ಲೋಕದರ್ಶನವರದಿ
ರಾಣೇಬೆನ್ನೂರು: ಏ.24: ದೇಶದಲ್ಲಿ ಕೊರೊನಾ ವೈರಸ್ ಮಹಾಮಾರಿ ವ್ಯಾಪಕವಾಗಿ ಹರಡುತ್ತಿದ್ದು, ಇದರ ಹತೋಟಿಗೆ ಜನರು ಸಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಯಾರೂ ಸುಳ್ಳು ಸುದ್ದಿಗಳನ್ನು ಹಬ್ಬಿಸಬಾರದು. ಇದರಿಂದ ಸಮಾಜದಲ್ಲಿ ಗೊಂದಲ ವಾತಾವರಣ ಉಂಟಾಗುತ್ತದೆ. ಕೊರೊನಾ ವೈರಸ್ ತಡೆಗಟ್ಟಲು ಸಾರ್ವಜನಿಕರ ಸಹಕಾರಬೇಕು. ಈ ದಿಶೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸಕರ್ಾರಗಳು ಹಗಲಿರುಳು ಶ್ರಮಿಸುತ್ತಿವೆ ಎಂದು ಸಂಸದ ಶಿವಕುಮಾರ ಉದಾಸಿ ಹೇಳಿದರು.
ಶುಕ್ರವಾರ ಸಂಜೆ ಇಲ್ಲಿನ ತಾಲೂಕ ಪಂಚಾಯತಿ ಸಭಾಭವನದಲ್ಲಿ ಆಯೋಜನೆಗೊಂಡಿದ್ದ, ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿರುವ ಖಾಸಗಿ ವೈದ್ಯರು ಜನರ ಆರೋಗ್ಯ ರಕ್ಷಣೆಯ ಸೇವೆ ಸಲ್ಲಿಸುವಂತೆ ಮನವೊಲಿಸಲಾಗಿದೆ.
ಕೆಲವರು ಮಾತ್ರ ಇದಕ್ಕೆ ಸ್ಪಂದಿಸಿ ತಮ್ಮ ಮಾನವೀಯತೆ ಮೆರೆಯುತ್ತಿದ್ದಾರೆ. ಮುಂದಿನ ದಿವಸಗಳಲ್ಲಿ ಮತ್ತಷ್ಟು ಮನವೊಲಿಸುವ ಮೂಲಕ ಸೇವೆ ಸಲ್ಲಿಸಲು ಆಹ್ವಾನಿಸುವುದಾಗಿ ಹೇಳಿದರು.
ತಾಲೂಕಿನ ಒಟ್ಟು 75.566 ಕುಟುಂಬಗಳಿದ್ದು, 3.60 ಲಕ್ಷ ಅಧಿಕ ಜನಸಂಖ್ಯೆ ಇದ್ದು ಇವರಲ್ಲಿ 1,76 ಲಕ್ಷ ಜನರ ಆರೋಗ್ಯ ತಪಾಸಣೆ ಮಾಡಲಾಗಿದೆ. ಈ ಕಾರ್ಯದಲ್ಲಿ ಸೇವೆ ಸಲ್ಲಿಸುವ ಆರೋಗ್ಯ ಹಾಗೂ ಆಶಾ ಕಾರ್ಯಕರ್ತರ ಮತ್ತು ಪೊಲೀಸರೊಂದಿಗೆ ಸಾರ್ವಜನಿಕರು ಸಹಕಾರ ನೀಡಬೇಕು ಅಂದಾಗ ಮಾತ್ರ ಕೊರೊನಾ ವೈರಸ್ ಮಹಾಮಾರಿ ಹರಡದಂತೆ ತಡೆಗಟ್ಟಲು ಸಾಧ್ಯ ಎಂದರು.
ನಗರದ ಎಪಿಎಂಸಿ ಮಾರುಕಟ್ಟೆಗೆ ಬರುವ ವ್ಯಾಪಾರಸ್ಥರ ಮತ್ತು ವಾಹನ ಚಾಲಕರ ಆರೋಗ್ಯ ತಪಾಸಣೆಯನ್ನು ಕಡ್ಡಾಯವಾಗಿ ಮಾಡಲು ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ. ಅವರು ಹೊರರಾಜ್ಯಗಳಿಂದ ಧಾವಿಸುವುದರಿಂದ ಮಾನವೀಯತೆಯ ಆಧಾರದಲ್ಲಿ ಅವರಿಗೆ ಸ್ಥಳಿಯ ವ್ಯಾಪಾರಸ್ಥರು ಊಟದ ಪ್ಯಾಕೇಟ ನೀಡಲು ಮುಂದಾಗಬೇಕು. ಚಾಲಕರು ನಗರದಲ್ಲಿ ತಿರುಗಾಡದಂತೆ ಪೊಲೀಸರು ಸಂಪೂರ್ಣ ನಿಗಾವಹಿಸಬೇಕು ಎಂದರು.
ಸ್ಥಳೀಯ ಶಾಸಕ ಅರುಣಕುಮಾರ ಪೂಜಾರ, ಬ್ಯಾಡಗಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ, ತಾಪಂ ಅಧ್ಯಕ್ಷೆ ಗೀತಾ ಲಮಾಣಿ, ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ಚೋಳಪ್ಪ ಕಸವಾಳ, ತಹಶೀಲ್ದಾರ ಬಸನಗೌಡ ಕೋಟೂರ, ತಾಪಂ ಕಾರ್ಯನಿವರ್ಾಹಕ ಅಧಿಕಾರಿ ಎಸ್.ಎಂ.ಕಾಂಬಳೆ, ವ್ಯವಸ್ಥಾಪಕ ಬಸವರಾಜ ಶಿಡೆನೂರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.