ಕಬಡ್ಡಿ , ರಿಲೆ ತಾಲೂಕು ಮಟ್ಟಕ್ಕೆ ಆಯ್ಕೆ
Selection for Kabaddi, Riley Taluk level
ಹನಮಸಾಗರ 13: ಪಾಠದ ಜೊತೆಗೆ ಕ್ರೀಡೆ ಯು ಅಷ್ಟೇ ಮುಖ್ಯ ವಿದ್ಯಾರ್ಥಿಗಳಿಗೆ ಎಂದು ಶಾಲೆಯ ಪ್ರಾಂಶುಪಾಲರಾದ ಶ್ರೀ ಅನಿಲ ಸಂಗಮ, ಹೇಳಿದರು ಮನ್ನೇರಾಳ ಗ್ರಾಮದಲ್ಲಿ ನಡೆದ 2024-25 ನೇ ಸಾಲಿನ ಹನಮಸಾಗರ ವಲಯ ಮಟ್ಟದ ಪ್ರೌಢ ಶಾಲೆಗಳ ಕ್ರೀಡಾಕೂಟದಲ್ಲಿ ಸ್ಥಳೀಯ ಇಂದಿರಾಗಾಂಧಿ ವಸತಿ ಶಾಲೆಯ ವಿದ್ಯಾರ್ಥಿಗಳು ಗುಂಪು ಆಟಗಳಾದ ಕಬಡ್ಡಿ ಹಾಗೂ ರಿಲೇಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ವಯಕ್ತಿಕ ವಿಭಾಗದಲ್ಲಿ ಶಿವರಾಜ ಪರಸಾಪೂರ 800ಮೀ ಓಟ ಪ್ರಥಮ,ಪ್ರದೀಪ ಮಾಲಿಪಾಟೀಲ 1500ಮೀ ಓಟ ಪ್ರಥಮ, ಆಕಾಶ ತಳವಾರ 3000 ಮೀ ಪ್ರಥಮ, ಮಂಜುನಾಥ ರಗಣಿ ಡಿಸ್ಕಸ್ ಥ್ರೋ ಪ್ರಥಮ ಹಾಗೂ ಜಾವೆಲಿನ ಥ್ರೋ ದ್ವಿತೀಯ, ಕಿರಣ ಪಾಟೀಲ 400ಮೀ ಓಟ ದ್ವಿತೀಯ, ವರುಣ ಕುದರಿ ಶಾಟ್ ಪುಟ್ ದ್ವಿತೀಯ ಸ್ಥಾನ ಪಡೆದುಕೊಂಡು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದು, ಪವನ ಹೊಸಮನಿ 100ಮೀ ಓಟ ಹಾಗೂ ಡಿಸ್ಕಸ್ ಥ್ರೋ ತೃತೀಯ, ಜ್ಯೋತಿ ಮೂಡದಿನ್ನಿ ಡಿಸ್ಕಸ್ ಥ್ರೋ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಈ ಎಲ್ಲ ವಿದ್ಯಾರ್ಥಿಗಳಿಗೆ ಶಾಲೆಯ ಪ್ರಾಂಶುಪಾಲರಾದ ಶ್ರೀ ಅನಿಲ ಸಂಗಮ, ನಿಲಯ ಪಾಲಕರಾದ ಪ್ರಭಾಕರ ಮುದಗಲ್ಲ, ದೈಹಿಕ ಶಿಕ್ಷಣ ಶಿಕ್ಷಕಿಯರಾದ ಶ್ರೀಮತಿ ಸುಧಾ ಗೌಡರ, ಶಿಕ್ಷಕರಾದ ಈಶ್ವರ ಪತ್ತಾರ, ಶರಣಪ್ಪ ಪಟ್ಟಣಶೆಟ್ಟಿ, ಸತೀಶ ಅರಕೇರಿ, ಕಮಲಾಕ್ಷಿ ತೆಗ್ಗಿ (ಕಂಪ್ಲಿ), ಕವಿತಾ ಬೆನಕನವಾರಿ, ಬಸಪ್ಪ ಚೌಡಾಪೂರ, ಮಹಾಂತೇಶ ಬೀಳಗಿ ಅಂಬರೀಶ್ ಭೋವಿ, ಅಕ್ಷತಾ ಹುನ್ನಳ್ಳಿ, ಮಂಜುಳಾ ಯಂಗಾಡಿ, ಮೈಲಾರಲಿಂಗಪ್ಪ ಕರಪಡಿ, ಮುತ್ತು ಅಗಸಿಮುಂದಿನ ಹಾಗೂ ಅಡುಗೆ ಸಿಬ್ಬಂದಿಯವರು ಅಭಿನಂದಿಸಿ ಶುಭ ಹಾರೈಸಿದರು
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ 