ಆಕ್ಲೆಂಡ್, ಫೆ 8 , ಇಲ್ಲಿನ ಈಡಾನ್ ಪಾರ್ಕ್ ಅಂಗಳದಲ್ಲಿ ನ್ಯೂಜಿಲೆಂಡ್ ವಿರುದ್ಧ ಎರಡನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಫೀಲ್ಡಿಂಗ್ ಆಯ್ದುಕೊಂಡಿದ್ದಾರೆ.ಎರಡೂ ತಂಡಗಳು ಇಂದಿನ ಪಂದ್ಯದ ಅಂತಿಮ 11ರಲ್ಲಿ ಬದಲಾವಣೆ ಮಾಡಿಕೊಡಿವೆ. ಮೊಹಮ್ಮದ್ ಶಮಿ ಹಾಗೂ ಕುಲ್ದೀಪ್ ಯಾದವ್ ಅವರ ಬದಲಿಗೆ ನವದೀಪ್ ಸೈನಿ ಹಾಗೂ ಯಜ್ವೇಂದ್ರ ಚಾಹಲ್ ಅವರಿಗೆ ಅವಕಾಶ ನೀಡಲಾಗಿದೆ.
ಇನ್ನು, ನ್ಯೂಜಿಲೆಂಡ್ ತಂಡ ಇಶ್ ಸೋಧಿ ಹಾಗೂ ಮಿಚೆಲ್ ಸ್ಯಾಂಟ್ನರ್ ಅವರ ಬದಲು ಮಾರ್ಕ್ ಚಾಪ್ಮನ್ ಮತ್ತು ಕೈಲ್ ಜಾಮಿಸನ್ ಅವರಿಗೆ ಅವಕಾಶ ನೀಡಿದೆ. ಮೂರು ಪಂದ್ಯಗಳ ಸರಣಿಯನ್ನು ಜೀವಂತವಾಗಿರಿಸಿಕೊಳ್ಳಬೇಕಾದರೆ, ಇಂದಿನ ಪಂದ್ಯದಲ್ಲಿ ಭಾರತಕ್ಕೆ ಗೆಲುವು ಅನಿವಾರ್ಯವಾಗಿದೆ.
ಅಂತಿಮ 11 ಭಾರತ: ಪೃಥ್ವಿ ಶಾ, ಮಯಾಂಕ್ ಅಗರ್ವಾಲ್, ವಿರಾಟ್ ಕೊಹ್ಲಿ (ನಾಯಕ), ಶ್ರೇಯಸ್ ಅಯ್ಯರ್, ಕೆ.ಎಲ್ ರಾಹುಲ್, ಕೇದಾರ್ ಜಾಧವ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕುರ್, ಯಜ್ವೇಂದ್ರ ಚಾಹಲ್, ನವದೀಪ್ ಸೈನಿ, ಜಸ್ಪ್ರಿತ್ ಬುಮ್ರಾ.
ನ್ಯೂಜಿಲೆಂಡ್: ಟಾಮ್ ಲಥಾಮ್(ನಾಯಕ/ವಿ.ಕೀ), ಮಾರ್ಟಿನ್ ಗುಪ್ಟಿಲ್, ಹೆನ್ರಿ ನಿಕೋಲ್ಸ್, ರಾಸ್ ಟೇಲರ್, ಜೇಮ್ಸ್ ನೀಶಮ್, ಟಾಮ್ ಬ್ಲಂಡೆಲ್, ಕಾಲಿನ್ ಡಿ ಗ್ರ್ಯಾಡ್ಹೋಮ್, ಕೈಲ್ ಜಾಮಿಸನ್, ಟಿಮ್ ಸೌಥಿ, ಮಾರ್ಕ್ ಚಾಪ್ಮನ್, ಹಾಮೀಶ್ ಬೆನೆಟ್.