ಕಳ್ಳಭಟ್ಟಿ ಸಾರಾಯಿ ಮಾರಾಟ ಕಾನೂನುಬಾಹಿರ, ನಿರ್ಮೂಲನೆ ಕ್ರಮ : ಜೂಗಲ್ ಮಂಜುನಾಯಕ
Selling bootleg liquor is illegal, action will be taken to eradicate it: Jugal Manjunayak
ಲೋಕದರ್ಶನ ವರದಿ
ಕಂಪ್ಲಿ 16: ಕಳ್ಳಭಟ್ಟಿ ಸಾರಾಯಿ ಮಾರಾಟ ಮಾಡುವುದು ಕಾನೂನುಬಾಹಿರ ಮತ್ತು ಸಮಾಜಕ್ಕೆ ಅತ್ಯಂತ ಮಾರಕವಾಗಿದೆ ಎಂದು ತಹಶೀಲ್ದಾರ್ ಜೂಗಲ್ ಮಂಜುನಾಯಕ ತಿಳಿಸಿದರು. ಕಳ್ಳಬಟ್ಟಿ ನಿರ್ಮೂಲನೆ ಹಿನ್ನಲೆ ಪಟ್ಟಣದ ತಹಶೀಲ್ದಾರ್ ಕಛೇರಿಯ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ, ಪಟ್ಟಣದ ಶಿಕಾರಿಹಟ್ಟಿಯಲ್ಲಿ ಕಾನೂನುಬಾಹಿರವಾಗಿ ಕಳ್ಳಭಟ್ಟಿ ಸಾರಾಯಿ ನಡೆಯುತ್ತಿರುವುದು ತಿಳಿದು ಬಂದಿದ್ದು, ಇಲ್ಲಿನ ಕಳ್ಳಭಟ್ಟಿ ನಿರ್ಮೂಲನೆ ಕಠಿಣ ಕ್ರಮವಹಿಸಲಾಗುತ್ತಿದೆ. ಇಲ್ಲಿನ ಶಿಕಾರಿಹಟ್ಟಿನಲ್ಲಿರುವ ಅನಧಿಕೃತ ಮನೆಗಳ ಪರೀಶೀಲನೆ ನಡೆಸಲಾಗುವುದು. ಅಬಕಾರಿ, ಪೊಲೀಸ್, ಅರಣ್ಯ ಇಲಾಖೆ ಅಧಿಕಾರಿಗಳು ತಾಲೂಕಿನಲ್ಲಿ ಕಳ್ಳಭಟ್ಟಿಗೆ ಮುಕ್ತಿ ನೀಡಲು ಸಮನ್ವಯವಾಗಿ ಕೆಲಸ ಮಾಡುವ ಮೂಲಕ ಕ್ರಮವಹಿಸಬೇಕು.
ಗ್ರಾಮೀಣ ಭಾಗದಲ್ಲಿ ಗಸ್ತು ತಿರುಗುವಿಕೆಯಲ್ಲಿ ಹೆಚ್ಚಿನ ನಿಗಾವಹಿಸಬೇಕು. ಮುಂದಿನ ದಿನದಲ್ಲಿ ಕಳ್ಳಭಟ್ಟಿಯಿಂದಾಗುವ ಅನಾಹುತ ಬಗ್ಗೆ ಜಾಗೃತಿ ಮೂಡಿಸಲಾಗುವುದು. ಮತ್ತು ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲಾಗುವುದು ಎಂದರು. ಸಬ್ ಇನ್ಸ್‌ಪೆಕ್ಟರ್ ಉಷಾ ಮಾತನಾಡಿ, 2025ರ ಜುಲೈಯಿಂದ 2026 ಎಪ್ರೇಲ್ ತನಕ ಏಳು ಪ್ರಕರಣಗಳನ್ನು ದಾಖಲಿಸಲಾಗಿದೆ. ಇದರಲ್ಲಿ 33.77 ಲೀಟರ್ ಕಳ್ಳಭಟ್ಟಿ ವಶಪಡಿಸಿಕೊಳ್ಳಲಾಗಿದೆ. 10ಲೀಟರ್ ಬೆಲ್ಲದ ಕೊಳೆ ನಾಶಪಡಿಸಲಾಗಿದೆ. ಒಂದು ದ್ವೀಚಕ್ರ ವಾಹನ ವಶಪಡಿಕೊಳ್ಳಾಗಿದೆ. ಪ್ರತಿ ಹಂತದಲ್ಲಿಯೂ ಕಳ್ಳಭಟ್ಟಿ ಸಾರಾಯಿ ನಿಯಂತ್ರಿಸಲು ಕಠಿಣ ಕ್ರಮಕೈಗೊಳ್ಳಲಾಗಿದೆ ಎಂದರು. ಈ ಸಂದರ್ಭದಲ್ಲಿ ಮುಖ್ಯಾಧಿಕಾರಿ ಬಿ.ಮಲ್ಲಿಕಾರ್ಜುನ, ವಿವಿಧ ಇಲಾಖೆಗಳ ಅಧಿಕಾರಿಗಳಾದ ಶ್ರೀಶೈಲಗೌಡ, ಪಿ.ಬಸವರಾಜ, ಬಸವರಾಜ(ಎಎಸ್‌ಐ), ವಿರೇಶ ಮಹಾಶೆಟ್ಟಿ, ನಾಗಮುನಿಸ್ವಾಮಿ, ರಾಮಾಂಜೀನೀಯಲು ಸೇರಿದಂತೆ ಇತರರು ಇದ್ದರು.
ಸಾವಿರಾರು ಕೋಟಿ ವಂಚನೆ, ವರ್ಗಾವಣೆ ಆರೋಪ: ಶಿವಾನಂದ ನೀಲಣ್ಣವರ ಬಂಧನ
ಬೆಳಗಾವಿಯಲ್ಲಿ ಶಿವಾನಂದ ನೀಲಣ್ಣನವರಗೆ ಅಧಿಕಾರಿಗಳ ಶಾಕ್ : ಶಿವಂ ಅಸೋಸಿಯೇಟ್ ಕಚೇರಿಗಳ ಮೇಲೆ ದಾಳಿ
24 ಗಂಟೆಯಲ್ಲಿ ಕಾರು ಕಳ್ಳತನ ಪ್ರಕರಣ ಭೇಧಿಸಿದ ಪೊಲೀಸರು : ಖದೀಮರ ಪತ್ತೆಗಾಗಿ ಶೋಧ
ಗಡಿ ಮರಾಠಿ ಶಾಲೆಗಳಲ್ಲಿ ಕನ್ನಡ ಕಹಳೆ: 7 ಕನ್ನಡ ಪ್ರಾಥಮಿಕ, 2 ಪ್ರೌಡ ಶಾಲೆಗಳಿಗೆ ರಾಜ್ಯ ಸರಕಾರ ಗ್ರಿನ್ ಸಿಗ್ನಲ್
ಅಂತರಾಜ್ಯ ಖದೀಮನ ಬಂಧನ : 45.56 ಲಕ್ಷ ಮೌಲ್ಯದ ಚಿನ್ನಾಭರಣ, ದ್ವಿಚಕ್ರ ವಾಹನ ವಶಕ್ಕೆ
ಹಿಡಕಲ್ ಹಿನ್ನೀರಿನಲ್ಲಿ ಮುಳುಗಿದ್ದ ಹುನ್ನೂರು ವಿಠಲ ಮಂದಿರ ಜಲದಿಗ್ಭಂಧನದಿಂದ ಮುಕ್ತಿ 