ಸ್ಲಂ ಪ್ರದೇಶಗಳ ಅಭಿವೃಧ್ದಿಗೆ ನಗರಸಭೆ ಬಜೇಟನಲ್ಲಿ ಪ್ರತ್ಯೇಕ ಅನುದಾನ ಮೀಸಲಿಡಬೇಕು-ಇಮ್ತಿಯಾಜ ಮಾನ್ವಿ

Separate funds should be allocated in the municipal budget for the development of slum areas - Imtiy

ಸ್ಲಂ ಪ್ರದೇಶಗಳ ಅಭಿವೃಧ್ದಿಗೆ ನಗರಸಭೆ ಬಜೇಟನಲ್ಲಿ ಪ್ರತ್ಯೇಕ ಅನುದಾನ ಮೀಸಲಿಡಬೇಕು-ಇಮ್ತಿಯಾಜ ಮಾನ್ವಿ 

ಗದಗ-26, ಗದಗ-ಬೆಟಗೇರಿ ನಗರದ ಕೊಳಚೆ ಪ್ರದೇಶಗಳಲ್ಲಿ ಯಾವುದೇ ನಾಗರೀಕ ಸೌಲಭ್ಯಗಳು ಇಲ್ಲದೇ ಸ್ಥಳೀಯ ಸ್ಲಂ ನಿವಾಸಿಗಳು ಪ್ರತಿನಿತ್ಯ ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ, ನಗರದ ಶೇ:90ರಷ್ಟು ಕೊಳಗೇರಿ ಜನರು ನಗರಸಭೆಗೆ ತಮ್ಮ ಆಸ್ತಿ ತೆರಿಗೆಯನ್ನು ಕಟ್ಟುತ್ತಾರೆ, ಆದರೆ ನಗರಸಭೆಯಿಂದ ಸ್ಲಂ ಪ್ರದೇಶಗಳ ಅಭಿವೃಧ್ದಿ ಮಾಡುವಲ್ಲಿ ತಾರತಮ್ಯ ನೀತಿಯನ್ನು ಅನುಸರಿಸಲಾಗುತ್ತಿದೆ, ಆದ ಕಾರಣ ಈ ಬಾರಿ ನಗರಸಭೆಯ 2025-26 ಸಾಲಿನ ಬಜೇಟನಲ್ಲಿ ಗದಗ-ಬೆಟಗೇರಿ ಅವಳಿ ನಗರದ ಕೊಳಗೇರಿ ಪ್ರದೇಶಗಳ ಅಭಿವೃಧ್ದಿಗಾಗಿ ಪ್ರತ್ಯೇಕ ಅನುದಾನ ಮೀಸಲಿಡಬೇಕೆಂದು ಗದಗ ಜಿಲ್ಲಾ ಸ್ಲಂ ಸಮಿತಿ ಅಧ್ಯಕ್ಷರಾದ ಇಮ್ತಿಯಾಜ.ಆರ್‌.ಮಾನ್ವಿ ಒತ್ತಾಯಿಸಿದರು, ಅವರು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಕರೆದ ನರಗಸಭೆಯ 2025-26 ಸಾಲಿನ ಬಜೇಟ್ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿ ಕಳೆದ ಹಲವಾರು ವರ್ಷಗಳಿಂದ ಬಜೇಟ ಪೂರ್ವಭಾವಿ ಸಭೆಯನ್ನು ಕರೆಯಲಾಗುತ್ತಿದೆ, ಸಭೆಯಲ್ಲಿ ಅನೇಕ ಸಂಘ-ಸಂಸ್ಥೆಗಳ ಮುಖಂಡರು ನಗರದ ಅಭಿವೃಧ್ದಿಗಾಗಿ, ವಾರ್ಡಿನ ಅಭಿವೃಧ್ದಿಗಾಗಿ ತಮ್ಮ-ತಮ್ಮ ಪ್ರದೇಶಗಳ ಅಭಿವೃಧ್ದಿಗಾಗಿ ಸಲಹೆಗಳನ್ನು ನೀಡುತ್ತಾರೆ, ಆದರೆ ಸಾರ್ವಜನಿಕರು ನೀಡಿರುವ ಅಭಿಪ್ರಾಯಗಳಿಗೆ ಆದ್ಯತೆ ನೀಡದೇ ನಗರಸಭೆಯ ಬಜೇಟ್‌ನಲ್ಲಿ ತಮ್ಮಗೆ ಮನಬಂದಂತೆ ತಯಾರಿಸಿ ಅನುದಾನ ನೀಡಲಾಗುತ್ತಿದೆ, ಇದು ಕೇವಲ ಕಾಟಾಚಾರಕ್ಕಾಗಿ ಬಜೇಟ್ ಪೂರ್ವಭಾವಿ ಸಭೆಯನ್ನು ಕರೆಲಾಗುತ್ತಿದ್ದು, ಇದನ್ನು ಕೈಬಿಟ್ಟು ಸಂಘ-ಸಂಸ್ಥೆಗಳ ಮುಖಂಡರು ನೀಡಿರುವ ಸರ್ವಾಂಗಿಣ ನಗರದ ಅಭಿವೃಧ್ದಿಗಾಗಿ ಬಜೇಟನಲ್ಲಿ ಆದ್ಯತೆ ನೀಡಬೇಕು, ಕೊಳಗೇರಿ ಪ್ರದೇಶಗಳ ಜನರ ಜ್ವಾಲಂತ ಸಮಸ್ಯಗಳಾದ ರಸ್ತೆ, ಚರಂಡಿ, ಶೌಚಾಲಯ ಹಾಗೂ ಕುಡಿಯುವ ನೀರಿನ ಫರ್ಯಾಯ ವ್ಯವಸ್ಥೆಗಾಗಿ ಅನುದಾನ ಮೀಸಲಿಡಬೇಕು, ಗದಗ-ಬೆಟಗೇರಿಯ ಮುಖ್ಯ ರಸ್ತೆಯಾಗಿರುವ ಪಾಲಾ-ಬದಾಮಿ ರಸ್ತೆಯ ಅಂಡರ್ ಬ್ರೀಜ್‌ನಲ್ಲಿ ಯಾವುದೇ ಒಂದು ದೊಡ್ಡ ವಾಹನ ಸಿಕ್ಕಿಹಾಕೊಂಡ್ರೆ ಟ್ರಾಫೀಕ್ ಜಾಮ್ ಆಗಿ ಗದಗ ಬಾಗದಿಂದ ಬೆಟಗೇರಿ ಭಾಗಕ್ಕೆ ಹೋಗುವ ಹಾಗೂ ಬೆಟಗೇರಿ ಭಾಗದಿಂದ ಗದಗ ಭಾಗಕ್ಕೆ ಹೋಗುವ ನೂರಾರು ಪ್ರಯಾಣಿಕರು ಪರದಾಡುವಂತ ಸ್ಥಿತಿ ನಿರ್ಮಾಣವಾಗುತ್ತಿದೆ, ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ಗದಗದಿಂದ ಬೆಟಗೇರಿ ಕಡೆಗೆ ಹೋಗುವ ಅಂಡರ್ ಬ್ರೀಜ್ ಬದಲಾಗಿ ಮೇಲಸೇತುವೆ ನಿರ್ಮಾಣ ಮಾಡುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಮಾಡಲು ಕ್ರಮ ಕೈಗೊಳ್ಳಬೇಕೆಂದು ಹೇಳಿದರು.