ಎರಡನೇ ಅನಧಿಕೃತ ಟೆಸ್ಟ್: ನ್ಯೂಜಿಲೆಂಡ್(ಎ) ತಂಡಕ್ಕೆ ಮೊದಲ ದಿನದ ಗೌರವ

ಲಿನ್‌ಕಾಯಿನ್ (ನ್ಯೂಜಿಲೆಂಡ್), ಫೆ 7 (ಯುಎನ್ಐ) ಗ್ಲೆನ್ ಫಿಲಿಪ್ಸ್ (65 ರನ್) ಹಾಗೂ ಡೇನ್ ಕ್ಲೆವರ್ (ಔಟಾಗದೆ 46 ರನ್) ಅವರ ಸಮಯೋಜಿತ ಬ್ಯಾಟಿಂಗ್ ನೆರವಿನಿಂದ ನ್ಯೂಜಿಲೆಂಡ್ ಎ ತಂಡ ಎರಡನೇ ಅನಧೀಕೃತ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ಭಾರತ ಎ ವಿರುದ್ಧ ಮೊದಲನೇ ದಿನ ಗೌರವ ಮೊತ್ತ ದಾಖಲಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡಕ್ಕೆ ಹಾಮಿಶ್ ಋತ್‌ಫರ್ಡ್ ಹಾಗೂ ವಿಲ್ ಯಂಗ್ ಜೋಡಿ ಮೊದಲನೇ ವಿಕೆಟ್ ಗೆ 67 ರನ್ ಗಳಿಸಿ ಉತ್ತಮ ಆರಂಭ ನೀಡಿತು. 79 ಎಸೆತಗಳಲ್ಲಿ 40 ರನ್ ಗಳಿಸಿ ಮೊಹಮ್ಮದ್ ಸಿರಾಜ್‌ಗೆ ವಿಕೆಟ್ ಒಪ್ಪಿಸಿದರು. ಇವರ ಹಿಂದೆಯೆ ರಚಿನ್ ರವೀಂದ್ರ (12) ವಿಕೆಟ್ ಒಪ್ಪಿಸಿದರು. ವಿಲ್ ಯಂಗ್ (26) ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯಲಿಲ್ಲ.

ಮಧ್ಯಮ ಕ್ರಮಾಂಕದಲ್ಲಿ ಅತ್ಯುತ್ತಮ ಬ್ಯಾಟಿಂಗ್ ಮಾಡಿದ ಗ್ಲೆನ್ ಫಿಲಿಪ್ಸ್ 80 ಎಸೆತಗಳಲ್ಲಿ ಒಂದು ಸಿಕ್ಸರ್ ಹಾಗೂ 9 ಬೌಂಡರಿಯೊಂದಿಗೆ 65 ರನ್ ಗಳಿಸಿದರು. ಅಲ್ಲದೆ, ಮುರಿಯದ ನಾಲ್ಕನೇ ವಿಕೆಟ್‌ಗೆ ಟಿಮ್ ಸೀಫರ್ಟ್ ಅವರೊಂದಿಗೆ 76 ರನ್ ಜತೆಯಾಟವಾಡಿದ್ದರು. ಅತ್ಯುತ್ತಮ ಬ್ಯಾಟಿಂಗ್ ಮಾಡುತ್ತಿದ್ದ ಇವರನ್ನು ಆವೇಶ್ ಖಾನ್ ಔಟ್ ಮಾಡಿದರು. ಟಿಮ್ ಸೀಫರ್ಟ್ ಕೂಡ 64 ಎಸೆತಗಳಲ್ಲಿ 30 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.ಅತ್ಯುತ್ತಮ ಬ್ಯಾಟಿಂಗ್ ಮಾಡಿದ ಡೇನ್ ಕ್ಲೆವರ್ 115 ಎಸೆತಗಳಲ್ಲಿ 46 ರನ್ ಗಳಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಮತ್ತೊಂದು ತುದಿಯಲ್ಲಿ ಡೆರ್ಲಿ ಮಿಚೆಲ್(36) ಇದ್ದಾರೆ.ಭಾರತ ಎ ಪರ ಮೊಹಮ್ಮದ್ ಸಿರಾಜ್ ಹಾಗೂ ಆವೇಶ್ ಖಾನ್ ತಲಾ ಎರಡು ವಿಕೆಟ್ ಪಡೆದರು.

  ಸಂಕ್ಷಿಪ್ತ ಸ್ಕೋರ್

 ನ್ಯೂಜಿಲೆಂಡ್(ಎ)ಪ್ರಥಮ ಇನಿಂಗ್ಸ್: 90 ಓವರ್‌ಗಳಿಗೆ 276/6 (ಗ್ಲೆನ್ ಫಿಲಿಪ್ಸ್ 65, ಡೇನ್ ಕ್ಲೆವರ್ ಔಟಾಗದೆ 46, ಹಾಮಿಶ್ ಋತ್‌ಫರ್ಡ್ 40, ಡೆರ್ಲಿ ಮಿಚೆಲ್ ಔಟಾಗದೆ 36; ಮೊಹಮ್ಮದ್ ಸಿರಾಜ್ 58 ಕ್ಕೆ 2, ಆವೇಶ್ ಖಾನ್ 57 ಕ್ಕೆ 2)