ಕಠಿಣ ಪರಿಸ್ಥಿತಿಯಲ್ಲಿಯೂ ವ್ಯಕ್ತಿ ಆಶಾವಾದಿಯಾಗಿ ಯಾವುದೋ ಒಂದು ನೆಲೆಯನ್ನು ಕಾಣಲು, ಉನ್ನತ ಬದುಕನ್ನು ರೂಪಿಸಿಕೊಳ್ಳಲು ಸಮಸ್ಯೆಗಳ "ರುದ್ಧ ಹೋರಾಡುತ್ತಲೇ ಇರುತ್ತಾರೆ. ಅಂತಹ ಅಪರೂಪದ ವ್ಯಕ್ತಿಗಳಲ್ಲಿ ಡಾ. ಗುರುಲಿಂಗ ಕಾಪಸೆಯವರು ಒಬ್ಬರು. ಕಷ್ಟಗಳ ಸರಮಾಲೆ ಬೇತಾಳದಂತೆ ಬೆನ್ನು ಹತ್ತಿದರೂ ಅವರು ಸತತ ಪ್ರಯತ್ನ ಮತ್ತು ಎದೆಗಾರಿಕೆುಂದ ಉನ್ನತಮಟ್ಟಕ್ಕೇರಿದ ವ್ಯಕ್ತಿಯಾಗಿದ್ದಾರೆ. ಶಿಕ್ಷಕರಾಗಿ, "ಶ್ವ"ದ್ಯಾಲಯದ ಪ್ರಾಧ್ಯಾಪಕರಾಗಿ, ಸ್ನಾತಕೋತ್ತರ ಕೇಂದ್ರದ ಆಡಳಿತಾಧಿಕಾರಿಯಾಗಿ, ಸಾ"ತಿಯಾಗಿ ಸೇವೆ ಸಲ್ಲಿಸುತ್ತ ಬಂದ ಅವರ ಬದುಕು ಸಾಹಸಮಯವಾದದ್ದು, ಸಾರ್ಥಕವಾದದ್ದು. ಸೃಜನಶೀಲ ಕ"ಯಾಗಿ, ಸಂಶೋಧಕರಾಗಿ, "ಮರ್ಶಕರಾಗಿ, ಅನುವಾದಕರಾಗಿ, ಸಂಪಾದಕರಾಗಿ, "ದ್ವಾಂಸರಾಗಿ ಕನ್ನಡಸಾ"ತ್ಯದಲ್ಲಿ "ಶಿಷ್ಟ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಮೂಲತಃ "ಜಯಪುರ ಜಿಲ್ಲೆಯ ಇಂಡಿ ತಾಲೂಕಿನ "ರೇಲೋಣಿ ಗ್ರಾಮದವರಾದ ಗುರುಲಿಂಗ ಪಾಪಸೆ ಅವರು ಎಪ್ರಿಲ್ 3, 1928ರಂದು ಜನಿಸಿದರು. ತಂದೆ ಶಂಕರ್ಪ, ತಾು "ರಮ್ಮ. ಶಂಕರ್ಪನವರು ಕೃಕರು, ಜೊತೆಗೆ ಅಂಗಡಿಯ ಲೆಕ್ಕವನ್ನು ಬರೆಯುತ್ತಿದ್ದರು. ಬಡತನದ ಪರಿಸರದಲ್ಲಿಯೇ ಗುರುಲಿಂಗ ಕಾಪಸೆಯವರು "ರೇಲೋಣಿಯಲ್ಲಿ ನಾಲ್ಕನೇ ತರಗತಿಯವರೆಗೆ ಶಿಕ್ಷಣವನ್ನು ಪೂರೈಸಿದರು. ನಂತರ ಶಿಕ್ಷಣ ಮುಂದುವರಿಸದೇ ಎರಡು ವರ್ಷ ಹೊಲ-ಮನೆ ಕೆಲಸದಲ್ಲಿ ತೊಡಗಿದರು. ಪ್ರತಿಭಾವಂತ "ದ್ಯಾರ್ಥಿಯಾಗಿರುವುದರಿಂದ ಗುರುಗಳ ಪ್ರೋತ್ಸಾಹದಿಂದ ಕಾಪಸೆಯವರು ಚಡಚಣ ಮತ್ತು ಬರಡೋಲಗಳಲ್ಲಿ ಶಿಕ್ಷಣ ಮುಂದುವರೆಸಿ 1945ರಲ್ಲಿ ಮುಲ್ಕಿ ಪರೀಕ್ಷೆಯನ್ನು ಪಾಸು ಮಾಡಿದರು. 1953ರಲ್ಲಿ "ಂದಿ ಭಾಷೆ ತೆಗೆದುಕೊಂಡು ಪೂನಾ ಬೋರ್ಡಿನಿಂದ ಮೆಟ್ರಿಕ್‌ನ್ನು ಪೂರ್ಣಗೊಳಿಸಿದರು. 1954ರಲ್ಲಿ ಪ್ರಾಥ"ುಕ ಶಿಕ್ಷಣ ತರಬೇತಿಯನ್ನು ಪೂರ್ಣಗೊಳಿಸಿದರು.
1959ರಲ್ಲಿ ಪ್ರೊ.ಬಿ.ಟಿ ಸಾಸನೂರ ಅವರು ಕಾಪಸೆಯವರ ಪ್ರತಿಭೆಯನ್ನು ಮನಗಂಡು ಶಿಕ್ಷಣ ಮುಂದುವರೆಸಲು ಸಲಹೆ ನೀಡಿದರು. 1960ರಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ಇಂಗ್ಲೀಷ್ "ಷಯದೊಂದಿಗೆ ಬಾಹ್ಯ "ದ್ಯಾರ್ಥಿಯಾಗಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾದರು. 1960ರಲ್ಲಿ ಬಾಗಲಕೋಟೆಯ ಸೆಂಟ್ರಲ್ ಸ್ಕೂಲಿನಲ್ಲಿ ಕೆಲಸ ಮಾಡುತ್ತ, ಬಸವೇಶ್ವರ ಕಾಲೇಜಿನಲ್ಲಿ ಬಿ.ಎ ಅಧ್ಯಯನ ಪ್ರಾರಂಭ ಮಾಡಿದರು. 1964ರಲ್ಲಿ ಬಿ.ಎ ಪದ" ಪಡೆದುಕೊಂಡ ನಂತರ ಪಿ.ಎಂ ನಾಡಗೌಡರ ಸಹಾಯದಿಂದ ಎಂ.ಎ ಅಧ್ಯಯನಕ್ಕಾಗಿ ಧಾರವಾಡಕ್ಕೆ ಬಂದರು. ಸ್ನಾತಕೋತ್ತರ ಪದ"ಯನ್ನು ಸುವರ್ಣ ಪದಕದೊಂದಿಗೆ ಪಡೆದುಕೊಂಡು ಬಸವೇಶ್ವರ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ವೃತ್ತಿಯನ್ನು ಪ್ರಾರಂಭಿಸಿದರು. ಅವರು 'ಮಧುರಚೆನ್ನರ ಜೀವನ ಹಾಗೂ ಕೃತಿಗಳ ಸ"ುಕ್ಷೆ' ಮಹಾಪ್ರಬಂಧವನ್ನು ಸಲ್ಲಿಸಿ ಪಿಎಚ್.ಡಿ. ಪದ"ಯನ್ನು ಪಡೆದರು. ಅವರು 1966 ರಿಂದ 1970ರವರೆಗೆ ಬಸವೇಶ್ವರ ಕಾಲೇಜಿನಲ್ಲಿ, 1970ರಿಂದ 1976ರವರೆಗೆ ಧಾರವಾಡ ಕರ್ನಾಟಕ ಕಾಲೇಜಿನಲ್ಲಿ, 1982ರಿಂದ 1984ರವರೆಗೆ ಬೆಳಗಾ" ಸ್ನಾತಕೋತ್ತರ ಕೇಂದ್ರದಲ್ಲಿ ಸೇವೆ ಸಲ್ಲಿಸಿ 1984ರಿಂದ 1988ರವರೆಗೆ ಅದೇ ಕೇಂದ್ರದ ಆಡಳಿತಾಧಿಕಾರಿಯಾಗಿ ಸೇವಾ ನಿವೃತ್ತಿಯನ್ನು ಹೊಂದಿದರು. ಅವರು ಸೇವಾ ನಿವೃತ್ತಿಯ ನಂತರವು 1988ರಿಂದ 1992ರವರೆಗೆ ಧಾರವಾಡ ಮ"ಳಾ ಕಾಲೇಜಿನ ಪ್ರಾಚಾರ್ಯರಾಗಿಯೂ, 1992-93ರಲ್ಲಿ ಹಂಪಿ ಕನ್ನಡ "ಶ್ವ"ದ್ಯಾಲಯದಿಂದ ಸಂದರ್ಶಕ ಪ್ರಾಧ್ಯಾಪಕರಾಗಿಯೂ ಸೇವೆಯನ್ನು ಸಲ್ಲಿಸಿದರು.
ಕಾಪಸೆಯವರು ಲಚ್ಚಾಣದಲ್ಲಿ ಪ್ರಾಥ"ುಕ ಶಾಲಾ ಶಿಕ್ಷಕರಾಗಿದ್ದಾಗ ಮಕ್ಕಳನ್ನು ಪ್ರೀತಿಂದ ಕಾಣುತ್ತಿದ್ದರು. ಕಾಪಸೆಯವರು ತಮ್ಮ ಎಲ್ಲ ಸೇವಾವಧಿಯಲ್ಲಿ ಕನ್ನಡದ ಶ್ರೇಯಸ್ಸಿಗಾಗಿ ಅ"ರತವಾಗಿ ದುಡಿದು ಸ್ಮರಣೀಯರೆನಿಸಿದ್ದಾರೆ. ಅವರ ಸರಳ ನೇರ ನಡೆ-ನುಡಿ, "ನಯ ಸಂಪನ್ನತೆ, ಸಾಹಸ ಪ್ರವೃತ್ತಿ ಇವೆಲ್ಲವುಗಳಿಂದ "ದ್ಯಾರ್ಥಿಗಳಿಗೆ ಅಚ್ಚುಮೆಚ್ಚಿನವರಾಗಿದ್ದರು. ಅವರ ಪಾಠಗಳು "ದ್ಯಾರ್ಥಿಗಳನ್ನು ಚಿಂತನಗೆ ಒಳಪಡಿಸುತ್ತಿದ್ದವು. ಈಗಲೂ ಅವರ "ದ್ಯಾರ್ಥಿಗಳು ಕಾಪಸೆಯವರ ಬಗ್ಗೆ ಅಪಾರವಾದ ಗೌರವಾದರಗಳನ್ನು ಇಟ್ಟುಕೊಂಡಿದ್ದಾರೆ. ಗುರುಲಿಂಗ ಕಾಪಸೆಯವರು 1952ರಲ್ಲಿ ಕಾಶಿಬಾು ಅವರನ್ನು ಮದುವೆಯಾದರು. ಪತ್ನಿ ಕಾಶೀಬಾುಯವರು ಕಾಪಸೆಯವರ ಎಂ.ಎ. ಮುಗಿಯುವವರೆಗೂ ಮನೆಯ ವ್ಯವಹಾರವನ್ನೆಲ್ಲ ನಿಭಾುಸಿಕೊಂಡು ಹೋಗುತ್ತಿದ್ದರು. ಅವರಿಗೆ ನಾಲ್ವರು ಮಕ್ಕಳು, ಈರ‌್ವರೂ ಗಂಡು ಮಕ್ಕಳು, ಈರ‌್ವರೂ ಹೆಣ್ಣುಮಕ್ಕಳು. ಎಲ್ಲರೂ ಉತ್ತಮ ಉದ್ಯೋಗದಲ್ಲಿದ್ದು, ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ.
ಡಾ.ಗುರುಲಿಂಗ ಕಾಪಸೆಯವರ ಸಾ"ತ್ಯ ಜೀವನ ಪ್ರಾರಂಭವಾದದ್ದು ಕಾವ್ಯರಚನೆುಂದ. ಅಂದಿನ ಪತ್ರಿಕೆಗಳಾದ ಜಯಕರ್ನಾಟಕ, ಜಯಂತಿಗಳಲ್ಲಿ ಇವರ ಲೇಖನಗಳು, ಕ"ತೆಗಳು ಪ್ರಕಟಗೊಂಡಿವೆ. ಕಾಪಸೆಯವರು ಒಟ್ಟು 50ಕ್ಕೂ ಹೆಚ್ಚು ಕೃತಿಗಳನ್ನು ಬರೆದಿದ್ದಾರೆ ಮತ್ತು ಸಂಪಾದಿಸಿದ್ದಾರೆ. ಸಾ"ತ್ಯಕ್ಕೆ ಸಂಬಂಧಿಸಿದ ಮುನ್ನೂರಕ್ಕೂ ಹೆಚ್ಚಿನ ಲೇಖನಗಳು ಪ್ರಕಟವಾಗಿವೆ. ಅವರು ಕನ್ನಡಸಾ"ತ್ಯ ಲೋಕಕ್ಕೆ ಹಲವು ಪ್ರಕಾರಗಳಲ್ಲಿ ತಮ್ಮ ಕೃತಿಗಳನ್ನು ನೀಡಿದ್ದಾರೆ. ಅವರು ಮಧುರಚೆನ್ನ, ಅಕ್ಕಮಹಾದೇ", ಬೇಂದ್ರೆ-ಮಧುರಚೆನ್ನರ ಸಖ್ಯಯೋಗ, ಹಲಸಂಗಿ ಗೆಳೆಯರು, ಬಸವೇಶ್ವರ, ಶಾಲ್ಮಲೆುಂದ ಗೋದಾವರಿಯವರೆಗೆ, ಜಾಗತಿಕ ಚಿಂತಕರು, ಶ್ರೀ ಅರ"ಂದರು, ಶಿ.ಶಿ ಬಸವನಾಳ, ಕ" ರ"ಂದ್ರ, ಸಾ"ತ್ಯ ಸಂಬಂಧ, ಕಾಲ-ಕ", ಕನ್ನಡ-ಮರಾಠಿ ಸಾ"ತ್ಯ ಬಾಂಧವ್ಯ, ಜ್ಞಾನಸಿಂಧು, ಚಾಮರಸ, ಪಿ.ಧೂಲಾಸಾಹೇಬ, ಬಸವೇಶ್ವರಾಂಚಿ ವಚನೆ, ಇದೇ ನಿಜವಾದ ಧರ್ಮ ಮುಂತಾದ ಕೃತಿಗಳನ್ನು ನೀಡಿದ್ದಾರೆ. ಶ್ರೀ ಅರ"ಂದ ಸಾ"ತ್ಯವನ್ನು ಪರಿಚುಸುವ 'ಅಖಿಲಭಾರತ ಪತ್ರಿಕೆ'ಯ ಸಂಪಾದಕರಾಗಿಯೂ ಸೇವೆಯನ್ನು ಸಲ್ಲಿಸಿರುವರು. ಡಾ.ಕಾಪಸೆಯವರು ಐದು ಸಂಶೋಧನಾ "ದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿ ಸೇವೆಯನ್ನು ಸಲ್ಲಿಸಿದ್ದಾರೆ.
ಡಾ. ಕಾಪಸೆಯವರು ಹಲವಾರು ಸಂಘಸಂಸ್ಥೆಗಳೊಂದಿಗೆ ನಿಕಟ ಸಂಬಂಧವನ್ನು ಇಟ್ಟುಕೊಂಡಿದ್ದಾರೆ. ಕರ್ನಾಟಕ "ದ್ಯಾವರ್ಧಕ ಸಂಘ, ಧಾರವಾಡ ಜಿಲ್ಲಾ ಸಾ"ತ್ಯ ಪರಿಷತ್ತು, ಕೇಂದ್ರ-ರಾಜ್ಯ ಸಾ"ತ್ಯ ಅಕಾಡೆ"ು, ಅಖಿಲ ಕರ್ನಾಟಕ ಕೇಂದ್ರ ಕನ್ನಡ ಕ್ರಿಯಾ ಸ"ುತಿ ಮುಂತಾದವುಗಳು. ಅವರು ಧಾರವಾಡ ಜಿಲ್ಲಾ ಸಾ"ತ್ಯ ಪರಿಷತ್ತಿನ ಅಧ್ಯಕ್ಷರಾಗಿ, ಕರ್ನಾಟಕ ಸಾ"ತ್ಯ ಅಕಾಡೆ"ುಯ ಅಧ್ಯಕ್ಷರಾಗಿ, ಶಿಶುನಾಳ ಶರೀಫ ಸಾ"ತ್ಯ ಸ"ುತಿಯ ಅಧ್ಯಕ್ಷರಾಗಿ, ಧಾರವಾಡ ಲಿಂಗಾಯತ ಅಭಿವೃದ್ಧಿ ಸಂಸ್ಥೆಯ ಸಾ"ತ್ಯ ಸ"ುತಿಯ ಕಾರಾ್ಯಧ್ಯಕ್ಷರಾಗಿ, ಗೋಕಾಕ ಚಳುವಳಿ ಸಂಘಟನಾ ಕಾರ‌್ಯದರ್ಶಿಯಾಗಿ ಸಂಘಟನಾತ್ಮಕ ಸಾ"ತ್ಯಿಕ ಕಾರ‌್ಯಗಳ ಸೇವೆಯನ್ನು ಸಲ್ಲಿಸಿದ್ದಾರೆ. ಅವರು "ಜಯಪುರ ಜಿಲ್ಲಾ ಆರನೆಯ ಸಾ"ತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವ"ಸಿರುವುದು ಗಮನಾರ್ಹವಾಗಿದೆ. 2001ರಲ್ಲಿ ಕರ್ನಾಟಕ "ದ್ಯಾವರ್ಧಕ ಸಂಘದ ಶತಮಾನೋತ್ಸವಭವನದಲ್ಲಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿ 'ಅಂತರಂಗದ ರತ್ನ' ಅಭಿನಂದನಾ ಗ್ರಂಥವನ್ನು ಅರ್ಿಸಿದ್ದಾರೆ.
ಡಾ.ಗುರುಲಿಂಗ ಕಾಪಸೆಯವರು ನಾಡಿನ ""ಧ ಸಂಘ-ಸಂಸ್ಥೆಗಳ ಅನೇಕ ಪ್ರಶಸ್ತಿ-ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. ವರದರಾಜ ಆಧ್ಯ ಪ್ರಶಸ್ತಿ, ಆನಂದ ಕಂದ ಪ್ರಶಸ್ತಿ, ಸ.ಸ ಮಾಳವಾಡ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾ"ತ್ಯ ಅಕಾಡೆ"ುಯ ಗೌರವ ಪ್ರಶಸ್ತಿ, ಹುಬ್ಬಳ್ಳಿ ಮೂರು ಸಾ"ರ ಮಠದ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡೆಮೆ ಫೆಲೊಶಿಪ್, ಡಾ.ಟಿ." ವೆಂಕಟಾಚಲಶಾಸ್ತ್ರಿ "ದ್ವತ್ ಪ್ರಶಸ್ತಿ "ಗೆ ಹತ್ತು ಹಲವು ಪ್ರಶಸ್ತಿ-ಪುರಸ್ಕಾರಗಳು ಅವರಿಗೆ ಲಭಿಸಿವೆ. ಡಾ.ಕಾಪಸೆಯವರ ಬದುಕು-ಬರಹದ ಕುರಿತು ಎಸ್.ಸಿ."ರೇಮಠ ಅವರು ಕರ್ನಾಟಕ "ಶ್ವ"ದ್ಯಾಲಯದಿಂದ ಪಿಎಚ್.ಡಿ ಪದ" ಪಡೆದಿದ್ದಾರೆ.
ಡಾ. ಗುರುಲಿಂಗ ಕಾಪಸೆಯವರದು ಬಹುಮುಖಿ ಪ್ರತಿಭೆಯ ವ್ಯಕ್ತಿತ್ವ. ಕನ್ನಡ ಪ್ರೇ"ುಗಳಾದ ಅವರು ಕನ್ನಡದ ಏಳ್ಗೆಗಾಗಿ ಶ್ರ"ುಸಿದವರು. "ರಿಯಕಿರಿಯರೆನ್ನುವ ಭೇದಭಾವ"ಲ್ಲದೇ ಎಲ್ಲರೊಂದಿಗೆ ಬೆರೆತುಕೊಳ್ಳವ ಡಾ.ಕಾಪಸೆಯವರದು ವೈಶಿಷ್ಟ್ಯಪೂರ್ಣವಾದ ವ್ಯಕ್ತಿತ್ವ. ತೊಂಭತ್ಮೂರು ವಯಸ್ಸಿನ ಅವರ ಅದಮ್ಯವಾದ ಜೀವನಾಸಕ್ತಿ, ಮಾನ"ಯ ಮೌಲ್ಯಗಳು ನಮಗೆಲ್ಲರಿಗೂ ಮಾರ್ಗದರ್ಶಿಯಾಗಿವೆ. ಅವರು ಪ್ರಾಥ"ುಕ ಶಾಲಾ ಶಿಕ್ಷಕರಾಗಿ "ತೈಗಳ ಪ್ರೇರಣೆುಂದ ಓದನ್ನು ಮುಂದುವರೆಸಿ, ಉನ್ನತಹುದ್ದೆಗ:ನ್ನು ಅಲಂಕರಿಸಿಕೊಂಡ ಮಹನೀಯರು. ಅವರು ಪಟ್ಟ ಪರಿಶ್ರಮ ಅಪಾರವಾದದ್ದು. ತಮ್ಮ ಉದಾತ್ತ ಬದುಕಿನಿಂದ ಶಿಕ್ಷಕ ವೃತ್ತಿಯ ಘನತೆ ಗೌರವಗಳನ್ನು ಹೆಚ್ಚಿಸಿದ್ದಾರೆ. ಸರಳ ಸಜ್ಜನಿಕೆಗೆ ಹೆಸರಾದ ಡಾ.ಗುರುಲಿಂಗ ಕಾಪಸೆಯವರ ಬದುಕು-ಬರಹ ನಮಗೆಲ್ಲ ಸ್ಫೂರ್ತಿದಾಯಕ.
ಸುರೇಶ ಗುದಗನವರ
ರಾಮದುರ್ಗ