ಮುಂಬೈ,ಜ 6 ,ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ ಸೋಮವಾರದ ಆರಂಭಿಕ ವಹಿವಾಟಿನಲ್ಲಿ 479.52 ಅಂಕ ಇಳಿಕೆ ಕಂಡು 40.985.09 ರಲ್ಲಿತ್ತು.ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 141.65 ಅಂಕ ಇಳಿಕೆ ಕಂಡು 12,085 ರಲ್ಲಿತ್ತು.ಸೆನ್ಸೆಕ್ಸ್ ಅಂತರ ದಿನದ ಗರಿಷ್ಠ ಮತ್ತು ಕನಿಷ್ಠ ಮಟ್ಟ ಕ್ರಮವಾಗಿ 41,378.34 ಮತ್ತು 40,923.52.
ನಿಫ್ಟಿ ಅಂತರ ದಿನದ ಗರಿಷ್ಠ ಮತ್ತು ಕನಿಷ್ಠ ಮಟ್ಟ ಕ್ರಮವಾಗಿ 12,179.10 ಮತ್ತು 12,062.85 . ಟಾಟನ್ ಶೇ.2.11 ರಷ್ಟು ಏರಿಕೆ ಕಂಡು 1163.50 ರೂ, ಟಿಸಿಎಸ್ ಶೇ.0.29 ರಷ್ಟು ಏರಿಕೆ ಕಂಡು 2206.70 ರೂ. ಮತ್ತು ಟೆಕ್ ಮಹೀಂದ್ರಾ ಶೇ.0.15 ರಷ್ಟು ಏರಿಕೆ ಕಂಡು 776.20 ರೂ ನಷ್ಟಿತ್ತು.ಎಸ್‌ಬಿಐ ಶೇ.3.07ರಷ್ಟು ಇಳಿಕೆಯಾಗಿ 323.50 ರೂ., ಹೀರೋಮೊಟೊ ಕಾರ್ಪ್ ಶೇ 2.12 ರಷ್ಟು ಇಳಿಕೆ ಕಂಡು 2382 ರೂ., ಏಷ್ಯನ್ ಪೇಂಟ್ಸ್ ಶೇ 2.10 ರಷ್ಟು ಇಳಿಕೆ ಕಂಡು 1714.95 ರೂ., ಮಾರುತಿ ಸುಜುಕಿ ಶೇ 2.08 ರಷ್ಟು ಇಳಿಕೆ ಕಂಡು 7105 ರೂ ನಷ್ಟಿದೆ.