ಸ್ಕೌಟ್-ಗೈಡ್: ರಾಜ್ಯ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸನ್ಮಾನ

ಲೋಕದರ್ಶನ ವರದಿ

ಕಾಗವಾಡ 23: ಕರ್ನಾಟಕ ಸರ್ಕಾರ ಸಾರ್ವಜನಿಕ ಶಿಕ್ಷಣ ಇಲಾಖೆ, ಬೆಳಗಾವಿ ಜಿಲ್ಲಾ ಪಂಚಾಯತಿ, ಕಾಗವಾಡ ತಾಲೂಕಾ ಮಟ್ಟದ ಶಿಕ್ಷಣ ಇಲಾಖೆ, ಭಾರತ ಸ್ಕೌಟ್ ಮತ್ತು ಗೈಡ್ ಸ್ಥಳೀಯ ಸಂಸ್ಥೆ ಕಾಗವಾಡ ಸಂಸ್ಥಾಪಕರ ದಿನಾಚರಣೆ ತಾಲೂಕಾ ಮಟ್ಟದ ಮಕ್ಕಳ ಮೇಳ, ಸೈಕಲ್ ಜಾತ್ರಾ ಕಾರ್ಯಕ್ರಮ ಕಾಗವಾಡದಲ್ಲಿ ಜರುಗಿತು.

ಕಾಗವಾಡ ವಲಯ ಮಟ್ಟದ 105 ಪ್ರಾಥಮಿಕ ಮತ್ತು ಪ್ರೌಢಶಾಲೆಯ 3500 ವಿದ್ಯಾರ್ಥಿಗಳು ಸ್ಥಳೀಯ ಸರ್ಕಾರಿ ಶಾಲಾ ಆವರಣದಲ್ಲಿ ಒಂದುಗುಡಿ ಭಾರತ ಸ್ಕೌಟ್ ಆ್ಯಂಡ್ ಗೈಡ್ ಸಂಸ್ಥಾಪಕರ ದಿನಾಚರಣೆ ಆಚರಿಸಿದರು.

ಮಹಾತ್ಮಾ ಗಾಂಧಿಜಿ ಮತ್ತು ಇಂದಿರಾ ಗಾಂಧಿ ಮತ್ತು ಸ್ಕೌಟ್ ಆ್ಯಂಡ್ ಗೈಡ್ ಸಂಸ್ಥಾಪಕ ಬೆಡೆನ್ ಪಾವೆಲ್ ಇವರ ಜನ್ಮ ಜಯಂತಿ ಅಂಗವಾಗಿ ಜಾತಾ ಕಾರ್ಯಕ್ರಮ ಹಮ್ಮಿಕೊಂಡಿದ್ದರು.

ಕಾಗವಾಡ ಬಿಇಒ ಎ.ಎಸ್.ಜೋಡಗೇರಿ ಇವರು ಧ್ವಜಾರೋಹಣ ನೆರವೇರಿಸಿದರು. ಸ್ಕೌಟ್ ಆ್ಯಂಡ್ ಗೈಡ್ ಜಿಲ್ಲಾ ಖಜಾಂಚಿ ಸಿ.ಎಂ.ಸಾಂಗಲೆ, ಜಿಲ್ಲಾ ತರಬೇತಿಗಾರರಾದ ಆರ್.ಎ.ನಿಂಬಾಳ್ಕರ ಮತ್ತು ತಾಲೂಕಾ ಕಾರ್ಯದರ್ಶಿ  ಎಂ.ಕೆ.ಕಾಂಬಳೆ ಇವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.

ಚಿಕ್ಕೋಡಿ ಜಿಲ್ಲಾ ಸ್ಕೌಟ್ ಆ್ಯಂಡ್ ಗೈಡ್ ಮುಖ್ಯ ತರಬೇತಿಗಾರರಾದ ಆರ್.ಎ.ನಿಂಬಾಳ್ಕರ ಇವರು ಮಾತನಾಡುವಾಗ ಇದರ ಸಂಸ್ಥಾಪಕ ಬೆಡೆನ್ ಪಾವೆಲ್ ಕೇವಲ 20 ಮಕ್ಕಳಿಂದ ಪ್ರಾರಂಭಿಸಿದ್ದರು. ಇದು ಈಗ ಇಡಿ ವಿಶ್ವದಲ್ಲಿ 3 ಮಿಲಿಯನ್ ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ. ಈ ಸಂಸ್ಥೆ ಕಾರ್ಯ ಮಕ್ಕಳಿಂದ ಯಾವ ರೀತಿ ಸಮಾಜ ಸೇವೆ ಮಾಡಬಹುದೆಂದು ನಿರ್ದೇಶನವಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿ  ಶಿಸ್ತಿನ ಪಾಲನೆ ಮಾಡಿದರೆ ನಿಮ್ಮ ಜೀವನ ಸುಗಮವಾಗಲಿದೆ. ಸ್ಕೌಟ್ ಆ್ಯಂಡ್ ಗೈಡ್ ವಿದ್ಯಾರ್ಥಿಗಳು ಸಮಾಜದ ದಾರಿದೀಪವಾಗಿದ್ದಾರೆ ಎಂದು ಹೇಳಿದರು.

ಸ್ಕೌಟ್ ಆ್ಯಂಡ್ ಗೈಡ್ ಜಿಲ್ಲಾ ಖಜಾಂಚಿ ಮತ್ತು ಜಿಲ್ಲಾ ಕ್ಷೇತ್ರ ಪರಿವೇಕ್ಷಕ ಅಧಿಕಾರಿ ಸಿ.ಎಂ.ಸಾಂಗಲೆ ಮಾತನಾಡುವಾಗ, ಈ ಸಂಸ್ಥೆ ವಿದ್ಯಾರ್ಥಿಗಳು ಸೇವಾ ಮನೋಭಾವ ಬೆಳಿಸಿಕೊಳ್ಳಬೇಕು, ಶಿಸ್ತಿನ ಶಿಪಾಯಿರಾಗಿ ಬಾಳಬೇಕೆಂಬ ಉದ್ದೇಶದಿಂದ ಬೆಡೆನ್ ಪಾವೇಲ್ ಇವರು ನಿವೃತ್ತ ಹೊಂದ ನಂತರ ಮಕ್ಕಳನ್ನು ಒಂದುಗುಡಿಸಿ ಸ್ಕೌಟ್ ಆ್ಯಂಡ್ ಗೈಡ್ ಪ್ರಾರಂಭಿಸಿದ್ದರು. ಇದು ಇಂದಿನ ಯುವಕರಿಗೆ ದಾರಿದೀಪವಾಗಲಿದೆ. ಕೆಲವರು ದುಷ್ಟ ಸಂಗತಿಗೆ ಒಳಗೊಂಡು ತಮ್ಮ ಜೀವನ ಆತ್ಮಹತ್ಯೆದೊಂದಿಗೆ ಕಳೆದುಕೊಳ್ಳುವ ಮನೋಭಾವನೆ ಬೆಳಿಸಿಕೊಳ್ಳುತ್ತಿದ್ದಾರೆ. ಇದು ಗಂಭೀರ ಸ್ಥಿತಿ. ಇದನ್ನು ತಡೆಗಟ್ಟಲು ಈ ಸಂಸ್ಥೆ ನೀಡುವ ಮಾರ್ಗದರ್ಶನ ದಾರಿದೀಪವಾಗಲಿದೆ ಎಂದರು. ಉಗಾರದ ಜೈ ಜಿನೇಂದ್ರ ಶಿಕ್ಷಣ ಸಂಸ್ಥೆಯ 18, ಕಾಗವಾಡದ ವಿದ್ಯಾಸಾಗರ ಶಿಕ್ಷಣ ಸಂಸ್ಥೆಯ 2 ವಿದ್ಯಾರ್ಥಿಗಳು ಸ್ಕೌಟ್ ಆ್ಯಂಡ್ ಗೈಡ್ ರಾಜ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಇವರನ್ನು ಅಧಿಕಾರಿಗಳು ಸನ್ಮಾನಿಸಿದರು.

ಸಮಾರಂಭದಲ್ಲಿ ಸ್ಕೌಟ್ ಆ್ಯಂಡ್ ಗೈಡ್ ಮಾಸ್ಟರ್ಗಳಾದ ರಾಜಾರಾಮ ಲಂಗೋಟೆ, ನೇತಾಜಿ ತಳವಾರ, ಪ್ರವೀಣ ಕಲ್ಲೋಳೆ, ವರ್ಧಮಾನ ಖಂಡೆರಾಜುರಿ, ಎಸ್.ಎಸ್.ಗಡೆನ್ನವರ, ಎ.ವ್ಹಿ.ಮುಜಾವರ, ಎಸ್.ಸಿ.ಯಾದವಾಡೆ, ಸೇರಿದಂತೆ ಅನೇಕರು ವಿದ್ಯಾಸಾಗರ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ವೈ.ಡಿ.ಮಾಲಗಾಂವೆ, ಎಸ್.ಪಿ.ಪಾಟೀಲ ಇವರ ಉಪಸ್ಥಿತಿಯಲ್ಲಿ ಆಹಾರ ನಿರ್ಮಿತಿ ಬಗ್ಗೆ ಮಾಹಿತಿ ನೀಡಿದರು.