ಸೆನ್ಸೆಕ್ಸ್ 288.33 ಅಂಕ ಏರಿಕೆ

ಮುಂಬೈ, ಜ ೬ ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ವಾ ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ 288.33 ಅಂಕ ಏರಿಕೆ ಕಂಡು 40,964.96 ರಲ್ಲಿತ್ತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 80.35 ಅಂಕ ಏರಿಕೆ ಕಂಡು 12,073.40 ರಲ್ಲಿತ್ತು. ಸೆನ್ಸೆಕ್ಸ್ ಅಂತರ ದಿನದ ಗರಿಷ್ಠ ಮತ್ತು ಕನಿಷ್ಠ ಮಟ್ಟ ಕ್ರಮವಾಗಿ 41,230.14 ಮತ್ತು 40,947.13. ನಿಫ್ಟಿ ಅಂತರ ದಿನದ ಗರಿಷ್ಠ ಮತ್ತು ಕನಿಷ್ಠ ಮಟ್ಟ ಕ್ರಮವಾಗಿ 12,152.15 ಮತ್ತು 12,066.55. ಟಾಟಾ ಸ್ಟೀಲ್ ಶೇ 1.66 ರಷ್ಟು ಏರಿಕೆ ಕಂಡು 481.05 ರೂ, ರಿಲಯನ್ಸ್ ಇಂಡಸ್ಟ್ರೀಸ್ ಶೇ 1.39 ರಷ್ಟು ಏರಿಕೆಯಾಗಿ 1522.40 ರೂ, ಎನ್‌ಟಿಪಿಸಿ ಶೇ 1.35 ರಷ್ಟು ಏರಿಕೆಯಾಗಿ 120.50 ರೂ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ ಶೇ 1.32 ರಷ್ಟು ಏರಿಕೆಯಾಗಿ 1257.50 ರೂ ನಷ್ಟಿತ್ತು. ಹೀರೋಮೊಟೊ ಕಾರ್ಪ್ ಶೇ 0.51 ರಷ್ಟು ಇಳಿಕೆಯಾಗಿ 2356.50 ರೂ, ಟೈಟಾನ್ ಶೇ 0.36 ರಷ್ಟು ಇಳಿಕೆಯಾಗಿ 1154.20 ರೂ, ಪವರ್‌ಗ್ರಿಡ್ ಶೇ 0.31 ರಷ್ಟು ಇಳಿಕೆ ಕಂಡು 192.50 ರೂ ನಷ್ಟಿದೆ.