡಿ, ಕುಸನಾಳ, ಮೋಳವಾಡ, ಜುಗೂಳ ಗ್ರಾಮಗಳಲ್ಲಿ ಕಳೇದ ವರ್ಷ ಮಹಾಪೂರಿನಲ್ಲಿ ಮುಳುಗಡೆಗೊಂಡಿರುವ ಸುಮಾರು 500 ಮನೆಗಳು ಕಟ್ಟಿಸುವ ಬಗ್ಗೆ ಸಕರ್ಾರದ ಆದೇಶದಂತೆ ಕಾರ್ಯನಿರ್ವಹಿಸಿರಿ ಎಂದು ಹೇಳಿದರು. ಆಗ ಕೆಲ ತಾಂತ್ರಿಕ ಸಮಸ್ಯೆಗಳ ಬಗ್ಗೆ ತಹಸೀಲ್ದಾರರು ಸಚಿವರಿಗೆ ಮಾಹಿತಿ ನೀಡಿದರು.
ಕಾಗವಾಡ ಪಿಎಸ್ಐ ಹನುಮಂತ ಧರ್ಮಟ್ಟಿ, ಸಿಡಿಪಿಓ ಸುಸ್ಕಾರ, ಲೋಕೊಪಯೋಗಿ ಇಲಾಖೆಯ ಎಂ.ಎಸ್.ಮಗದುಮ್ಮ, ಕೃಷಿ ಇಲಾಖೆ ಅಧಿಕಾರಿ ಎಂ.ಎಸ್.ಬಿರಾದಾರ, ಚಿಕ್ಕೋಡಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ವಿನಾಯಕ ಬಾಗಡಿ, ತಾಪಂ ಸದಸ್ಯ ಕೃಷ್ಣಾ ಶಿಂಧೆ, ಜಿಪಂ ಸದಸ್ಯ ಅಜೀತ ಚೌಗುಲೆ, ಬಿಜೆಪಿ ಪಕ್ಷದ ಮುಖಂಡರಾದ ಶ್ರೀನಿವಾಸ ಪಾಟೀಲ, ಸುಶಾಂತ ಪಾಟೀಲ, ಸುಭಾಷ ಕಠಾರೆ, ಭರತೇಶ್ವರ ಪಾಟೀಲ, ತಮ್ಮಣ್ಣಾ ಪಾರಶೆಟ್ಟಿ, ಜೈಪಾಲ ಯರೆಂಡೋಲೆ, ರಾಮಗೌಡಾ ಪಾಟೀಲ, ಮಹಾವೀರ ಕಾತ್ರಾಳೆ, ಸುಭಾಷ ಮೋನೆ, ಸೇರಿದಂತೆ ಅನೇಕರು ಇದ್ದರು.