ಗಣತಿ ಪಟ್ಟಿಯಾಚೆ ಇರುವ ದೇವದಾಸಿ ಮಹಿಳೆಯರು ಹಾಗೂ ಅವರ ಕುಟುಂಬಗಳ ಸದಸ್ಯರನ್ನು ಗಣತಿ ಪಟ್ಟಿಗೆ ಸೇರಿಸಲು ಮನವಿ
Appeal to include Devadasi women and their family members who are not included in the census list
ಲೋಕದರ್ಶನ ವರದಿ
ಕೊಪ್ಪಳ 29 : ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘವು ನಿರಂತರವಾಗಿ ಕೇಳುತ್ತಾ ಬಂದ ಪ್ರಮುಖ ಹಕ್ಕುಗಳನ್ನು ಪರಿಗಣಿಸಿ ಸರಕಾರ ಈಚೆಗೆ ದೌರ್ಜನ್ಯದ ದೇವದಾಸಿ ಪದ್ಧತಿಗೆ ಪರಿಣಾಮಕಾರಿ ಕ್ರಮ ಕೈಗೊಳ್ಳಲು ದೇವದಾಸಿ ನಿಷೇದ ಮಸೂದೆ - 2025 ಅಂಗೀಕರಿಸಿರುವುದನ್ನು ಮತ್ತು ಎಲ್ಲ ದೇವದಾಸಿ ಮಹಿಳೆಯರ ಹಾಗೂ ಅವರ ಮೂರು ತಲೆ ಮಾರುಗಳ ಕುಡುಂಬದ ಸದಸ್ಯರ ಗಣತಿಗೆ ಕ್ರಮ ವಹಿಸಿರುವುದನ್ನು ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘ ಜಿಲ್ಲಾ ಸಮಿತಿ ಸ್ವಾಗತಿಸುತ್ತದೆ. ಈಗ ಕಾರ್ಯ ನಿರ್ವಹಿಸುವ ಗಣತಿಯಲ್ಲಿ ಈಗಾಗಲೆ ಗಣತಿಪಟ್ಟಿಯಲ್ಲಿರುವ ದೇವದಾಸಿ ಮಹಿಳೆಯರು ಹಾಗು ಕುಟುಂಬದ ಸದಸ್ಯರನ್ನು ವಿಶೇಷವಾಗಿ ಮರು ಸಮೀಕ್ಷೆಗೆ ಕ್ರಮ ವಹಿಸಲಾಗಿದೆ. ಇದು ಸರಿಯಿದೆ.
ಆದರೆ, ಇದುವರೆಗೆ ಗಣತಿಯಲ್ಲಿ ಸೇರಿಸಲಾಗದಿರುವ ದೇವದಾಸಿ ಮಹಿಳೆಯರು ಹಾಗು ಅವರಕುಟುಂಬದ ಸಾವಿರಾರು ಸದಸ್ಯರು, ಈ ದೌರ್ಜನ್ಯದ ದೇವದಾಸಿ ಪದ್ಧತಿಗೆ ಹಾಗು ಜಾತಿಅಸಮಾನತೆ ಮತ್ತುಅಶ್ಪೃಶ್ಯಾಚರಣೆಯ ಅಪಮಾನಗಳ ತೀವ್ರ ಶೋಷಣೆಗೆ ಗುರಿಯಾಗಿದ್ದರೂ, ಅವರು ಕೇವಲ ಗಣತಿ ಪಟ್ಟಿಯಲ್ಲಿಲ್ಲವೆಂಬ ಕಾರಣಕ್ಕೆ ದೇವದಾಸಿ ಮಹಿಳೆಯರು ಈಗ ಸಿಗುವ ಯಾವುದೇ ಕನಿಷ್ಠ ಸೌಲಭ್ಯಗಳಕನ್ನು ಪಡೆಯಲಾಗುತ್ತಿಲ್ಲ. ಗಣತಿ ಪಟ್ಡಿಯಲ್ಲಿಲ್ಲವೆಂಬ ಕಾರಣಕ್ಕೆಅವರಿಗೆ, ಅವರ ಮಕ್ಕಳಿಗೆ ದೇವದಾಸಿ ಕುಟುಂಬದ ಸರ್ಟಿಫಿಕೇಟ್‌ಕೂಡಾ ಸಿಕ್ಕಿರುವುದಿಲ್ಲ. ಇದರಿಂದ ಸಾವಿರಾರು ಮಕ್ಕಳು ಅವರ ವಿದ್ಯಾಭ್ಯಾಸದ ಹಾಗು ಉದ್ಯೋಗದ ಸೌಲಭ್ಯ ವಂಚಿತರಾಗಿದ್ದಾರೆ.ತಾಯಂದಿರುದೌರ್ಜನ್ಯದಿಂದ ನಲುಗಿದ್ದಾರೆ.
ಪರಿಸ್ಥಿತಿ ಹೀಗಿರುವಾಗ ಈಗ ನಡೆಯುತ್ತಿರುವಗಣತಿಗೆ, ಗಣತಿ ಪಟ್ಟಿಯಿಂದಾಚೆಇರುವ ಮಹಿಳೆಯರನ್ನು ಮಗದೊಮ್ಮೆ ಹೊರಗಿಡುವುದುಕಂಡು ಬಂದಿದೆ. ದೇವದಾಸಿ ಪದ್ದತಿ ನಿಷೇದಕಾಯ್ದೆ - 1982 ರಲ್ಲಿ ಅಂಗೀಕರಿಸಿ ಜಾರಿಯಾಗಿರುವುದರಿಂದಆನಂತರ ಹುಟ್ಟಿದವರನ್ನುಗಣತಿ ಸೇರಿಸಲಾಗದೆಂದು ಹಳೆಯ ಕಾನೂನನ್ನು ತೋರಿಸಿ ಗಣತಿ ಪಟ್ಟಿಯಲ್ಲಿಲ್ಲದ ಮಹಿಳೆಯರ ಅರ್ಜಿಗಳನ್ನು ಪಡೆಯದಿರುವುದು ನಡೆದಿದೆ.
ದೇವದಾಸಿ ಪದ್ದತಿಯನ್ನು ಈ ಹಿಂದೆ ಬ್ರಿಟೀಷರ ಕಾಲದಲ್ಲೆ ನಿಷೇಧಿಸಲಾಗಿತ್ತು. ಹಾಗಿದ್ದಾಗಲು, ದೇವದಾಸಿ ಮಹಿಳೆಯರ ಎರಡು ಬಾರಿಗಣತಿ ನಡೆಸಿ ಪುನರ್ವಸತಿಕಲ್ಪಿಸಲಾಗಿದೆ. ಅದೇ ರೀತಿ, ದೇವದಾಸಿ ಪದ್ದತಿ ನಿಷೇದ ಮಸೂದೆ -2025 ಸ್ಪಷ್ಠವಾಗಿ ಹಿಂದಿನ ಕಾಯ್ದೆಗಳನ್ನು ರದ್ದುಪಡಿಸಿರುವುದಾಗಿ ಹೇಳಿದೆ.ಈ ಮಸೂದೆ ಈಗಾಗಲೆ ವಿಧಾನ ಮಂಡಲದಎರಡೂ ಸದನಗಳಲ್ಲಿ ಅವಿರೋಧಒಪ್ಪಿಗೆ ಪಡೆದಿದೆ. ಈಗ ಅದರ ನೋಟಿ ಫಿಕೇಷನ್ ಆಗ ಬೇಕಾಗಿದೆ. ಈ ಹಂತದಲ್ಲಿ ಗಣತಿಯಾಚೆ ಇರುವ ಮಹಿಳೆಯರು ಅವರ ಕುಟುಂಬದ ಸದಸ್ಯರನ್ನು ಹಳೆಯ ಕಾಯ್ದೆ ತೋರಿಸಿ ಹೊರಗಿಟ್ಟಲ್ಲಿ, ಹೊಸ ಕಾಯ್ದೆ ಅಂಗೀಕಾರದ ನಂತರ ಮರಳಿ ಈ ಮಹಿಳೆಯರ ಗಣತಿಗೆ ಕ್ರಮವಹಿಸಲು ಮತ್ತಷ್ಠು ಬಜೆಟ್ ಹೊರೆಯನ್ನು ಸರಕಾರ ಭರಿಸಬೇಕಾಗುತ್ತದೆ ಹಾಗು ಅಲ್ಲಿಯವರೆಗೆ ಈ ಕುಟುಂಬಗಳು ಸಂಕಷ್ಠವನ್ನು ಅನುಭವಿಸ ಬೇಕಾಗುತ್ತದೆ.
ಆದ್ದರಿಂದ, ಯಾವುದೆ ವಯೋಮಿತಿ ಕೇಳದೆ ಹಾಗು ವಿದಾನ ಮಂಡಲ ರದ್ದು ಮಾಡಿದ ಕಾಯ್ದೆಗಳನ್ನು ತೋರಿಸಿ ಅರ್ಜಿ ಪಡೆಯದಿರುವ ಮತ್ತು ಫಲಾನುಭವಿಗಳಾಗಿ ವಿಲೇ ಮಾಡದಿರುವ ತೊಡಕುಗಳನ್ನು ಸರಿ ಪಡಿಸಿಗಣತಿ ಪಟ್ಡಿಯಾಚೆ ಇರುವ ಎಲ್ಲ ದೇವದಾಸಿ ಮಹಿಳೆಯರನ್ನು ಅವರ ಮೂರು ತಲೆಮಾರು ಕುಟುಂಬದ ಸದಸ್ಯರನ್ನು ಅತಿ ಶೀಘ್ರವಾಗಿ ಗಣತಿಯ ಪಟ್ಟಿಗೆ ಸೇರಿಸಲು ವಿಶೇಷ ಕ್ರಮ ವಹಿಸಿ 2026 ರ ಬಜೆಟ್ ನಲ್ಲಿ ಈ ಎಲ್ಲರಿಗೂಎಲ್ಲ ದೇವದಾಸಿ ಮಹಿಳೆಯರುಗೂ ರೂ.5000/- ಮಾಸಾಸನ ಹೆಚ್ಚಿಗೆ ಮಾಡಬೇಕು ಮತ್ತು ದೇವದಾಸಿ ಮಹಿಳೆಯರ ಕುಟುಂಬಕ್ಕೆ ಸೌಲಭ್ಯಗಳು ದೊರೆಯುವಂತೆ ಕ್ರಮವಹಿಸಲು ಕರ್ನಾಟಕರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘಜಿಲ್ಲಾ ಸಮಿತಿ ಮನವಿ ಮಾಡುತ್ತದೆ. ಅದೇರೀತಿ, ತಕ್ಷಣದಿಂದಲೆ ಈ ಮಹಿಳೆಯರಿಗೆ ಅವರಕುಟುಂಬದ ಸದಸ್ಯರಿಗೆ ದೇವದಾಸಿ ಕುಟುಂಬದ ಸರ್ಟಿಫಿಕೇಟ್ ನೀಡುವಂತೆ ಒತ್ತಾಯಿಸುತ್ತದೆ.
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ 