ಮುಂಬೈ, ಅ 24: ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ಸೆನ್ಸೆಕ್ಸ್ ಗುರುವಾರದ ಬೆಳಗಿನ ವಹಿವಾಟಿನಲ್ಲಿ 75 ಅಂಕ ಇಳಿಕೆ ಕಂಡಿದೆ. ಸೆನ್ಸೆಕ್ಸ್ 75.68 ಅಂಕ ಇಳಿಕೆ ಕಂಡು 38,983.15 ರಲ್ಲಿತ್ತು. ಮುಂಬೈ ಷೇರುಪೇಟೆ ಸೂಚ್ಯಂಕ ನಿಫ್ಟಿ ಸಹ 26.05 ಅಂಕ ಇಳಿಕೆಯಾಗಿ 11,578.05 ರಲ್ಲಿತ್ತು. ಸೆನ್ಸೆಕ್ಸ್ ಅಂತರ ದಿನದ ಗರಿಷ್ಠ ಮತ್ತು ಕನಿಷ್ಠ ಮಟ್ಟ ಕ್ರಮವಾಗಿ 39,327.15 ಮತ್ತು 38,952.93. ನಿಫ್ಟಿ ಅಂತರ ದಿನದ ಗರಿಷ್ಠ ಮತ್ತು ಕನಿಷ್ಠ ಮಟ್ಟ ಕ್ರಮವಾಗಿ 11,679.60 ಮತ್ತು 11,564.70. ಒ ಎನ್ ಜಿ ಸಿ ಶೇ 1.44 ರಷ್ಟು ಇಳಿಕೆ ಕಂಡು 139.90, ಎಮ್ & ಎನ್ ಶೇ 1.44 ಇಳಿದು 583.20 ರೂ, ಎಸ್ ಬಿ ಐ ಶೇ 1.38 ಇಳಿಕೆ ಕಂಡು 271.70 ರೂ ಮತ್ತು ಇಂಡಸ್ ಇಂಡ್ ಬ್ಯಾಂಕ್ ಶೇ 1.37 ರಷ್ಟು ಇಳಿಕೆಯಾಗಿ 1314.25 ರೂ ನಷ್ಟಿತ್ತು. ಎಚ್ ಸಿ ಎಲ್ ಶೇ 2.72 ರಷ್ಟು ಹೆಚ್ಚಳ ಕಂಡು 1125.50, ಟೆಕ್ ಮಹೀಂದ್ರ ಶೇ 1.51 ರಷ್ಟು ಹೆಚ್ಚಳವಾಗಿ 738 ರೂ, ವಿ ಇ ಡಿ ಎಲ್ ಶೇ 0.79 ರಷ್ಟು ಹೆಚ್ಚಳ ಕಂಡು 167.25 ಮತ್ತು ಬಜಾಜ್ ಆಟೋ ಶೇ 0.56 ರಷ್ಟು ಹೆಚ್ಚಳವಾಗಿ 3179 ರೂ ನಷ್ಟಿತ್ತು.