ಮುಂಬೈ, ನ 19 : ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ 71 ಪೈಸೆ ಏರಿಕೆ ಕಂಡಿದೆ. ಸೆನ್ಸೆಕ್ಸ್ 71 ಅಂಕ ಏರಿಕೆ ಕಂಡು 40,455.36 ರಲ್ಲಿ ವಹಿವಾಟು ಆರಂಭಿಸಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ ಸಹ 29 ಅಂಕ ಏರಿಕೆ ಕಂಡು 11,914.35 ರಲ್ಲಿ ವಹಿವಾಟು ಆರಂಭಿಸಿದೆ. ಸೆನ್ಸೆಕ್ಸ್ ಅಂತರ ದಿನದ ಗರಿಷ್ಠ ಮತ್ತು ಕನಿಷ್ಠ ಮಟ್ಟ ಕ್ರಮವಾಗಿ 40,455.36 ಮತ್ತು 40,290.21. ನಿಫ್ಟಿ ಅಂತರ ದಿನದ ಗರಿಷ್ಠ ಮತ್ತು ಕನಿಷ್ಠ ಮಟ್ಟ ಕ್ರಮವಾಗಿ 11,928.50 ಮತ್ತು 11,881.75. ಭಾರ್ತಿ ಏರ್ ಟೆಲ್ ಶೇ 5.01 ರಷ್ಟು ಏರಿಕೆ ಕಂಡು 429.65 ರೂ, ಆಕ್ಸಿಸ್ ಬ್ಯಾಂಕ್ ಶೇ 2.21 ರಷ್ಟು ಏರಿಕೆ ಕಂಡು 7.39 ರೂ, ರಿಲಯನ್ಸ್ ಇಂಡಸ್ಟ್ರೀಸ್ ಶೇ 1.89 ರಷ್ಟು ಏರಿಕೆಯಾಗಿ 1486.10 ರೂ ಮತ್ತು ಇಂಡಸ್ ಇಂಡ್ ಬ್ಯಾಂಕ್ ಶೇ 1.71 ರಷ್ಟು 1398.25 ರೂ ನಷ್ಟಿದೆ. ಟಿಸಿಎಸ್ ಶೇ 1.68 ರಷ್ಟು ಇಳಿಕೆ ಕಂಡು 2115.50 ರೂ, ಎಮ್ & ಎಮ್ ಶೇ 1.53 ರಷ್ಟು ಇಳಿಕೆಯಾಗಿ 564.40 ರೂ, ಟಾಟಾ ಮೋಟಾಸರ್್ ಡಿವಿಆರ್ ಶೇ 1.34 ರಷ್ಟು ಇಳಿಕೆಯಾಗಿ 77.50 ರೂ ಮತ್ತು ವಿಇಡಿಎಲ್ ಶೇ 1.26 ರಷ್ಟು ಇಳಿಕೆ ಕಂಡು 141.60 ರೂ ನಷ್ಟಿತ್ತು.