ಡಿ. 24 ರಿಂದಲೇ ಜಿಲ್ಲೆಯಲ್ಲಿ ಹೆಚ್ಚಿನ ಬಿಗಿ ಭದ್ರತೆ : ಎಸ್ಪಿ ದೀಪನ್
Security tightened in the district from December 24: SP Deepan
ಕಾರವಾರ 30: ಡಿಸೆಂಬರ್ 24 ರಿಂದಲೇ ಜಿಲ್ಲೆಯಲ್ಲಿ ಬಿಗಿ ಭದ್ರತೆ ಕೈಗೊಂಡಿದ್ದೇವೆ ಎಂದು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಎಂ.ಎನ್. ದೀಪನ್ ಹೇಳಿದ್ದಾರೆ.ಜಿಲ್ಲೆಯಲ್ಲಿ 1300ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ ಎಂದು ಮಂಗಳವಾರ ಭೇಟಿಯಾದ ಮಾಧ್ಯಮಗಳಿಗೆ ವಿವರಿಸಿದರು. ಪ್ರವಾಸಿಗರು ಹೆಚ್ಚಿರುವ ಗೋಕರ್ಣ, ಮುರ್ಡೇಶ್ವರಕ್ಕೆ 200ಕ್ಕೂ ಹೆಚ್ಚಿನ ಹೋಂ ಗಾರ್ಡ್ ಗಳನ್ನು ಕರ್ತವ್ಯಕ್ಕೆ ಹಾಕಲಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಅನಮೂಡ, ಮಾಜಾಳಿ, ಸೇರಿದಂತೆ ಒಟ್ಟು 31 ಚೆಕ್ ಪೋಸ್ಟ್ ಗಳಿದ್ದು, ಎಲ್ಲಾ ಚೆಕ್ ಪೋಸ್ಟ್ ಗಳಲ್ಲಿ ಹೆಚ್ಚಿನ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಗೋವಾ ರಾಜ್ಯದ ಗಡಿಯ ಎರಡು ಕಡೆ ಹಾಗೂ ಇತರೆ ನಾಲ್ಕು ಅತಿ ಸೂಕ್ಷ್ಮ ಸ್ಥಳಗಳಲ್ಲಿ ಹಾಗೂ ಉಳಿದ ಪ್ರಮುಖ ರಸ್ತೆಗಳಲ್ಲಿರುವ 25 ಚೆಕ್ ಪೋಸ್ಟ್ ಗಳಲ್ಲಿ ಸಿಬ್ಬಂದಿ ನಿಯೋಜಿಸಿದ್ದು,
ಹೆಚ್ಚಿನ ನಿಗಾ ಇಡಲಾಗಿದೆ ಎಂದರು. ಜಿಲ್ಲೆಯಲ್ಲಿನ 500 ಕ್ಕೂ ಹೆಚ್ಚಿರುವ ಹೊಂ ಸ್ಟೆ ಮತ್ತು ರೆಸಾರ್ಟ್ , ಲಾಡ್ಜ್ ಗಳ ಮೇಲೆ ಹದ್ದಿನ ಕಣ್ಣು ಇಡಲಾಗಿದೆ. ಅನುಮಾನ ಬಂದ ಕಡೆ ರೈಡ್ ಮಾಡಲು ಸಿಬ್ಬಂದಿಗೆ ಸೂಚನೆ ನೀಡಿದ್ದೇನೆ ಎಂದು ಎಸ್ಪಿ ದೀಪನ್ ಹೇಳಿದರು. ಕಳೆದ ನಾಲ್ಕು ದಿನಗಳಿಂದ 156 ಡ್ರಂಕ್ ಡ್ರೈವ್ ( ಕುಡಿದು ವಾಹನ ಚಾಲನೆ) ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಎಸ್ಪಿ ಹೇಳಿದರು. ಕಾರವಾರ, ಗೋಕರ್ಣ, ಧಾರೇಶ್ವರ, ಕುಮಟಾದ ಮತ್ತು ಹೊನ್ನಾವರ , ಮುರುಡೇಶ್ವರ ಕಡಲ ತೀರಗಳಲ್ಲಿ ಹೆಚ್ಚಿನ ಬಿಗಿ ಭದ್ರತೆ ಒದಗಿಸಲಾಗಿದೆ. ಕಡಲತೀರಗಳಲ್ಲಿ ರಾತ್ರಿ ವೇಳೆ ಸಮುದ್ರಕ್ಕಿಳಿಯುವುದು ನಿರ್ಬಂಧ ಮಾಡಲಾಗಿದೆ ಎಂದು ಎಸ್ಪಿ ವಿವರಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 