ಸೆನ್ಸೆಕ್ಸ್ 212 ಅಂಕ ಏರಿಕೆ

 ಮುಂಬೈ, ಅ 15:          ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ 212 ಅಂಕ ಏರಿಕೆ ಕಂಡಿದೆ.      ಸೆನ್ಸೆಕ್ಸ್ 189 ಅಂಕ ಏರಿಕೆ ಕಂಡು 38,426.79 ರಲ್ಲಿತ್ತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ ಸಹ 61.50 ಅಂಕ ಏರಿಕೆ ಕಂಡು 11,402.65 ರಲ್ಲಿ ವಹಿವಾಟು ಆರಂಭಿಸಿತು. ಸೆನ್ಸೆಕ್ಸ್ ಅಂತರ ದಿನದ ಗರಿಷ್ಠ ಮತ್ತು ಕನಿಷ್ಠ ಮಟ್ಟ ಕ್ರಮವಾಗಿ 38,462.20 ಮತ್ತು 38,238.27.  ನಿಫ್ಟಿ ಅಂತರ ದಿನದ ಗರಿಷ್ಠ ಮತ್ತು ಕನಿಷ್ಠ ಮಟ್ಟ ಕ್ರಮವಾಗಿ 11,408.35 ಮತ್ತು 11,342.10. ಹಣಕಾಸು, ಬ್ಯಾಂಕ್ ಎಕ್ಸ್, ಬಂಡವಾಳ ಸರಕುಗಳು ಆರಂಭಿಕ ವಹಿವಾಟಿನಲ್ಲಿ ಚೇತರಿಕೆ ನೀಡಿವೆ.    ಮಾರುತಿ ಸುಜುಕಿ ಶೇ 2.07 ರಷ್ಟು ಏರಿಕೆ ಕಂಡು 6960.50 ರೂ, ಹೀರೋ ಮೋಟೊ ಕಾರ್ಪ್  ಶೇ 1.98 ರಷ್ಟು ಏರಿಕೆಯಾಗಿ 2661 ರೂ, ಕೋಟಕ್ ಬ್ಯಾಂಕ್ ಶೇ 1.97 ರಷ್ಟು ಹೆಚ್ಚಳ ಕಂಡು 1614.95 ರೂ, ಹಿಂದ್ ಯೂನಿಲಿವರ್ ಶೇ 1.51 ಏರಿಕೆಯಾಗಿ 20.45.15 ರೂ ನಷ್ಟಿತ್ತು.     ಇನ್ಫೋಸಿಸ್ ಶೇ 1.74 ರಷ್ಟು ಇಳಿಕೆ ಕಂಡು 771.95 ರೂ, ವಿ ಇ ಡಿ ಎಲ್ ಶೇ 1.42 ರಷ್ಟು ಇಳಿಕೆಯಾಗಿ 145.75 ರೂ, ಟಾಟಾ ಮೋಟಾರ್ಸ್ ಶೇ 1.21 ರಷ್ಟು ಕುಸಿದು 126.15 ರೂ ಮತ್ತು ಭಾರ್ತಿ ಏರ್ ಟೆಲ್ ಶೇ 1.98 ರಷ್ಟು ಇಳಿಕೆಯಾಗಿ 385.70 ರೂ ನಷ್ಟಿದೆ.