ಬೆಂಗಳೂರು, ಫೆ 10 : ಸರಣಿ ಅಪಘಾತ ಸಂಭವಿಸಿದ ಪರಿಣಾಮ ಮೂವರು ಗಾಯಗೊಂಡಿರುವ ಘಟನೆ ಯಶವಂತಪುರ ರೈಲು ನಿಲ್ದಾಣದ ಬಳಿ ಸಂಭವಿಸಿದೆ.
ಕುಡಿದ ಮತ್ತಿನಲ್ಲಿದ್ದ ಮಿನಿ ಬಸ್ ಚಾಲಕನೋರ್ವ ರಸ್ತೆ ಬದಿಯಲ್ಲಿದ್ದ ಆಟೋಗಳಿಗೆ ಡಿಕ್ಕಿ ಹೊಡೆದು ಅವಾಂತರ ಸೃಷ್ಟಿಸಿದ್ದಾನೆ.
ಗೊರೆಗುಂಟೆ ಪಾಳ್ಯ ಕಡೆಯಿಂದ ಸಿಟಿ ಕಡೆಗೆ ಬರುತ್ತಿದ್ದ ಮಿನಿ ಬಸ್ಸು ಚಾಲಕ ವೆಂಕಟಸ್ವಾಮಿ, ಕುಡಿದ ಮತ್ತಿನಲ್ಲಿ ನಿಯಂತ್ರಣ ತಪ್ಪಿ ಆಟೋಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಮೂರು ಆಟೋಗಳು ಜಖಂ ಆಗಿದ್ದು ಚಾಲಕರಿಗೆ ತಲೆ, ಕಾಲು, ಕೈ ಭಾಗಗಳಿಗೆ ಗಾಯಗಳಾಗಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಅದೃಷ್ಟವಶಾತ್ ಬಸ್ಸಿನಲ್ಲಿ ಯಾರೂ ಇರದ ಪರಿಣಾಮ ಅನಾಹುತವೊಂದು ತಪ್ಪಿದಂತಾಗಿದೆ. ಚಾಲಕ ವೆಂಕಟ ಸ್ವಾಮಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.