ಗದಗ 26 : ಗದಗ ತಾಲ್ಲೂಕಿನಲ್ಲಿ ಎಪ್ರೀಲ್ 26 ರಿಂದ ಜೂನ 6 ರವರಗೆ ರಾಷ್ಟ್ರೀಯ ಏಳನೇ ಸುತ್ತಿನ ಕಾಲುಬಾಯಿ ಬೇನೆ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ದಿ. 26 ರಂದು ಗದಗ ತಾಲ್ಲೂಕಿನ ಬಿಂಕದಕಟ್ಟಿ ಗ್ರಾಮದಲ್ಲಿ ಗೋಪೂಜೆ ಮುಖಾಂತರ ತಾಲ್ಲೂಕಿನ ಏಳನೇ ಸುತ್ತಿನ ಕಾಲುಬಾಯಿ ಲಸಿಕಾ ಕಾರ್ಯಕ್ರಮವನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ತುಳಸಾ .ಎಸ್, ತಿಮ್ಮನಗೌಡ್ರು ಮತ್ತು ಮಾಜಿ ತಾಲೂಕ ಪಂಚಾಯತ್ ಅಧ್ಯಕ್ಷ ರವಿ.ಎಂ.ಮೂಲಿಮನಿ ಇವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರು ಗ್ರಾಮದ ರೈತರು ಹಿರಿಯರು ಉಪಸ್ಥಿತರಿದ್ದರು, ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಡಾ.ಎಚ್. ನಾಗರಾಜ ನಾಯಕ, ಡಾ.ಹೀರಾಲಾಲ್.ಎಸ್. ಜನಗಿ, ಡಾ.ಜಗದೇಶ .ಎಸ್. ಮಟ್ಟಿ, ಡಾ. ವಿದ್ಯಾ.ಎಮ್ ಕಾಂತಿ, ಬಿ.ಟಿ, ಅರಕೇರಿ ಸೇರಿದಂತೆ ಇಲಾಖೆಯ ಸಿಬ್ಬಂದಿ ಹಾಗೂ ಪಶು ಸಖಿಯರು ಹಾಜರಿದ್ದರು.