ನಾಡಿನ ಹಿರಿಯ ಡಾ. ಪುಟ್ಟಪ್ಪಗೆ ಸನ್ಮಾನ

ಹುಬ್ಬಳ್ಳಿ೦೯: ನಾಡೋಜ ಡಾ|| ಪಾಟೀಲ ಪುಟ್ಟಪ್ಪ ಅವರ 100ನೇ ಜನ್ಮದಿನೋತ್ಸವ, ಶತಮಾನೋತ್ಸವದ ನಾಡಿನ ಹಿರಿಯ ಚೇತನ ಡಾ. ಪಾಟೀಲ ಪುಟ್ಟಪ್ಪ ಅವರಿಗೆ ಇತ್ತೀಚೆಗೆ ಬಸವ ಪರಿಸರ ಸಂರಕ್ಷಣಾ ಸಮಿತಿಯ ವತಿಯಿಂದ  ಆತ್ಮೀಯವಾಗಿ ಶಾಲು, ಮಾಲಾರ್ಪಣೆ ಮಾಡಿ, ಗ್ರಂಥ ನೀಡಿ ಗೌರವಿಸಿದರು ಹಾಗೂ ಹುತ್ಪೂರ್ವಕವಾಗಿ ಜನ್ಮದಿನದ ಶುಭಾಶಯ ಕೋರಿದರು. ಐಎಂಎದ ಮಾಜಿ ಅಧ್ಯಕ್ಷ ಡಾ.ವಿ.ಬಿ.ನಿಟಾಲಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ್ಯದಶರ,  ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ,  ಕರ್ನಾಟಕ ವಚನ ಸಾಹಿತ್ಯ ಪರಿಷತ್ನ ಜಿಲ್ಲಾ ಘಟಕದ ಕಾಯರ್ಧ್ಯಕ್ಷ, ಗ್ರಂಥಪಾಲಕ ಸುರೇಶ ಡಿ. ಹೊರಕೇರಿ, ನಾದ ಲೋಕ ಕಲಾ ವೇದಿಕೆಯ ಅಧ್ಯಕ್ಷ ಆರ್.ಎಂ.ಗೋಗೇರಿ, ಮುಂತಾದವರು ಇದ್ದರು.