ಶಬರಿಮಲೆ ಮಹಿಳಾ ಭಕ್ತರಿಗೆ ಭದ್ರತೆ; ಸುಪ್ರೀಂ ಮೊರೆ ಹೋದ ಬಿಂದು ಅಮ್ಮಿನಿ

Supreme

ನವದೆಹಲಿ, ಡಿ ೨ -  ಶಬರಿಮಲೆ  ಅಯ್ಯಪ್ಪ ಸ್ವಾಮಿ   ದರ್ಶಿಸಲು  ದೇಗುಲ    ಪ್ರವೇಶಿಸುವ    ಮಹಿಳಾ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ,  ಸೂಕ್ತ ಭದ್ರತೆ  ಕಲ್ಪಿಸಲು   ಕೇರಳ ಸರ್ಕಾರಕ್ಕೆ  ಆದೇಶ ನೀಡಬೇಕೆಂದು   ಕೋರಿ ಮಹಿಳಾ ಹಕ್ಕುಗಳ ಕಾರ್ಯಕರ್ತೆ ಬಿಂದು ಅಮ್ಮಿನಿ ಸೋಮವಾರ ಸುಪ್ರೀಂ ಕೋರ್ಟ್  ಮೊರೆ ಹೋಗಿದ್ದಾರೆ.

 ಯಾವುದೇ ವಯೋಮಿತಿ  ಪರಿಗಣಿಸದೆ   ಶಬರಿಮಲೆ   ದೇಗುಲವನ್ನು   ಮಹಿಳೆಯರು  ಪ್ರವೇಶಿಸಲು  ಹಾಗೂ ಪ್ರಾರ್ಥಿಸಲು ಅವಕಾಶ  ಕಲ್ಪಿಸಿ   ಸುಪ್ರೀಂಕೋರ್ಟ್  ಈ  ಹಿಂದೆ  ನೀಡಿದ್ದ   ತೀರ್ಪನ್ನು ಪ್ರಶ್ನಿಸಿ ಹಲವರು  ಮರು ಪರಿಶೀಲನಾ ಅರ್ಜಿಗಳನ್ನು  ಸಲ್ಲಿಸಿದ್ದರು.  

ಈ  ಆರ್ಜಿಗಳನ್ನು ಕಳೆದ ತಿಂಗಳು ಸುಪ್ರೀಂ ಕೋರ್ಟ್ ಪರಿಶೀಲಿಸಿ, ಏಳು ಸದಸ್ಯರ ವಿಸ್ತೃತ ಪೀಠದ  ಪರಿಶೀಲನೆಗೆ  ಒಪ್ಪಿಸಿತ್ತು. 

ಸುಪ್ರೀಂ ಕೋರ್ಟ್ ಮಹಿಳೆಯರ ಪ್ರವೇಶದ  ಬಗ್ಗೆ  ಯಾವುದೇ ತಡೆಯಾಜ್ಞೆ  ನೀಡದಿದ್ದರೂ, ಕೇರಳ ಸರ್ಕಾರ ಮಹಿಳಾ ಭಕ್ತರಿಗೆ  ಯಾವುದೇ ರೀತಿಯ ಭದ್ರತೆ  ಕಲ್ಪಿಸದಿರಲು  ನಿರ್ಧರಿಸಿದೆ.

ಈ  ಹಿನ್ನೆಲೆಯಲ್ಲಿ, ಕೆಲವು ಮಹಿಳಾ ಭಕ್ತರೊಂದಿಗೆ  ಬಿಂದು ಅಮ್ಮಿನಿ   ಶಬರಿಮಲೆಗೆ  ತೆರಳುವ   ಮಾರ್ಗ ಮಧ್ಯೆ   ಎರ್ನಾಕುಲಂ ನಗರ ಪೊಲೀಸ್ ಆಯುಕ್ತರ ಕಚೇರಿ ಹೊರಗೆ   ಅವರ ಮೇಲೆ ಪೆಪ್ಪರ್ ಸ್ಪ್ರೇ  ಮೂಲಕ  ದಾಳಿ ನಡೆಸಿದ ಆರೋಪಗಳು ಕೇಳಿ ಬಂದಿವೆ.