ಲೋಕದರ್ಶನವರದಿ
ಧಾರವಾಡ 26: ವೈಜ್ಞಾನಿಕ ಮತ್ತು ವೈಚಾರಿಕವಾಗಿ ಆಲೋಚನೆ ಮಾಡುವ ಕ್ರಮವನ್ನು ಕಲಿತಾಗ ಮಾತ್ರ ಮಹಾತ್ಮಗಾಂಧಿ, ಬಾಬು ಜಗಜೀವನರಾಮ್ ಮತ್ತುಅಂಬೇಡ್ಕರ್ ಅಷ್ಟೇ ಅಲ್ಲದೇ ಜಗತ್ತಿನ ಎಲ್ಲಾ ವಿಷಯಗಳನ್ನು ಗ್ರಹಿಸಲು ಸಾಧ್ಯ ಎಂದು ಕನರ್ಾಟಕ ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವ ಸಭಾಭವನದಲ್ಲಿ ಆಯೋಜಿಸಿದ್ದ ಡಾ.ಬಾಬು ಜಗಜೀವನರಾಮ್ಅವರ 112 ನೇ ಜಯಂತಿಯ ಉದ್ಘಾಟಿಸಿ ಮಾತನಾಡಿದ ತುಮಕೂರು ವಿವಿಯ ಡಾ. ಬಾಬು ಜಗಜೀವನರಾಮ್ ಅಧ್ಯಯನ, ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ ಕಛೇರಿಯ ಮೇಲುಸ್ತುವಾರಿ ಅಧ್ಯಕ್ಷರಾದ ಪ್ರೊ.ಕೆ.ಬಿ ಸಿದ್ದಯ್ಯ ಹೇಳಿದರು.
ಆದರೆ ಬಲಿಷ್ಠ ನಾಯಕನಾದವನುತನ್ನಜಾತಿಯವರನ್ನುದೂರ ತಳ್ಳಿ ರಾಷ್ಟ್ರದ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಾನೆ. ಗಾಂಧಿ, ಅಂಬೇಡ್ಕರ್ ಮತ್ತು ಬಾಬು ಜಗಜೀವನರಾಮ್ಅವರನ್ನು ಕೇವಲ ವ್ಯಕ್ತಿಗಳಾಗಿ ನೋಡದೇ ಬಹುವಾಗಿ ನೋಡಿದಾಗ ಮಾತ್ರಅವರ ನೈಜ ವ್ಯಕ್ತಿತ್ವ ತಿಳಿದುಕೊಳ್ಳಲು ಸಾಧ್ಯ.ಕೆಲ ಸಂದರ್ಭಗಳಲ್ಲಿ ಭಾವನಾತ್ತಮಕವಾಗಿ, ಸಂದಭರ್ೋಚಿತವಾಗಿ ಹೇಳಿದ ಹೇಳಿಕೆಗಳನ್ನು ತತ್ವಗಳನ್ನಾಗಿ ಮಾಡಿ ವಿರೋಧಿಗಳನ್ನು ಸೃಷ್ಠಿಸಬಾರದು" ಎಂಬ ಸಲಹೆ ನೀಡಿದರು.
ತುತರ್ು ಪರಿಸ್ಥಿತಿಯ ಸಂದರ್ಭದಲ್ಲಿ ಅಂದಿನ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿಯವರಿಗೆ "ಪ್ರಜಾಪ್ರಭುತ್ವ ಘೋಷಿಸುವ ಬದಲು ತುತರ್ುಪರಿಸ್ಥಿತಿ ಘೋಷಿಸಿದ್ದು ಅವಮಾನಕಾರಿಯಾದ ವಿಷಯ; ಹಾಗಾಗಿ ನಾನು ಪಕ್ಷವನ್ನು ತೊರೆಯುತ್ತಿದ್ದೇನೆ" ಎಂದು ಡಾ. ಬಾಬೂಜಿ ಪ್ರಧಾನಿಗೆ ಪತ್ರ ಬರೆದಿದ್ದರು.ಅಂದರೆ ಅವರು ಪ್ರಜಾಪ್ರಭುತ್ವದ ಆರಾಧಕರಾಗಿದ್ದರು ಎಂಬುದು ಈ ಮೂಲಕ ಸಾಬೀತಾಗುತ್ತದೆ. ಗಾಂಧೀಜಿ, ಡಾ.ಬಾಬೂಜಿ ಮತ್ತು ಡಾ.ಅಂಬೇಡ್ಕರ್ಅವರ ವಿಚಾರಧಾರೆಗಳನ್ನು ತ್ರಿಕೋನ ದೃಷ್ಠಿಯಲ್ಲಿ ನೋಡಿದಾಗ ಮಾತ್ರ ಅರ್ಥವಾಗುವಂತವು ಎಂದರು.
ಗೌರವಾನ್ವಿತ ಅತಿಥಿಗಳಾಗಿ ಆಗಮಿಸಿದ್ದ ಕವಿವಿ ಕುಲಸಚಿವ ಪ್ರೊ.ಸಿ.ಬಿ. ಹೊನ್ನು ಸಿದ್ಧಾರ್ಥ ಮಾತನಾಡಿ, ಅಸ್ಪೃಶ್ಯ ವ್ಯಕ್ತಿಯೊಬ್ಬ ಉಪಪ್ರಧಾನಿ ಹುದ್ದೆ ಪಡೆಯುವದು ಸುಲಭವಲ್ಲ.
ಅಂತಹ ಸಂದರ್ಭದಲ್ಲಿ ಡಾ. ಬಾಬೂಜಿ ತಮ್ಮ ವ್ಯಕ್ತಿತ್ವ, ಕಾರ್ಯವೈಖರಿಯ ಮೂಲಕ ಅಂದಿನ ಉಪಪ್ರಧಾನಿ ಹುದ್ದೆಗೇರಿದ್ದು ನಮಗೆಲ್ಲ ಹೆಮ್ಮೆಯ ಸಂಗತಿಎಂದರು. ಆಥರ್ಿಕವಾಗಿ ಸಮಾನತೆ, ಉನ್ನತ ಹುದ್ದೆ ಪಡೆದಾಗಿಯೂ ಜಾತೀಯತೆ ದೃಷ್ಠಿಯಿಂದ ಈಗಲೂ ಕೀಳಾಗಿ ನೋಡುತ್ತಿರುವದು ವಿಷಾದನೀಯ ಎಂದರು. ಜಾತಿ ವ್ಯವಸ್ಥೆ ನಿಮರ್ೂಲನೆ ಆಗುವವರೆಗೂ ಮೀಸಲಾತಿ ಅಸ್ತಿತ್ವದಲ್ಲಿರುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕವಿವಿಯ ಕುಲಪತಿ ಪ್ರೊ.ಪ್ರಮೋದ ಭೀ.ಗಾಯಿ ಮಾತನಾಡಿ, ಇದು ಕೇವಲ ಶೈಕ್ಷಣಿಕಜಯಂತಿಯಾಗಿರದೇ, ಆಧ್ಯಾತ್ಮಿಕ ಹಾಗೂ ಸಾಮಾಜಿಕಕಾರ್ಯಕ್ರಮವಾಗಿದೆಎಂದರು.ಈ ವೇಳೆ ಪ್ರತ್ಯೇಕವಾಗಿಡಾ.ಬಾಬು ಜಗಜೀವನರಾಮ್ಅಧ್ಯಯನ, ಸಂಶೋಧನಾ ಮತ್ತು ವಿಸ್ತರಣಾಕೇಂದ್ರ ಕಟ್ಟಡ ಸ್ಥಾಪಿಸಲು ರಾಜ್ಯ ಸಕರ್ಾರಕ್ಕೆ 12 ಕೋಟಿ ರೂ ನೀಡುವಂತೆ ಪ್ರಸ್ತಾವ ಸಲ್ಲಿಸಲಾಗಿದೆ, ಈಗಾಗಲೇ 2ಕೋಟಿ ರೂ ಬಿಡುಗಡೆಗೊಂಡಿದ್ದು, ಆ ಅನುದಾನವನ್ನುಅಧ್ಯಯನ ಪೀಠದ ಕಾರ್ಯಚಟುವಟಿಕೆಗಳಿಗಾಗಿ ಬಳಸಿಕೊಳ್ಳಲಾಗಿದೆ" ಎಂದರು.
ಈ ವೇಳೆ ಉದ್ಘಾಟಕರಾಗಿ ಆಗಮಿಸಿದ್ದ ಸಾಹಿತಿ ಪ್ರೊ.ಕೆ. ಬಿ. ಸಿದ್ದಯ್ಯ ಅವರನ್ನು ಸನ್ಮಾಸಿಸಲಾಯಿತು.ಕಾರ್ಯಕ್ರಮದಲ್ಲಿ ಡಾ.ಬಾಬೂಜಿ ಅವರ ಕುರಿತು ಡಾ.ಎನ್. ವಾಯ್.ಮಟ್ಟಿಹಾಳ ರಚಿಸಿದ ಹಾಡನ್ನು ಆಕಾಶವಾಣಿ ಗಾಯಕರಾದ ಸುನಿತಾರಾಜ್ ಸುಶ್ರಾವ್ಯವಾಗಿ ಹಾಡಿದರು. ಕವಿವಿಯ ಮೌಲ್ಯಮಾಪನ ಕುಲಸಚಿವ ಪ್ರೊ.ಎಮ್.ಎನ್ ಸಾಲಿ, ವಿತ್ತಾಧಿಕಾರಿ ಪ್ರೊ.ಆರ್.ಎಲ್. ಹೈದರಾಬಾದ್ ವೇದಿಕೆ ಮೇಲಿದ್ದರು.
ಕಾರ್ಯಕ್ರಮದಲ್ಲಿ ಕು.ಅಮಿತ್ ಪ್ರಾಥರ್ಿಸಿದರು, ಡಾ. ವಾಯ್.ಬಿ. ದಳಪತಿ ನಿರೂಪಿಸಿದರು. ಪ್ರೊ.ಎ.ಬಿ. ವೇದಮೂತರ್ಿ ವಂದಿಸಿದರು.