ಸೆನ್ಸೆಕ್ಸ್ 189 ಅಂಕ ಏರಿಕೆ

ಮುಂಬೈ, ಅ 14:      ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ ಸೋಮವಾರದ ಆರಂಭಿಕ ವಹಿವಾಟಿನಲ್ಲಿ 189 ಅಂಕ ಏರಿಕೆ ಕಂಡಿದೆ. ಸೆನ್ಸೆಕ್ಸ್ 189 ಅಂಕ ಏರಿಕೆ ಕಂಡು 38,316.29 ರಲ್ಲಿತ್ತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ ಸಹ 59.55 ಅಂಕ ಏರಿಕೆ ಕಂಡು 11,364.60 ಯಲ್ಲಿ ವಹಿವಾಟು ಆರಂಭಿಸಿತು. ಸೆನ್ಸೆಕ್ಸ್ ಅಂತರ ದಿನದ ಗರಿಷ್ಠ ಮತ್ತು ಕನಿಷ್ಠ ಮಟ್ಟ ಕ್ರಮವಾಗಿ 38,375.99 ಮತ್ತು 38,066.13. ನಿಫ್ಟಿ ಅಂತರ ದಿನದ ಗರಿಷ್ಠ ಮತ್ತು ಕನಿಷ್ಠ ಮಟ್ಟ ಕ್ರಮವಾಗಿ 11,379.80 ಮತ್ತು 11,290.05. ಎಫ್ ಎಮ್ ಸಿ ಜಿ, ಟೆಲಿಕಾಂ, ಬಂಡವಾಳ ಸರಕುಗಳು ಆರಂಭಿಕ ವಹಿವಾಟಿನಲ್ಲಿ ಚೇತರಿಕೆ ನೀಡಿವೆ. ಟಾಟಾ ಮೋಟಾರ್ಸ್ ಶೇ 5.36 ರಷ್ಟು ಏರಿಕೆ ಕಂಡು 127.85 ರೂ, ಟಾಟಾ ಮೋಟಾರ್ಸ್ ಡಿ ವಿ ಶೇ 4.83 ರಷ್ಟು ಏರಿಕೆಯಾಗಿ 56.45 ರೂ, ಟಾಟಾ ಸ್ಟೀಲ್ ಶೇ 3.21 ರಷ್ಟು ಹೆಚ್ಚಳ ಕಂಡು 350.30 ರೂ, ವಿಇಡಿಎಲ್ ಶೇ 3.2 ಏರಿಕೆಯಾಗಿ 151.65 ರೂ ಮತ್ತು ಒ ಎನ್ ಜಿ ಸಿ ಶೇ 2.63 ರಷ್ಟು ಏರಿಕೆ ಕಂಡು 132.50 ರೂ ನಷ್ಟಿತ್ತು. ಇನ್ಫೋಸಿಸ್ ಶೇ 2.91 ರಷ್ಟು ಇಳಿಕೆ ಕಂಡು 792 ರೂ, ಬಜಾಜ್ ಫೈನ್ಯಾನ್ಸ್ ಶೇ 1.45 ರಷ್ಟು ಇಳಿಕೆಯಾಗಿ 3918.25 ರೂ, ಪವರ್ ಗ್ರಿಡ್ ಶೇ 0.57 ರಷ್ಟು ಕುಸಿದು 199.85 ರೂ ಮತ್ತು ಯೆಸ್ ಬ್ಯಾಂಕ್ ಶೇ 0.38 ರಷ್ಟು ಇಳಿಕೆಯಾಗಿ 39.45 ರೂ ನಷ್ಟಿದೆ.