ಡಾ. ಜಿ. ಎಸ್‌. ಅಮೂರರ ಕುರಿತಾದ ವಿಚಾರ ಸಂಕಿರಣ

Seminar on Dr. G. S. Amur

ಗದಗ 18: ‘ಡಾ. ಜಿ. ಎಸ್‌. ಆಮೂರರ ಮೇರು ವಿಮರ್ಶಾ ಕೃತಿಗಳು' ಕುರಿತಾದ ವಿಚಾರ ಸಂಕಿರಣವನ್ನು ದಿನಾಂಕ 19 ಮಾರ್ಚ್‌ 2025ರ ಬುಧವಾರ ಬೆಳಗಿನ 10-30 ಕ್ಕೆ ಜೆ.ಟಿ ಮಹಾವಿದ್ಯಾಲಯದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.  

ನಗರದ ಕೆ.ಎಲ್‌.ಇ. ಸಂಸ್ಥೆಯ ಜಗದ್ಗುರು ತೋಂಟದಾರ್ಯ ಮಹಾವಿದ್ಯಾಲಯ, ಮತ್ತು ಕೆ.ಎಲ್‌.ಇ ಸಂಸ್ಥೆಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯಗಳ ಕನ್ನಡ ವಿಭಾಗಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿರುವ ವಿಚಾರ ಸಂಕಿರಣದ ಉದ್ಘಾಟನೆಯನ್ನು ಹಿರಿಯ ಸಾಹಿತಿ ಪ್ರೊ. ರಾಘವೇಂದ್ರ ಪಾಟೀಲರು ನೆರವೇರಿಸಲಿದ್ದಾರೆ.  

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಗದ್ಗುರು ತೋಂಟದಾರ್ಯ ಮಹಾವಿದ್ಯಾಲಯದ ಸ್ಥಾನಿಕ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷರಾದ ಶ್ರೀ ಎಸ್‌. ಪಿ. ಸಂಶಿಮಠ ವಹಿಸಲಿದ್ದಾರೆ.  ಉಪಸ್ಥಿತರಾಗಿ. ರಜನಿ ಪಾಟೀಲ, ಶ್ರೀನಿವಾಸ ಹುಯಿಲಗೋಳ, ಪ್ರೊ. ಅನ್ನದಾನಿ ಹಿರೇಮಠ, ಪ್ರೊ. ಪಿ. ಜಿ. ಪಾಟೀಲ, ಡಾ. ಎ.ಕೆ. ಮಠ ಭಾಗವಹಿಸಲಿದ್ದಾರೆ. ವಿಚಾರಗೋಷ್ಠಿಗಳಲ್ಲಿ ಹಿರಿಯ ಸಾಹಿತಿಗಳಾದ ಡಾ. ಶಾಮಸುಂದರ ಬಿದರಕುಂದಿ, ಡಾ. ಜಿ. ಎಂ. ಹೆಗಡೆ ತಮ್ಮ ಪ್ರಬಂಧ ಮಂಡಿಸಲಿದ್ದಾರೆ. ಹಿರಿಯ ಕತೆಗಾರರಾದ ಪ್ರೊ. ಮಲ್ಲಿಕಾರ್ಜುನ ಹಿರೇಮಠ ಸಮಾರೋಪ ನುಡಿಗಳನ್ನು ಆಡಲಿದ್ದಾರೆ. ಡಾ. ಡಿ. ಬಿ. ಗವಾನಿ, ಪ್ರೊ ಜಿ. ವಿಶ್ವನಾಥ ಉಪಸ್ಥಿತರಿರುವರು. ಆಸಕ್ತರು ಭಾಗವಹಿಸಲು ವಿಚಾರ ಸಂಕಿರಣದ ಸಂಚಾಲಕರಾದ ಡಾ. ಅಂದಯ್ಯ ಅರವಟಗಿಮಠ ಪ್ರಕಟನೆಯಲ್ಲಿ ತಿಳಿಸಿದ್ದಾರೆ.