ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಜ್ಞಾನ ದಿನಾಚರಣೆ ನಿಮಿತ್ತ ಆಯೋಜಿಸಿದ್ದ ವಿಜ್ಞಾನ ವಸ್ತು ಪ್ರದರ್ಶನ

Science material exhibition organized on the occasion of Science Day in Government Senior Primary Sc

ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಜ್ಞಾನ ದಿನಾಚರಣೆ ನಿಮಿತ್ತ ಆಯೋಜಿಸಿದ್ದ ವಿಜ್ಞಾನ ವಸ್ತು ಪ್ರದರ್ಶನ  

ಧಾರವಾಡ 01 : ಹೈಡ್ರಾಲಿಕ್ ಬ್ರಿಡ್ಜ್‌, ಹೋಮ್ಸ್‌ ಲಾ, ನ್ಯೂಟನ್ ಚಲನೆಯ ನಿಯಮಗಳು, ಸೌರವ್ಯೂಹ, ಎಗ್ ಇನ್‌ಕ್ಯುಬೇಟರ್, ಗ್ರಹಣದ ಮಾದರಿಗಳು, ಬೆಳಕಿನ ವಕ್ರೀಭವನ, ರಾಮನ್ ಎಪೆಕ್ಟ್‌, ಮನುಷ್ಯನ ಅಂಗರಚನೆ. ಸ್ಮಾರ್ಟ್‌ ಸಿಟಿಗೆ ಆಧುನಿಕ ತಂತ್ರಜ್ಞಾನ ಬಳಕೆ ರಚನೆ ತೋರಿಸುವ ಮಾದರಿ, ದೂರದ ವಸ್ತುಗಳನ್ನು ದೊಡ್ಡದಾಗಿ ತೋರಿಸುವ ದೂರದರ್ಶಕ, ಮಳೆನೀರು ಕೊಯ್ಲು ಮಾದರಿ, ನಾನಾ ಕೃಷಿ ಕುರಿತು ಮಾಹಿತಿಯನ್ನು ವಿದ್ಯಾರ್ಥಿಗಳು ತಾ ಮುಂದು ನೀ ಮುಂದು ಎಂದು ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರಾತ್ಯಕ್ಷಿಕೆ ನೀಡುತ್ತಿರುವುದು ಕಂಡುಬಂದಿತು.   

ಇದು ಮಾದನಭಾವಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಜ್ಞಾನ ದಿನಾಚರಣೆ ನಿಮಿತ್ತ ಆಯೋಜಿಸಿದ್ದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಕಂಡು ಬಂದ ದೃಶ್ಯ. ಶಾಲೆಯ ಶಿಕ್ಷಕರಿಗೆ, ಸ್ನೇಹಿತರಿಗೆ, ಅಥಿತಿಗಳಿಗೆ ವಿಜ್ಞಾನದ ವಿವರಣೆಯನ್ನು ಉತ್ಸಾಹದಿಂದ ಮಕ್ಕಳು ಮನವರಿಕೆ ಮಾಡಿದರು.ವಿದ್ಯಾರ್ಥಿಗಳು ಮುಂದೆ ವಿಜ್ಞಾನಿಯಾಗಿ ಸ್ಥಳೀಯ ತಂತ್ರಜ್ಞಾನ ಬಳಸಿಕೊಂಡು ಬಾಹ್ಯಾಕಾಶದಂತೆ ಬೇರೆ ಬೇರೆ ಕ್ಷೇತ್ರದಲ್ಲಿ ಸಾಧನೆ ಮಾಡಲಿ ಎಂದು ಎಂದು ಕ್ಷೇತ್ರ ಸಮನ್ವಯಾಧಿಕಾರಿಗಳಾದ ಕುಮಾರ್ ಕೆ ಎಫ್ ಮಕ್ಕಳಿಗೆ ಕರೆ ನೀಡಿದರು.   

ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯಲ್ಲಿ ಉಪನ್ಯಾಸಕರಾಗಿ ಮಾತನಾಡುತ್ತಾ ಸ್ಥಳಿಯ ತಂತ್ರಜ್ಞಾನದ ವಿಧಾನದ ಮೂಲಕ ಇಂದು ಜಾಗತಿಕ ಸಾಧನೆ ಮೂಲಕ ಬಾಹ್ಯಾಕಾಶದ ಉದಾಹರಣೆಯಾಗಿದೆ. ನಮ್ಮ ವಿದ್ಯಾರ್ಥಿಗಳು ಮುಂದೆ ಜಾಗತಿಕ ನಾಯಕತ್ವಕ್ಕಾಗಿ ಭಾರತೀಯ ಯುವಕರನ್ನು ಸಬಲೀಕರಣಗೊಳಿಸುವುದು. ಸ್ಥಳೀಯ ತಂತ್ರಜ್ಞಾನ ಬಳಸಿಕೊಂಡು ಬಾಹ್ಯಾಕಾಶದಂತೆ ಬೇರೆ ಬೇರೆ ಕ್ಷೇತ್ರದಲ್ಲಿ ಸಾಧನೆ ಮಾಡಲಿ ಎಂದರು. ವಿಜ್ಞಾನವಿಲ್ಲದೆ  ಸಮಾಜ  ಮುಂದುವರಿಯಲು  ಸಾಧ್ಯವಿಲ್ಲ ವೈಜ್ಞಾನಿಕ ಮನೋಭಾವ  ಬೆಳೆಸಿಕೊಳ್ಳಬೇಕೆಂದರು. ವಿಜ್ಞಾನದ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವುದೇ ರಾಷ್ಟ್ರೀಯ ವಿಜ್ಞಾನ ದಿನದ  ಮೂಲ ಆಶಯ ಹಾಗೂ ಭಾರತವು ಬಾಹ್ಯಾಕಾಶದಲ್ಲಿ  ವಿದೇಶಿಯರನ್ನು ಮೀರಿಸಿದೆ ಎಂದರುಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ಎಸ್‌.ವಿ.ಸಂತಿ ಮಾತನಾಡುತ್ತಾ ಮಾತನಾಡುತ್ತಾ. ಮಾನವ ಕಲ್ಯಾಣಕ್ಕಾಗಿ ವಿಜ್ಞಾನ ಕ್ಷೇತ್ರದಲ್ಲಿ ಎಲ್ಲಾ ಚಟುವಟಿಕೆಗಳು, ಪ್ರಯತ್ನಗಳು ಮತ್ತು ಸಾಧನೆಗಳನ್ನು ಪ್ರದರ್ಶಿಸುವುದು ಇದರ ಉದ್ದೇಶ. ಈ ದಿನದ ಮೂಲ ಉದ್ದೇಶವೆಂದರೆ ವಿದ್ಯಾರ್ಥಿಗಳಿಗೆ ಹೊಸ ಪ್ರಯೋಗಗಳನ್ನು ಮಾಡುವಂತೆ ಪ್ರೇರೇಪಿಸುವುದು. ಅವರನ್ನು ವಿಜ್ಞಾನದತ್ತ ಆಕರ್ಷಿಸುವುದು ಮತ್ತು ವೈಜ್ಞಾನಿಕ ಸಾಧನೆಗಳ ಬಗ್ಗೆ ಅರಿವು ಮೂಡಿಸುವುದು. ಎಲ್ಲಾ ಸಮಸ್ಯೆಗಳನ್ನು ಚರ್ಚಿಸಲು ಮತ್ತು ವಿಜ್ಞಾನದ ಅಭಿವೃದ್ಧಿಗೆ ಹೊಸ ತಂತ್ರಜ್ಞಾನಗಳನ್ನು ಜಾರಿಗೆ ತರಲು ದೇಶದ ವೈಜ್ಞಾನಿಕ  ಮನಸ್ಸಿನ ನಾಗರಿಕರಿಗೆ ಅವಕಾಶ ನೀಡುವುದು. ಜನರನ್ನು ಪ್ರೋತ್ಸಾಹಿಸುವುದರ ಜೊತೆಗೆ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಜನಪ್ರಿಯಗೊಳಿಸುವುದು ಈ ದಿನದ ಆಶಯವಾಗಿದೆ.  

ಪ್ರಾತ್ಯಕ್ಷಿಕೆ; ಶಿಕ್ಷಕರ ಮಾರ್ಗದರ್ಶನದಲ್ಲಿ ಹೃದಯ-ಶ್ವಾಸಕೋಶ, ಕಶೇರುಕ, ಅಕಶೇರುಕ ಜೀವಿಗಳ ನಮೂನೆಯಗಳು ಪರಮಾಣು ಮಾದರಿ ರಚನೆ, ಸೌರ ಮಂಡಲದ ಕಾಯಗಳು, ಪೆಟ್ರೋಲ್ ಹಾಗೂ ಡಿಸೆಲ್ ಎಂಜಿನ್‌ಗಳ ಕಾರ್ಯವೈಖರಿ, ಅಸಂಪ್ರದಾಯಕ ಶಕ್ತಿಯ ಮೂಲಗಳು ಮತ್ತು ಉಪಯೋಗ, ರಾಕೆಟ್ ಎಂಜಿನ್ ಕಾರ್ಯ ವಿಧಾನ,   ಹೀಗೆ ಮುಂತಾದ ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರಾತ್ಯಕ್ಷಿಗಳನ್ನು  ಎರಿ​‍್ಡಸುವ ಮೂಲಕ ಶಾಲೆಯ ವಿದ್ಯಾರ್ಥಿಗಳಿಗೆ ತಿಳವಳಿಕೆ ಮನದಟ್ಟು ಮಾಡಿದರು. ಇವರು ವಿದ್ಯಾರ್ಥಿಗಳಿಗೆ ವಿಜ್ಞಾನ ಜ್ಞಾನಾರ್ಜನೆಗೊಸ್ಕರ ಕಲಿಕಾ ಉಪಕರಣ ಮಾದರಿಗಳ ಪ್ರಾತ್ಯಕ್ಷಿಕೆ ಮಾಡಿದರು. ಇಷ್ಟೇ ಅಲ್ಲದೇ 1ನೇ ತರಗತಿ ಮತ್ತು 7ನೇ ತರಗತಿ ಮಕ್ಕಳೆಲ್ಲರೂ ಸೇರಿಕೊಂಡು  ವಿದ್ಯುತ್ ಉತ್ತಮ ಮತ್ತು ದುರ್ಬಲ ವಾಹಕ, ವಿದ್ಯುತ್ ಗಂಟೆ, ವಿಕ್ರಮ್ ಲ್ಯಾಂಡರ್, ಮಾನವನ ಜೀರ್ಣಾಂಗವ್ಯೂಹ, ಗಾಳಿಗೆ ಒತ್ತಡವಿದೆ, ವಾಟರ್ ಫಿಲ್ಟರ್ ಮಾದರಿ, ಜಲಚಕ್ರ, ಮೈಕ್ರೋಸ್ಕೋಪ್, ವಾಯುವಾಲಿನ್ಯ ನಿಯಂತ್ರಣ ಮೊದಲಾದ ಮಾದರಿಗಳನ್ನು ತಯಾರಿಸುವ ಮೂಲಕ ಕಾರ್ಯಕ್ರಮದಲ್ಲಿ ಉತ್ಸಾಹಪೂರ್ವಕವಾಗಿ ಭಾಗವಹಿಸಿದರು.  

ಲೂಸಿ ಸಾಲ್ಡಾನಾ ಕಾರ್ಯ ಶ್ಲಾಘನೀಯ. ಅವರ ಬದುಕು ಕುರಿತು ಕೃತಿ ಮಾತ್ರವಲ್ಲದೇ ಚಲನಚಿತ್ರ ತೆಗೆದಿರುವುದು ಮಾದರಿ ಕಾರ್ಯ ಎಂದು ಎಲ್ ಆಯ್ ಲಕ್ಕಮ್ಮನವರ ಹೇಳಿದರು ಹಾಗೂ ಅವರಿಗೆ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.ವಿಜ್ಞಾನ ದಿನಾಚರಣೆಯ ಪ್ರಯುಕ್ತ ಶಾಲಾ ವಿದ್ಯಾರ್ಥಿಗಳಿಗಾಗಿ ವಿಜ್ಞಾನ ಮಾದರಿ ತಯಾರಿಸುವ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಯಿತು. ವಿಜೇತರರಿಗೆ ಪ್ರಶಸ್ತಿ ಪತ್ರ ಹಾಗೂ ಬಹುಮಾನ ವಿತರಿಸಲಾಯಿತು. 

ಸಿಆರ್‌ಪಿಗಳಾದ ಎಮ್ ಕುರ್ಲಿ ಮುಖ್ಯೋಪಾಧ್ಯಾಯರಾದ  ಆನಂದ ಲಮಾಣಿ ಹಿರಿಯ ಶಿಕ್ಷಕರಾದ ಬಸವರಾಜ ಹುರಕಡ್ಲಿ ಮತ್ತು ಪಿ. ಆರ್  ಜವಳಿ ಮತ್ತು ಶಾಲಾ ಸಿಬ್ಬಂದಿಗಳು 

ಚನ್ನಬಸಪ್ಪ ಗುಳದ ಕೊಪ್ಪ, ಪಾಲಕರು,ವಿದ್ಯಾರ್ಥಿಗಳು ಭಾಗವಹಿಸಿದರು. ವಿಜ್ಞಾನ ದಿನಾಚರಣೆಯ ಪ್ರಯುಕ್ತ ಶಾಲಾ ವಿದ್ಯಾರ್ಥಿಗಳಿಗಾಗಿ ವಿಜ್ಞಾನ ಮಾದರಿ ತಯಾರಿಸುವ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಯಿತು. ವಿಜೇತರರಿಗೆ ಪ್ರಶಸ್ತಿ ಪತ್ರ ಹಾಗೂ ಬಹುಮಾನ ವಿತರಿಸಲಾಯಿತು. 

      

ವಿದ್ಯಾರ್ಥಿಗಳು ಮುಂದೆ ವಿಜ್ಞಾನಿಯಾಗಿ ಸ್ಥಳೀಯ ತಂತ್ರಜ್ಞಾನ ಬಳಸಿಕೊಂಡು ಬಾಹ್ಯಾಕಾಶದಂತೆ ಬೇರೆ ಬೇರೆ ಕ್ಷೇತ್ರದಲ್ಲಿ ಸಾಧನೆ ಮಾಡಲಿ ಎಂದು ಎಂದು ಕ್ಷೇತ್ರ ಸಮನ್ವಯಾಧಿಕಾರಿಗಳಾದ ಕುಮಾರ್ ಕೆ ಎಫ್ ಮಕ್ಕಳಿಗೆ ಕರೆ ನೀಡಿದರು. ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ಎಸ್‌.ವಿ.ಸಂತಿ ಮಾತನಾಡುತ್ತಾ ಮಾತನಾಡುತ್ತಾ. ಮಾನವ ಕಲ್ಯಾಣಕ್ಕಾಗಿ ವಿಜ್ಞಾನ ಕ್ಷೇತ್ರದಲ್ಲಿ ಎಲ್ಲಾ ಚಟುವಟಿಕೆಗಳು, ಪ್ರಯತ್ನಗಳು ಮತ್ತು ಸಾಧನೆಗಳನ್ನು ಪ್ರದರ್ಶಿಸುವುದು ಇದರ ಉದ್ದೇಶ ಎಂದರು.  

ವಿಜ್ಙಾನ ಸೆಲ್ಪಿ ಸ್ಯಾ-್ಟಂಡ್ ಹಾಗೂ ಶಾಲೆಯಲ್ಲಿ ವಿಜ್ಞಾನ ದಿನಾಚರಣೆ ನಿಮಿತ್ತ ಆಯೋಜಿಸಿದ್ದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಕಂಡು ಬಂದ ದೃಶ್ಯ. ಶಾಲೆಯ ಶಿಕ್ಷಕರಿಗೆ, ಸ್ನೇಹಿತರಿಗೆ, ಅಥಿತಿಗಳಿಗೆ ವಿಜ್ಞಾನದ ವಿವರಣೆಯನ್ನು ಉತ್ಸಾಹದಿಂದ ಮಕ್ಕಳು ಮನವರಿಕೆ ಮಾಡಿದರು.