ಲೋಕದರ್ಶನ ವರದಿ
ಬೆಳಗಾವಿ: 1799ರಲ್ಲಿ ಟಿಪ್ಪುವಿನ ನಂತರ ಹರಿದು ಹಂಚಿಹೋಗಿದ್ದ ಕನ್ನಡ ನಾಡನ್ನು ಒಂದುಗೂಡಿಸಲು ಶ್ರಮಿಸಿದ ಕನ್ನಡ ಕುಲಪುರೋಹಿತರಾದ ಆಲೂರ ವೆಂಕಟರಾಯರು, ಡೆಪ್ಯೂಟಿ ಚನ್ನಬಸಪ್ಪನವರು, ಕಡಪಾ ರಾಘವೇಂದ್ರರಾಯರು ಮುದವೀಡು ಕೃಷ್ಣರಾಯರು, ವಾಲಿಚನ್ನಪ್ಪನವರು, ಅಣ್ಣುಗುರುಜಿಯವರು, ಜಂಗಿ ಮುರಗಯ್ಯನವರು, ರುದ್ರಾಪುರ ಶಿವಲಿಂಗ ದೇಸಾಯಿರು, ಪ್ಯಾಟಿ ಶಾಮರಾಯರು, ಅನಂತರಾವ ಚಿಕ್ಕೋಡಿಯವರು, ಬಿ. ಎನ್. ದಾತಾರ್, ಶಂ. ಬಾ. ಜೋಶಿ, ಹುಯಿಲಗೋಳ ನಾರಾಯಣರಾಯರು, ಗೋವಿಂದ ಪೈ, ಕಲಬುಗರ್ಿಯ ಚಂದ್ರಶೇಖರ ಪಾಟೀಲ, ಹಳ್ಳಿಕೇರಿ ಗುದ್ಲೆಪ್ಪ, ರಾ. ಹ. ದೇಶಪಾಂಡೆ, ಉತ್ತಂಗಿ ಚನ್ನಪ್ಪ, ಡಾ. ಶಿವಬಸವ ಸ್ವಾಮಿಗಳು ನಾಗನೂರ, ಸಿದ್ದಪ್ಪ ಕಂಬಳಿಯಂಥ ಮಹಾನು ಭಾವರು ಕನರ್ಾಟಕ ಏಕೀಕರಣಕ್ಕಾಗಿ ದುಡಿದು ಅಖಂಡ ಕನರ್ಾಟವನ್ನಾಗಿ ಮಾಡಿ "ಕನರ್ಾಟಕ ಒಂದೇ, ಒಂದೆ ಕನರ್ಾಟಕ' ಎಂದು ಘೋಷಿಸಿ 1956 ನವ್ಹಂಬರ ಒಂದರಂದು 'ಮೈಸೂರು ರಾಜ್ಯದ ಉದಯಕ್ಕೆ ಕಾರಣರಾದರು. ನಂತರ 1973ರಲ್ಲಿ ರಾಜ್ಯದ ಮುಖ್ಯಮಂತ್ರಿ ದಿ. ದೇವರಾಜ ಅರಸರ ಕಾಲದಲ್ಲಿ 'ಕನರ್ಾಟಕ ರಾಜ್ಯ ಎಂಬ ಹೆಸರು ಇಡಲಾಯಿತು. ಆದರೆ 'ಹೆಸರಾಯಿತು ಕನರ್ಾಟಕ, ಉಸಿರಾಗಲಿ ಕನ್ನಡ' ಎಂದು ಕನ್ನಡ ಹೋರಾಟಗಾರರು, ಸಾಹಿತಿಗಳು ಕೂಗುತ್ತಾ ಇದ್ದಾರೆ. ಅದು ಇನ್ನೂ ಸಹಕಾರಗೊಂಡಿಲ್ಲ. ಮೈಸೂರು, ಬೆಂಗಳೂರು ಕಡೆಯವರು ಉತ್ತರ ಕನರ್ಾಟಕದ ಅಭಿವೃದ್ಧಿಗೆ ಎಳ್ಳಷ್ಟು ಗಮನ ಹರಿಸುತ್ತಿಲ್ಲ. ಅಖಂಡತ್ವ ಅಖಂಡತ್ವ ಎಂದು ಔಧಾರ್ಯತೋರಿ ಸಮಾಧಾನಿಗಳಾದ ಉತ್ತರ ಕನರ್ಾಟಕ, ಹೈದ್ರಾಬಾದ ಕನರ್ಾಟಕ ಭಾಗವು ಎಲ್ಲ ದೃಷ್ಟಿಯಿಂದಲೂ ವಂಚಿತವಾಗಿದೆ. ಇದು ಹೀಗೆ ಮುಂದುವರೆದರೆ 'ಪ್ರತ್ಯೇಕ ರಾಜ್ಯವಾದರೇ ತಪ್ಪೇನು? ಇದರಲ್ಲಿ ಆಶ್ಚರ್ಯಪಡಬೇಕಾಗಿಲ್ಲ ಎಂಬ ಮಾತನ್ನು ಸಾಹಿತಿಗಳು, ಚಿಂತಕರು ಆದ ಸಿ. ಕೆ. ಜೋರಾಪೂರ ಅವರು "ಜೈ ಭುವನೇಶ್ವರಿ ಯುವಕ ಸಂಘದವರು ರಾಮತೀರ್ಥನಗರದಲ್ಲಿ ಏರ್ಪಡಿಸಿದ್ದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವ್ಯಕ್ತಪಡಿಸಿದರು.
ಶಾಸಕರಾದ ಅನಿಲ ಬೆನಕೆ, ಮಾಜಿ ಶಾಸಕರಾದ ಎಸ್. ಸಿ. ಮಾಳಗಿ, ಕನ್ನಡದ ಮಹಾಪೌರ ಬಸಪ್ಪ ಚಿಕ್ಕಲದಿನ್ನಿ, ಸಾಹಿತಿ ಸಿ. ಕೆ. ಜೋರಾಪೂರರನ್ನು 'ಜೈ ಭುವನೇಶ್ವರಿ ಯುವಕ ಸಂಘ'ದವರು ಸನ್ಮಾನಿಸಿದರು. ನಂತರ ಆಕರ್ಿಷ್ಟರಿಂದ ಕನ್ನಡ ಚಲನಚಿತ್ರಗಳ ಹಾಡಿನ ಕಾರ್ಯಕ್ರಮ ಏರ್ಪಟ್ಟಿತು. ಪ್ರಥಮದಲ್ಲಿ ವ್ಹಿ. ಕೆ. ಬಡಿಗೇರರಿಂದ ಸ್ವಾಗತ, ರಾಮತೀರ್ಥನಗರ ಬಸವೇಶ್ವರ ಬಡಾವಣೆಯ ವಿದ್ಯಾಥರ್ಿನಿಯರಿಂದ ನಾಡಗೀತೆ, ನಿರೂಪಣೆಯನ್ನು ಉದಯ ಹಿರೇಮಠರಿಂದ, ವಂದನಾರ್ಪಣೆ ಮಹಾಂತೇಶ ವಕ್ಕುಂದ ಅವರಿಂದ ಮತ್ತು ಸಭೆಯಲ್ಲಿ ಉಪಾಧ್ಯಕ್ಷರಾದ ಗಿರೀಶ ಗಾಣಗೇರ, ರಾಮ ದನ್ನಾ, ಅಪ್ಪಾಸಾಹೇಬ ಕಾಂಬಳೆ, ಬಸವರಾಜ ಜರಳಿ, ಈರಯ್ಯಾ ಖೋತ ಮುಂತಾದವರು ಉಪಸ್ಥಿತರಿದ್ದರು.