ಅಶ್ವಿನ್ ಎ. ಶೇಣ್ವಿಗೆ ಅತ್ಯುತ್ತಮ ಸೇವಾ ಪ್ರಶಸ್ತಿ

ಅಶ್ವಿನ್ ಎ. ಶೇಣ್ವಿಗೆ ಅತ್ಯುತ್ತಮ ಸೇವಾ ಪ್ರಶಸ್ತಿ Ashwin A. Shenvi gets Best Service Award

ಲೋಕದರ್ಶನ ವರದಿ 

ದಾಂಡೇಲಿ 29: ದಾಂಡೇಲಿಯ  ಬಾಂಗೂರ ನಗರ ಡಿಗ್ರಿ ಕಾಲೇಜಿನ  ನಿವೃತ್ತ ಪ್ರಾಂಶುಪಾಲ ಆನಂದ ಕೆ. ಶೇಣ್ವಿ ಅವರ ಪುತ್ರ ಐಜಿಪಿ ಮತ್ತು ಸಿಬಿಐ ಜಂಟಿ ನಿರ್ದೇಶಕರಾದ ಅಶ್ವಿನ್ ಎ. ಶೇಣ್ವಿಯವರಿಗೆ ದೆಹಲಿಯಲ್ಲಿ ಅತ್ಯುತ್ತಮ ಸೇವಾ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. 

 ಈ ಪ್ರಶಸ್ತಿಯನ್ನು ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿಗಳಾದ ಸೂರ್ಯಕಾಂತ ಅವರು ಈ ಪ್ರಶಸ್ತಿಯನ್ನು ಪ್ರಧಾನ ಮಾಡಿದರು. ಅಶ್ವಿನ್ ಎ. ಶೇಣ್ವಿಯವರು ದಾಂಡೇಲಿಯ ಬಾಂಗೂರ ನಗರ ಡಿಗ್ರಿ ಕಾಲೇಜಿನಲ್ಲಿ ವ್ಯಾಸಂಗ  ಮಾಡಿದ್ದಾರೆ. ಅವರ ತಾಯಿ  ಆಶಾ ಎ. ಶೇಣ್ವಿ ಅಂಚೆ ಇಲಾಖೆಯ ನಿವೃತ್ತ ಅಧಿಕಾರಿಯಾಗಿದ್ದಾರೆ.