ಲೋಕದರ್ಶನವರದಿ
ರಾಣೆಬೆನ್ನೂರ. ಜು.03: ಕರೋನಾ ವೈರಸ್ ಕೋವಿಡ್-19 ಪ್ರಕರಣವು ತಾಲೂಕಿನ ಹಲಗೇರಿ ಗ್ರಾಮದಲ್ಲಿ ಪತ್ತೆಯಾದ ಹಿನ್ನಲೆಯಲ್ಲಿ ಆತಂಕಗೊಂಡಿರುವ ಗ್ರಾಮಸ್ಥರು ಮತ್ತು ವರ್ತಕರು ಒಟ್ಟಾರೆಯಾಗಿ ಸ್ವಯಂ ಪ್ರೇರಣೆಯಿಂದ ಲಾಕ್ಡೌನ್ ಮತ್ತು ಶೀಲ್ಡೌನ್ಗೆ ಒಳಪಟ್ಟಿರುವದರಿಂದ ನಾಗರೀಕರು ಗ್ರಾಮಕ್ಕೆ ಬರಲು ಮತ್ತು ಇಲ್ಲಿಂದ ಹೊರಪ್ರದೇಶಗಳಿಗೆ ಸಂಚರಿಸಲು ಹಿಂದೇಟು ಹಾಕುವಂತಾಗಿದೆ. ತಾಲೂಕಿನ ಬಹು ದೊಡ್ಡ ಗ್ರಾಮವಾಗಿರುವ ಹಲಗೇರಿ ಗ್ರಾಮದಿಂದ ನಿತ್ಯವೂ 300ಕ್ಕೂ ಹೆಚ್ಚು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಗಳು ಇಲ್ಲಿಂದಲೇ ಬೇರೆ-ಬೇರೆ ಊರುಗಳಿಗೆ(ಹಿರೇಕೆರೂರು, ಚಿಕ್ಕೇರೂರ, ಹಂಸಬಾವಿ, ರಟ್ಟಿಹಳ್ಳಿ, ಮಾಸೂರು, ಶಿಕಾರಿಪುರ) ಸೇರಿದಂತೆ ಸಂಚರಿಸಲು ಪ್ರಮುಖ ಗ್ರಾಮ ಕೇಂದ್ರ ಸ್ಥಾನ ಇದಾಗಿದ್ದು, ಲಾಕ್ಡೌನ್ ಪೂರ್ವದಲ್ಲಿ ಸದಾ ಸಂಚಾರದಿಂದ ಕಂಗೊಳಿಸುತ್ತಿದ್ದ ಈ ಗ್ರಾಮವು ಲಾಕ್ಡೌನ್ ಪರಿಣಾಮ ಸಂಚಾರವಿಲ್ಲದೇ ಬಿಕೋ ಎನ್ನುವ ವಾತಾವರಣ ನಿಮರ್ಾಣವಾಗಿತ್ತು ಇತ್ತೀಚಗಷ್ಠೇ ಕೇಂದ್ರ ಮತ್ತು ರಾಜ್ಯ ಸಕರ್ಾರ, ಜಿಲ್ಲಾಡಳಿತವು ಲಾಕ್ಡೌನ್ ತೆರವುಗೊಳಿಸಿದ ನಂತರ ಸಹಜ ಸ್ಥಿತಿಗೆ ಮರುಳುವ ಸಂದರ್ಭದಲ್ಲಿಯೇ ಕೊರೊನಾ ವೈರಸ್ ಸೊಂಕು ಪತ್ತೆಯಾದ ನಂತರ ಇದೀಗ ಗ್ರಾಮವು ಲಕ್ಡೌನ್ ಸ್ವಯಂ ಘೋಷಿಸಿಕೊಂಡಿದೆ.
ಮುಂಜಾಗೃತಾ ಕ್ರಮವಾಗಿ ಗ್ರಾಮಸ್ಥರೇ ಮುಂದಾಗಿ ಲಾಕ್ಡೌನ್, ಸೀಲ್ಡೌನ್ಗೆ ಮುಂದಾಗಿರುವುದು ಇತರೆ ಬಹುತೇಕ ಗ್ರಾಮಾಂತರ ಪ್ರದೇಶಗಳ ನಾಗರೀಕರು ಸ್ವಾಗತಿಸಿ ಪ್ರಸಂಶಿಸಿದ್ದಾರೆ. ಆದರೆ, ಎಲ್ಲ ಭಾಗಗಕ್ಕೂ ಇಲ್ಲಿಂದಲ್ಲೇ ಸಂಚರಿಸಬೇಕಾದ ವಾಹನ ಸವಾರರಿಗೆ, ನಾಗರೀಕರಿಗೆ ಲಾಕ್ಡೌನ್ ಕಾರಣದಿಂದ ಆತಂಕದಲ್ಲಿಯೇ ಸಂಚರಿಸಬೇಕಾದ ಅನಿವಾರ್ಯತೆ ಎದುರಾಗಿದೆ.