ಸೆನ್ಸೆಕ್ಸ್ 158 ಅಂಕ ಇಳಿಕೆ

ಮುಂಬೈ, ನ 8:    ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ 158 ಅಂಕ ಇಳಿಕೆ ಕಂಡಿದೆ.      ಸೆನ್ಸೆಕ್ಸ್ 158.57 ಅಂಕ ಇಳಿಕೆ ಕಂಡು 40,495.17 ರಲ್ಲಿತ್ತು.  ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ ಸಹ 54.15 ಅಂಕ ಇಳಿಕೆ ಕಂಡು 11,957.90 ರಲ್ಲಿ ವಹಿವಾಟು ಆರಂಭಿಸಿತು.      ಸೆನ್ಸೆಕ್ಸ್ ಅಂತರ ದಿನದ ಗರಿಷ್ಠ ಮತ್ತು ಕನಿಷ್ಠ ಮಟ್ಟ ಕ್ರಮವಾಗಿ 40,630.56 ಮತ್ತು 40,452.26.  ನಿಫ್ಟಿ ಅಂತರ ದಿನದ ಗರಿಷ್ಠ ಮತ್ತು ಕನಿಷ್ಠ ಮಟ್ಟ ಕ್ರಮವಾಗಿ 11,996.55 ಮತ್ತು 11,948.50.      ಹಣಕಾಸು, ಬ್ಯಾಂಕ್ ಎಕ್ಸ್, ಬಂಡವಾಳ ಸರಕುಗಳು ಆರಂಭಿಕ ವಹಿವಾಟಿನಲ್ಲಿ ಚೇತರಿಕೆ ನೀಡಿವೆ.    ಐಸಿಐಸಿಐ ಬ್ಯಾಂಕ್ ಶೇ 2.47 ರಷ್ಟು ಏರಿಕೆ ಕಂಡು 490.50 ರೂ, ಯೆಸ್ ಬ್ಯಾಂಕ್  ಶೇ 2.41 ರಷ್ಟು ಏರಿಕೆಯಾಗಿ 68.10 ರೂ, ಇಂಡಸ್ ಇಂಡ್ ಬ್ಯಾಂಕ್ ಶೇ 2.40 ರಷ್ಟು ಹೆಚ್ಚಳ ಕಂಡು 1414 ರೂ, ಎಮ್ & ಎಮ್  ಶೇ 1.83 ಏರಿಕೆಯಾಗಿ 591.05 ರೂ ನಷ್ಟಿತ್ತು.     ಸನ್ ಫಾರ್ಮ್ ಶೇ 2.79 ರಷ್ಟು ಇಳಿಕೆ ಕಂಡು 428.15 ರೂ, ಹಿಂದ್ ಯೂನಿಲಿವರ್ ಶೇ 1.92 ರಷ್ಟು ಇಳಿಕೆಯಾಗಿ 2096.65 ರೂ, ಐಟಿಸಿ ಶೇ 1.67 ರಷ್ಟು ಕುಸಿದು 261.45 ರೂ ಮತ್ತು ಟಾಟಾ ಸ್ಟೀಲ್ ಶೇ 1.66 ರಷ್ಟು ಇಳಿಕೆಯಾಗಿ 396.45 ರೂ ನಷ್ಟಿದೆ.