ಕರಿಯಮ್ಮ ದೇವಿ ಜಾತ್ರಾ ಮಹೋತ್ಸವ

ಕರಿಯಮ್ಮ ದೇವಿ ಜಾತ್ರಾ ಮಹೋತ್ಸವ  Kariamma Devi Jatra Festival

 ಧಾರವಾಡ   11:   ಧಾರವಾಡದ ಕೆಲಗೇರಿ ರಸ್ತೆ ಯಲ್ಲಿರುವ ಶಾಂತಿ ನಿಕೇತನ ನಗರದ ಶ್ರೀ ಕರಿಯಮ್ಮ ದೇವಿ ಜಾತ್ರಾ ಮಹೋತ್ಸವ ಮತ್ತು 23 ನೇಯ ವಾರ್ಷಿಕೋತ್ಸವದ ಸಮಾರಂಭ ಇದೇ ಮಾರ್ಚ 13 ರಿಂದ 19 ರ ವರೆಗೆ ವಿಜೃಂಭಣೆಯಿಂದ ನಡೆಯಲಿದೆ.     ಅನಾದಿಕಾಲದಿಂದಲೂ ರೈತರು ಕರಿಯಮ್ಮ ದೇವಿಗೆ ಶ್ರದ್ದೆ ಹಾಗೂ ಭಕ್ತಿಯಿಂದ ಪೂಜೆ ಸಲ್ಲಿಸುತ್ತಾ ಬಂದಿದ್ದು, ಈ ದೇವಸ್ಥಾನವು ಭಾವೈಕ್ಯತೆಯ ಕೇಂದ್ರವು ಸಹ ಆಗಿದೆ.     

ಮಾರ್ಚ 13 ರಿಂದ ದೇವಿಗೆ ವಿಶೇಷ ಪೂಜೆ ನಡೆಯಲಿದ್ದು, ಪ್ರತಿ ದಿನ ಸಂಜೆ ಭಜನೆ ಹಾಗೂ  ಪ್ರಾರ್ಥನೆ ನಡೆಯಲಿದ್ದು, ರಾತ್ರಿ 8.30 ಕ್ಕೆ ಪ್ರಸಾದ ಮತ್ತು 9 ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರಿ​‍್ಡಸಲಾಗಿದೆ.     ಮಾರ್ಚ 17 ರಂದು ಸಾಯಂಕಾಲ 4 ಗಂಟೆಗೆ ಮಹಿಳೆಯರಿಂದ ಸಾಮೂಹಿಕ ಕಂಕುಮಾರ್ಚನೆ ನಡೆಯಲಿದೆ. ಮಾರ್ಚ 18 ರಂದು ಬೆಳ್ಳಿಗ್ಗೆ ಕಾಕಡಾರತಿ, ಸಂಕಲ್ಪ ಪೂಜೆ, ಅಭಿಷೇಕ ಮತ್ತು ಮಹಾಮಂಗಳಾರತಿ ನಡೆಯಲಿದ್ದು,  ಸಂಜೆ 7 ಗಂಟೆಗೆ ಭಜನೆ ಹಾಗೂ ಪಲ್ಲಕ್ಕಿ ಉತ್ಸವ ನಡೆಯಲಿದೆ.   

ಮಾರ್ಚ 19 ಗುರುವಾರ ಯುಗಾದಿ ಹಬ್ಬದಂದು ಬೆಳ್ಳಗ್ಗೆ ಸುಪ್ರಭಾತ, ಕಾಕಡಾರತಿ ಹಾಗೂ ಅಭಿಷೇಕ  ಮುಂಜಾನೆ 9 ಗಂಟೆಗೆ ದೇವಿಗೆ ವಿಶೇಷ ಅಲಂಕಾರ ಹಾಗೂ 10 ಗಂಟೆಗೆ ಮಹಿಳೆಯರಿಂದ ಉಡಿ ತುಂಬುವ ಕಾರ್ಯಕ್ರಮ ನಡೆಯಲಿದೆ. ಸಂಜೆ 4 ಗಂಟೆಗೆ ದೇವಿಗೆ ಎರಡನೇ ಅಲಂಕಾರ ಮಾಡಲಾಗುವುದು.ನಂತರ ಪಲ್ಲಕ್ಕಿ ಉತ್ಸವ  ಪ್ರದಕ್ಷಿಣೆ ಶಾಂತಿ ನಿಕೇತನ ನಗರದಲ್ಲಿ ನಡೆಯಲಿದೆ.     ಜಾತ್ರಾ ಮಹೋತ್ಸವದ ಈ ಎಲ್ಲ ಕಾರ್ಯಕ್ರಮಗಳಲ್ಲಿ ಹೆಚ್ಚನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಶಾಸಕರು ಮತ್ತು ದೇವಸ್ಥಾನದ ಚೇರಮನ್ನರಾದ ಶ್ರೀ ಎನ್‌ಎಚ್‌.ಕೋನರೆಡ್ಡಿ ಅವರು ಮನವಿ ಮಾಡಿಕೊಂಡಿದ್ದಾರೆ.