ನವದೆಹಲಿ, ಏ 13, ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸಕ್ರಿಯರಾಗಿರುವ ಭಾರತ ಕ್ರಿಕೆಟ್ ತಂಡದ ಮಾಜಿ ಸ್ಫೋಟಕ ಆರಂಭಿಕ ಬ್ಯಾಟ್ಸ್ ಮನ್ ವೀರೇಂದ್ರ ಸೆಹ್ವಾಗ್, ತಮ್ಮ ಬ್ಯಾಟಿಂಗ್ ಸ್ಫೂರ್ತಿಯನ್ನು ಬಹಿರಂಗ ಪಡಿಸಿದ್ದು, ರಾಮಾಯಣ ಧಾರಾವಾಹಿಯ ಚಿತ್ರದೊಂದಿಗೆ ಈ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ.ಸೆಹ್ವಾಗ್ ಹಂಚಿಕೊಂಡಿರುವ ಈ ಚಿತ್ರದಿಂದ ಸ್ಫೋಟಕ ಬ್ಯಾಟ್ಸ್ ಮನ್ ಗೆ ರಾಮಾಯಣದ ಪಾತ್ರ 'ಅಂಗದ' ಸ್ಫೂರ್ತಿ ಎಂಬ ಸತ್ಯ ಇದೀಗ ಬಹಿರಂಗವಾಗಿದೆ. ಈ ವಿಚಾರವನ್ನು ಚಿತ್ರದೊಂದಿಗೆ ಟ್ವಿಟರ್ ಖಾತೆಯ ಮೂಲಕ ಅವರು ಹೇಳಿಕೊಂಡಿದ್ದಾರೆ.ಸರಕಾರಿ ಸ್ವಾಮ್ಯದ ದೂರದರ್ಶನ ವಾಹಿನಿಯಲ್ಲಿ 80ರ ದಶಕದಲ್ಲಿ ಜನಪ್ರಿಯತೆಯ ಹೊಂದಿದ್ದ ರಾಮಾಯಣ ಧಾರಾವಾಹಿ ಪ್ರಸ್ತುತ ಮರು ಪ್ರಸಾರವಾಗುತ್ತಿದ್ದು, ಟಿಆರ್ ಪಿಯಲ್ಲಿ ರೇಟಿಂಗ್ ನಲ್ಲಿ ದೊಡ್ಡ ಯಶಸ್ಸನ್ನೂ ಕಾಣುತ್ತಿದೆ. ಈ ಧಾರಾವಾಹಿಯಲ್ಲಿ ಬರುವ ಅಂಗದನ ಸಾಹಸದ ದೃಶ್ಯವನ್ನು ಹಂಚಿಕೊಂಡಿರುವ ಸೆಹ್ವಾಗ್, ಈತನೇ ತನ್ನ ಬ್ಯಾಟಿಂಗ್‌ಗೆ ಸ್ಫೂರ್ತಿಗೆ ಕಾರಣ ಕರ್ತೃ ಎಂಬುದನ್ನು ತಿಳಿಸಿದ್ದಾರೆ. ಬ್ಯಾಟಿಂಗ್‌ಗೆ ನಾನು ಸ್ಫೂರ್ತಿಯನ್ನು ಎಲ್ಲಿಂದ ಪಡೆದುಕೊಂಡೆ ಎಂಬುದು ಇಲ್ಲದೆ ಎಂದು ಬರೆದಿರುವ ಜತೆಗೆ "ಪಾದಗಳನ್ನು ಅಲುಗಾಡಿಸುವುದು ಕಷ್ಟ ಮಾತ್ರವಲ್ಲ, ಸಾಧ್ಯವೇ ಇಲ್ಲ, ಅಂಗದ್ ಜಿ ರಾಕ್ಸ್" ಎಂದು ಈ ಫೋಟೋಗೆ ಶೀರ್ಷಿಕೆ ನೀಡಿದ್ದಾರೆ.