ಹಿರಿಯ ಪತ್ರಕರ್ತರಾದ ಎಂ .ಚಿರಂಜೀವಿ ಹಾಗೂ ಮನೋಹರ ದತ್ತಿ ನಿಧಿ ಪ್ರಶಸ್ತಿಗೆ ಆಯ್ಕೆ

Senior journalists M. Chiranjeevi and Manohar selected for the Endowment Fund Award

ಹಿರಿಯ ಪತ್ರಕರ್ತರಾದ ಎಂ .ಚಿರಂಜೀವಿ ಹಾಗೂ ಮನೋಹರ ದತ್ತಿ ನಿಧಿ ಪ್ರಶಸ್ತಿಗೆ ಆಯ್ಕೆ

ರಾಣೇಬೆನ್ನೂರ 20 : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಪ್ರತಿ ವರ್ಷ ಕೊಡ ಮಾಡುವ ದತ್ತಿ ನಿಧಿ ಪ್ರಶಸ್ತಿಗೆ  ಪುರಸ್ಕೃತರಾದ ಹಿರಿಯ ಪತ್ರಕರ್ತರಾದ ಎಂ .ಚಿರಂಜೀವಿ ಹಾಗೂ  ಮನೋಹರ ಮಲ್ಲಾಡದ ಅವರನ್ನು ನಗರದ ಬಿಜೆಪಿ ಕಾರ್ಯಲಯದಲ್ಲಿ ಬುಧವಾರದಂದು ಮಾಜಿ ಶಾಸಕ ಅರುಣಕುಮಾರ ಪೂಜಾರ ಮತ್ತು ನಗರಸಭಾ ಸದಸ್ಯರುಗಳು, ಬಿಜೆಪಿ ಕಾರ್ಯಕರ್ತರು ಸನ್ಮಾನಿಸಿ ಗೌರವಿಸಿದರು.  ಈ ವೇಳೆ ಮಾಜಿ ಶಾಸಕ ಅರುಣಕುಮಾರ ಪೂಜಾರ ಮಾತನಾಡಿ, ಸಮಾಜದ ಅಂಕು ಡೊಂಕು ತಿದ್ದಿ ಸರಿ ದಾರಿಗೆ ತರುವಲ್ಲಿ ಪತ್ರಕರ್ತರ ಸೇವೆ ಅಮೂಲ್ಯವಾಗಿದೆ.  

ಅದರಲ್ಲೂ ರಾಜಕಾರಣಿಗಳನ್ನು ಸಮಾಜ ಮುಖಿ ಕಾರ್ಯಮಾಡುವಲ್ಲಿ ಎಡವಿದಾಗ ಎಚ್ಚರಿಸಿ ಸನ್ಮಾರ್ಗಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಅಂತಹ ಉತ್ತಮ ಸೇವೆ ಸಲ್ಲಿಸಿದ  ಚಿರಂಜೀವಿ ಹಾಗೂ  ಮನೋಹರ ಮಲ್ಲಾಡದ ಅವರನ್ನು ಅವರನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಗುರುತಿಸಿ ಪುರಸ್ಕೃರಿಸಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದರು.   ನಗರಸಭೆಯ ಉಪಾಧ್ಯಕ್ಷ ನಾಗರಾಜ ಪವಾರ,  ನಗರಸಭಾ ಸದಸ್ಯರಾದ ಪ್ರಕಾಶ ಪೂಜಾರ, ನಿಂಗರಾಜ ಕೋಡಿಹಳ್ಳಿ,  ಮಲ್ಲಣ್ಣ ಅಂಗಡಿ, ರಮೇಶ ಕರಡಣ್ಣನವರ, ಮುಖಂಡರಾದ ಬಸವರಾಜ ಚಳಗೇರಿ, ಸಿದ್ದಣ್ಣ ಚಿಕ್ಕಬಿದರಿ, ರಾಯಣ್ಣ ಮಾಕನೂರ, ಕುಬೇರ​‍್ಪ ಕೊಂಡಜ್ಜಿ, ಮಾಳಪ್ಪ ಪೂಜಾರ, ಅಮೋಘ ಬಾದಾಮಿ, ಪವನಕುಮಾರ ಮಲ್ಲಾಡದ ಮೊದಲಾದ ಕಾರ್ಯಕರ್ತರು ಉಪಸ್ಥಿತರಿದ್ದರು.