ಸೆನ್ಸೆಕ್ಸ್ 12.81 ಅಂಕ ಏರಿಕೆ

ಮುಂಬೈ, ಜ 17 :           ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ ಶುಕ್ರವಾರದ ವಹಿವಾಟಿನ ಅಂತ್ಯಕ್ಕೆ 12.81 ಅಂಕ ಏರಿಕೆ ಕಂಡು 41,945.37 ರಲ್ಲಿತ್ತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 3.15 ಅಂಕ ಇಳಿಕೆ ಕಂಡು 12,352.35 ರಲ್ಲಿತ್ತು.

ಸೆನ್ಸೆಕ್ಸ್ ಅಂತರ ದಿನದ ಗರಿಷ್ಠ ಮತ್ತು ಕನಿಷ್ಠ ಮಟ್ಟ ಕ್ರಮವಾಗಿ 42,063.93 ಮತ್ತು 41,850.29. ನಿಫ್ಟಿ ಅಂತರ ದಿನದ ಗರಿಷ್ಠ ಮತ್ತು ಕನಿಷ್ಠ ಮಟ್ಟ ಕ್ರಮವಾಗಿ 12,385.45 ಮತ್ತು 12,321.40.

ಭಾರತಿ ಏರ್ಟೆಲ್ ಶೇ 5.47 ರಷ್ಟು ಏರಿಕೆಯಾಗಿ 500 ರೂ, ರಿಲಯನ್ಸ್ ಇಂಡಸ್ಟ್ರೀಸ್ ಶೇ 2.79 ರಷ್ಟು ಏರಿಕೆಯಾಗಿ 1580.65 ರೂ, ಸನ್ ಫಾರ್ಮ್ ಶೇ 1.24 ರಷ್ಟು ಏರಿಕೆಯಾಗಿ 454.45 ರೂ, ಎಚ್ಸಿಎಲ್ ಟೆಕ್ ಶೇ 0.91 ರಷ್ಟು ಏರಿಕೆಯಾಗಿ 598.80 ರೂ ಮತ್ತು ಮಾರುತಿ ಸುಜುಕಿ ಶೇ 0.80 ರಷ್ಟು ಏರಿಕೆಯಾಗಿ 7524.55 ರೂ ನಷ್ಟಿತ್ತು. 

ಇಂಡಸ್ಇಂಡ್ ಬ್ಯಾಂಕ್ ಶೇ 2.46 ರಷ್ಟು ಇಳಿಕೆಯಾಗಿ 1352.55 ರೂ, ಎಸ್ಬಿಐ ಶೇ 1.62 ರಷ್ಟು ಇಳಿಕೆಯಾಗಿ 318 ರೂ, ಎಚ್ಡಿಎಫ್ಸಿ ಶೇ 1.23 ರಷ್ಟು ಇಳಿಕೆಯಾಗಿ 2451.70 ರೂ ಮತ್ತು ಐಸಿಐಸಿಐ ಬ್ಯಾಂಕ್ ಶೇ 1.14 ರಷ್ಟು ಇಳಿಕೆಯಾಗಿ 530.90 ರೂ ನಷ್ಟಿದೆ.