ಬೆಂಗಳೂರು, ಫೆ 03 : ಮಂಗಳೂರು ಸೊಗಡಿನ ಕನ್ನಡ ಚಿತ್ರ ’ದಾಮಾಯಣ’ ಬಹು ಭರವಸೆ ಮೂಡಿಸಿರುವ ಹೊಸಬರ ಚಲನಚಿತ್ರ ತಿಳಿ ಹಾಸ್ಯದ ಚಿತ್ರವನ್ನು ’ಶ್ರೀಮುಖ’ ರಚಿಸಿ ನಿರ್ದೇಶಿಸಿದ್ದಾರೆ
ಈಗಾಗಲೇ ’ಪಿಕ್ ಯುವರ್ ಫ಼್ಲಿಕ್’ ಚಲನಚಿತ್ರೋತ್ಸವದಲ್ಲಿ ಪಾಲ್ಗೊಂಡಿದ್ದ ಚಿತ್ರ, ಇದೀಗ ೭ನೇ ದರ್ಭಾಂಗ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ
ಚಲನಚಿತ್ರೊತ್ಸವವು ಫೆಬ್ರವರಿ ೭ರಿಂದ ೩ ದಿನಗಳ ಕಾಲ ಬಿಹಾರದ ದರ್ಭಾಂಗ ನಗರದಲ್ಲಿ ನಡೆಯಲಿದೆ.
ಚಿತ್ರತಂಡ ಫೇಸ್ಬುಕ್‌ನಲ್ಲಿ ಬಿಡುಗಡೆ ಮಾಡಿದ್ದ ದಾಮಾಯಣದ ಮೊದಲ ಟೀಸರ್‌ಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಟೀಸರ್ ಹನ್ನೊಂದು ಲಕ್ಷಕ್ಕೂ ಮಿಕ್ಕಿ ಜನರಿಂದ ವೀಕ್ಷಿಸಲ್ಪಟ್ಟಿದೆ. ಹೊಸಬರ ಚಿತ್ರಕ್ಕೆ ದೊರಕಿದ ಮೆಚ್ಚುಗೆಗೆ ಚಿತ್ರತಂಡ ಸಂತಸ ವ್ಯಕ್ತಪಡಿಸಿದೆ.
ಟೀಸರ್‌ನ ಉದ್ದಕ್ಕೂ ಮಂಗಳೂರು ಕನ್ನಡದಲ್ಲಿ ಮಾತನಾಡುವ ದಾಮೋದರ ಪುತ್ತೂರಿನವನು. ದಾಮೋದರನಿಗೆ ತಾನೊಬ್ಬ ಪ್ರತಿಭಾವಂತ ಎನ್ನುವ ಹೆಮ್ಮೆ. ಆದರೆ ಅವನ ಪ್ರತಿಭೆಗೆ ಎಟುಕಿದ್ದು ಮನೆಯ ಅಂಗಳದಿಂದ ಅಡಿಕೆ ಕದಿಯುವ ಹಾಗೂ ಟಿಕ್-ಟಾಕ್‌ನಲ್ಲಿ ಹಾಡುವ ಚಾಳಿಗಳು. ದಾಮೋದರನ ತಂದೆ ಕೃಷಿಕ, ತಾಯಿ ಗೃಹಿಣಿ. ದಾಮೋದರನಿಗೆ ಮಾತ್ರ- ತಾನು ಪೇಟೆಗೆ ಹೋಗಿ ಹೆಸರು ಮಾಡಬೇಕು ಎನ್ನುವ ಬಯಕೆ. ದಾಮೋದರನ ಹಾಸ್ಯಾಸ್ಪದ ವ್ಯಕ್ತಿತ್ವವೇ ಟೀಸರ್‌ನ ಪ್ರಮುಖ ಅಂಶ.
ದಾಮಾಯಣದಲ್ಲಿ ಐದು ಹಾಡುಗಳಿವೆ.